ಪುಟ:ಜಗನ್ಮೋಹಿನಿ .djvu/೧೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫೬ ಜಗನ್ನೋಹಿನಿ. \ \ \ \ 441 ರಿಗಳನ್ನು ನೋಡಿ “ಎಲೈ, ಸರಿಯಾದ ಮುಹೂರ್ತವು ಬನ್ನೊದಗಿತು. ಇನ್ನು ನೀವು ಆಲಸ್ಯ ಮಾಡಲಾಗದು ; ಮಂಗಳವಾದ್ಯಗಳು ಮೊಳಗಲಿ ! ವಿಜಯೋತ್ಸವವು ವಿಜೃಷ್ಟಣೆಯಿಂದ ನಡೆಯಲಿ.” ಎನ್ನಳು, ಆಕ್ಷಣವೇ ದಿಗಂತಗಳು ಸೆಲೆಯೇಳುವಂತೆ ಜಯಭೇರಿಯ ನಿನಾದವು ಭೋರೆಂದು ಎದ್ದಿತು, ಜಯಲಕ್ಷ್ಮಿಯು ಅಂತರ್ಧಾನಳಾದಳು. ಕತ್ತಲು ಕವಿದಂತೆ ಆಯುಧಪಾಣಿಗಳಾದ ಸೈನಿಕರು ಎತ್ತಣದಿಂದಲೋ ಬಂದು ಪಾರಸೀಕ ಪ್ರಮುಖರನ್ನು ಮುತ್ತಿ ಅರಗಳಿಗೆಯಲ್ಲಿ ಅವರನ್ನು ಸೆರೆಸಂಜರಗಳಲ್ಲಿ ಸೇರಿಸಿಬಿಟ್ಟರು. ಈ ಅಸಾಧಾರಣವಾದ ಕಾಠ್ಯವನ್ನು ನಿರ್ವಹಿಸಿದ ಕಾರಣ ಈ ರಾಜಪುತ್ರನಿಗೆ ಸಂಗ್ರಾಮಸಿಂಹನೆಂಬ ಅನ್ವರ್ಥಕವಾದ ಹೆಸ ರನ್ನು ಕೊಟ್ಟಿರುವರು. ಈತನು. ... ..” ಎನ್ನು ತ್ತಿರುವಷ್ಟರಲ್ಲಿಯೇ ಮೋಹಿನಿಯು “ಎಲೇ, ಚಿತ್ರಲೇಬೇ, ಸಾಕು ಸಾಕಿನ್ನಾ ತನ ಪ್ರತಾಪವು; ನೀನಿನ್ನೇಕೆ ಆ ಮಹಾವೀರನನ್ನು ಚಿತ್ರಿಸುವುದಕ್ಕೆ ಶ್ರಮ ಪಡುತ್ತಿರುವೆ ? ಸಾಕು ಸುಮ್ಮನಿರು, ಆ ವಯಸ್ಸಿನಲ್ಲಿಯೇ ಅಂತಹ ಕ್ಷುಲ್ಲಕೋಪಾಯ ದಿಂದ ಆ ಮಲ್ಲರನ್ನೆಲ್ಲಾ ಮೋಸಗೊಳಿಸಿದ, ರಣಹೇಡಿಯಾದ ಆ ಕ್ಷತ್ರಿ ಯಾಧಮನಿಗೆ ಸಂಗ್ರಾಮಸಿಂಹನೆಂಬ ಹೆಸರನ್ನು ಯಾವ ವಿವೇಕಿಯ ಕೊಟ್ಟಿರಲಾರನು. ವಿವೇಕಿಗಳು ಅವನಿಗೆ ಸರಿಯಾದ ಹೆಸರನ್ನು ಕೊಟ್ಟಿ ರುವ ವಿಷಯದಲ್ಲಿ ಸಂಶಯವೇಯಿಲ್ಲ ; ಆದರೆ, ಬುದ್ಧಿಶಾಲಿಗಳಾರೋ ಅವನಲ್ಲಿ ಕನಿಕರದಿಂದ ಅವನ ಆ ಹೆಸರಿನ ಆದಿಯಲ್ಲಿ ಒಂದಕ್ಷರವನ್ನು ಸೇರಿಸಿರಬಹುದು. ಸಾಕಿನ್ನಾ ತನಚಿತ್ರವನ್ನು ಅತ್ತ ಒಗೆದು ಮತ್ತಾರ ಸ್ನಾ ದರೂ ಬರೆ, ವೀರಕುಮಾರಿಯರು ಅಂತಹ ಕ್ಷತ್ರಿಯಾಧಮನ ಚಿತ್ರವನ್ನು ನೋಡಿದರೆ ಸಖ್ಯೆ ಸ್ನಾನವನ್ನು ಮಾಡಬೇಕು ? ಎದ್ದಳು.