ಪುಟ:ಜಗನ್ಮೋಹಿನಿ .djvu/೧೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವರಾನ್ವೇಷಣ. ೧೬೯ ಸ್ವೀಕರಿಸುವುದಕ್ಕೆ ಏನೂ ಅಭ್ಯನ್ತರವಿರುವುದಿಲ್ಲ' ಎಂದರು. ಅದಕ್ಕೆ ರಾಜನು, ಮಹಾಸ್ವಾಮಿಾ, ತಾವು ಅಷ್ಟು ಮಾತ್ರ ನನ್ನಲ್ಲಿ ದಯೆಮಾಡಿ ನನ್ನ ಆತಿಥ್ಯವನ್ನು ಸ್ವೀಕರಿಸುವುದಾದರೆ, ತಮಗೆ ಬೇಕಾದ ಆಹಾರ ವನ್ನು ಕೊಡುವೆನು ” ಎನ್ನು, ಅದಕ್ಕೆ ಸನ್ಯಾಸಿಯು " ಸತ್ಯವಾಗಿ ನಮಗೆ ಬೇಕಾದ ಆಹಾರವನ್ನು ಕೊಡುವೆಯೋ ? ಎನ್ನು ಕೇಳಿದನು. ರಾಜನದಕ್ಕೆ 'ಸತ್ಯವಾಗಿ ಕೊಡುವನು' ಎನ್ನನು, ಆಗಲಾ ಕಪಟಿಸನ್ಯಾಸಿಯು, 'ಹಾಗಾದರೆ, ನನಗೆ ಈ ಬಾಲ ಕನ ಮಾಂಸವನ್ನು ತಿನ್ನ ಬೇಕೆಂದು ಅಪೇಕ್ಷೆಯಾಗುತ್ತದೆ. ಆದುದರಿಂದ ಅವನನ್ನು ಜಾಗ್ರತೆಯಾಗಿ ಕೊಯ್ದು ಚೂರುಗಳನ್ನು ಮಾಡಿಕೊಡು ! ಎನ್ನು ಕೇಳಿದನು. ಕರ್ಣಕಠೋರವಾದ ಈ ಯಾಚನೆಯನ್ನು ಕೇಳಿದ ಕೂಡಲೇ ರಾಯನು ನಿಶ್ಚತನನಾಗಿ ಪಿಡಗಿನಿಂದ ಬಡಿಯಲ್ಪಟ್ಟ ಮರದಂತೆ ನಿಂತ ನು. ಆಗ ಆ ಕಪಟಿಸನ್ಯಾಸಿಯ ಮುನಿದು, ಏನಯ್ಯಾ, ಮಹಾರಾ ಜನೇ, “ಮಾತು ಕೊಡುವುದಕ್ಕೆ ಹಿಂದಾಗಿಯೂ ಕೊಟ್ಟ ಮಾತಿನಂತೆ ನಡ ದುಕೊಳ್ಳುವುದಕ್ಕೆ ಮುಂದಾಗಿಯೂ ಇರಬೇಕೆಂಬ ನೀತಿಯನ್ನು ನಿನಗೆ ನಿನ್ನ ಗುರುಹಿರಿಯರಾರೂ ಬೋಧಿಸಲಿಲ್ಲವೋ ? ಕ್ಷುಧಿತರಾದ ಸನ್ಯಾಸಿ ಗಳಿಗೆ ಕೊಟ್ಟ ಮಾತನ್ನು ಪೂರ್ತಿ ಮಾಡುವುದಕ್ಕೆ ಹಿಂದು ಮುತ್ತು ನೋಡುತ್ತಿರುವುದೇಕೆ ? ನೀನಿನ್ನು ಅರಗಳಿಗೆ ತಡಮಾಡಿದ್ದೇ ಆದರೆ, ನಮ್ಮ ಪ್ರಾಣಗಳು ಉಳಿಯುವುದಿಲ್ಲ-ನಿನಗೆ ಯತಿಹತ್ಯವು ತಪ್ಪುವುದಿಲ್ಲ' ಎನ್ನನು. ಆ ಮಾತಿಗೆ ಉತ್ತರವನ್ನು ಕೊಡಲು ಮಹಾರಾಜನಿಗೆ ನಾಲಿ ಗೆಯೇ ಬಾರದೇ ಕತ್ತರಿಸುತ್ತಿರಲು ಅಲ್ಲಿ ಆ ಪಸುಳೆಯು ತಂದೆಯನ್ನು