ಪುಟ:ಜಗನ್ಮೋಹಿನಿ .djvu/೧೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವರಾನ್ವೇಷಣ. ೧೬೩ Mws/yyyys/v NF\r\r\/ •Nለለለለ ವುದು. ಇದಲ್ಲದೇ ಉದ್ದೇಸಿಸಿದ ಕಾರ್ಯಜಯಕ್ಕೆ ಮನೋಜಯವೇ ಸೂಚಕ, ಈ ಸಮಯದಲ್ಲಿ ನೀನು ಅಡ್ಡಮಾತುಗಳನ್ನಾಡದೇ ನನಗೆ ಜಾಗ್ರತೆಯಾಗಿ ಆಶೀರ್ವದಿಸು, ನಾನು ಹೊರಡುವೆನು ” ಎನ್ನು ತಾ ಯಿಯ ಕಾಲಿಗೆ ಅಡ್ಡ ಬಿದ್ದನು, ಆಗಲಾ ವೀರಮಾತೆಯು ಅರಗಳಿಗೆ ಅವಾಕ್ಕಾಗಿ ನಿಂತಳು, ಅವಳ ಅಲರ್ಮೋಗವು ವಿಕಸಿತವಾಯಿತು, ಕಣ್ಣು ಗಳಿಂದ ನೀರುಧಾರೆಯಾಗಿ ಸುರಿಯಿತು. ಆಕೆಯ ಕಣ್ಣೀರ ಧಾರೆಯು ತನ್ನ ಪ್ರತಿಜ್ಞೆಯನ್ನು ಪರಿಪಾಲಿಸುವುದಕ್ಕೆ ಉದ್ಯುಕ್ತನಾದ ತನ್ನ ವೀರಕುಮಾರನನ್ನು ಕಂಡ ಅನಂದದಿಂದ ಉಂಟಾಯಿತೋ ಅಥವಾ ತನ್ನ ಪ್ರಾಣಸಮನಾದ ಮಗನನ್ನು ಅಗಲು ವವ್ಯಸನದಿಂದ ಉಂಟಾಯಿತೋ ಹೇಳುವುದಕ್ಕಾಗುವುದಿಲ್ಲ, ಅದೇತಕ್ಕೆಂದರೆ, ಮಹಾವೀರರ ಚರಿತ್ರೆಗಳಿಂದ ಭಾರತೇಯರಾದ ವೀರಮಾತೆಯರಿಗೆ ತಮ್ಮ ಮಕ್ಕಳನ್ನು ರಣರಂಗಕ್ಕೆ ಕಳು ಹಿಸುವುದೊನ್ನು ಮಹೋತ್ಸವವೆಂದು ತಿಳಿಯಬರುತ್ತದೆ, ಆದರೆ, ಹೆತ್ತತಾ ಯಿಯು ತನ್ನ ಮಗುವನ್ನು ಕಯ್ಯಾರ ಮೃತ್ಯುವಿನ ಬಾಯಿಗೆ ತುತ್ತು ಮಾ ಡುವುದೆನ್ನುದು ಸಾಮಾನ್ಯರಿಗೆ ಮನುಷ್ಯ ಸ್ವಭಾವಕ್ಕೆ ವಿರುದ್ಧವಾಗಿ ಕಾ ಣುತ್ತದೆ, ಈ ವಿಷಯದಲ್ಲಿ ವೀರಮಾತೆಯರ ಅಂತಃಕರಣವೇ ಪ್ರಮಾಣ. ಆಗಲಾಮನಸ್ವಿನಿಯು ತಟ್ಟನೆ ಶರಗಿನಿಂದ ಕಣ್ಣೀರನ್ನು ಒರಿಸಿ ಕೊಂಡು ಮಗನನ್ನು ಮೇಲಕ್ಕೆ ಯೆತ್ತಿ, ಮೈಯ್ದಡವಿ, 1 ವಾ, ದೇವರು ನಿನಗೆ ಜಯವನ್ನು ದಯಪಾಲಿಸಲಿ! " ಎನ್ನು ಹರಸಿದಳು. ಕೂಡಲೆ ಆ ವೀರಕುಮಾರನು ಹಿಗ್ಗಿರುಗಿ ನೋಡದೇ ಹೊರಟುಹೋದನು ತಾಯಿಯು, ಸಿಂಹದಮರಿಯಂತೆ ಆ ಗಹನಮಾರ್ಗದಲ್ಲಿ ಪ್ರ ಯಾಣಮಾಡುತ್ತಿದ್ದ ಮಗನನ್ನು ಕಣ್ಣಿಗೆ ಮರೆಯಾಗುವವರೆಗೂ ಎವೆ ಯಿಕ್ಕದೆ ನೋಡುತ್ತಿದ್ದು ಬಳಿಕ ಅಲ್ಲಿಯೇ ಕೈಕಾಲು ಕುಸಿದು ನೆಲಕ್ಕೆ