ಪುಟ:ಜಗನ್ಮೋಹಿನಿ .djvu/೨೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೮೬ ಜಗನ್ನೋಹಿನಿ.

  • * * * * * * * *

ಇ • • • • ••••••- ಬwwsvvಇಂಅನಂತ್ ರೂ ದೇವರೇ ಗತಿ ಎಂದು ಆ ಕಾಡಿನೊಳಕ್ಕೆ ನುಗ್ಗಿ ದಳು, ಸುಮಾ ರು ಎರಡುಗಂಟೆಯ ಹೊತ್ತು ಪ್ರಯಾಣ ಮಾಡಿದ ಬಳಿಕ ಆಕೆಯ ದಾರಿಗೆ ಅಡ್ಡವಾಗಿ ಸಣ್ಣದೊಂದು ಹೊಳೆಯು ಹರಿಯುತ್ತಿದ್ದಿತು. ದೈವಯೋಗದಿಂದ ಅದರಲ್ಲಿ ಆಗ ನೀರು ಅಷ್ಟು ವಿಶೇಷವಾಗಿರಲಿಲ್ಲ. ವಾದುದರಿಂದ ಅದನ್ನು ಅನಾಯಾಸವಾಗಿ ದಾಟಿ ಆಚೆಯ ಕಡೆಗೆ ಸೇರಿದಳು, ಅಲ್ಲಿ ಯಾರೋ ಮವರು ಯುವಕರು ಆಗತಾನೆ ಸ್ಥಾ ನಸಂಧ್ಯಾವಂದನೆಗಳನ್ನು ತೀರಿಸಿಕೊ೦ಡು ಕವಚಾದಿಗಳನ್ನು ಹಾಕಿ ಕೊಳ್ಳುತ್ತಿದ್ದರು. ಚದುರೆಯಾದ ಚಿತ್ರಲೇಖೆಯ. ಅವರ ಆಕಾರ ದಿಂದಲೇ ಅವರನ್ನು ಸಾಧುಗಳೆಂದು ತಿಳಿದುಕೊಂಡಳು ; ಆದಾಗ್ಯೂ ಅವರನ್ನು ಭೇಟಿಮಾಡಿಕೊಳ್ಳುವುದಕ್ಕೆ ಮುಂಚಿತವಾಗಿ, ಅವರ ನಡೆ ನುಡಿಗಳನ್ನು ಕಂಡು ಕೇಳಿ ಅವರ ಶೀಲಸ್ವಭಾವಗಳನ್ನು ನಿರ್ಧರಿಸಿ ಕೊಳ್ಳಬೇಕೆಂದು ಬಗೆದು ಅವರಿಗೆ ಗೋಚರವಾಗದಂತೆ ಅವರ ಸವಿಾ ಪದಲ್ಲಿದ್ದ ಒಂದು ಮೆಳೆಯ ಮರೆಯಲ್ಲಿ ಮೊದಲದೇ ನಿಂತುಕೊಂಡಳು ಆಗ ಅವರಲ್ಲೊಬ್ಬನು ಮತ್ತೊಬ್ಬನನ್ನು ಕುರಿತು ಮಿತ್ರನೇ, ನನ್ನ ನ್ನು ನೀನು ಬೇರೆ ವಿಧವಾಗಿ ಭಾವಿಸಬೇಡ ; ನಾನು ನಿನ್ನನ್ನು ಮಿತ್ರನೆಂದು ಕರೆಯುವುದು ಕೇವಲ ಔಪಚಾರಿಕವೆಂದು ತಿಳಿದಿರುವಿ ಯೋ ? ಅ೦ತಹ ಅನರ್ಥವಾದ ಸಂಬೋಧನೆಗಳನ್ನು ಮಾಡುವುದಕ್ಕೆ ನನ್ನ ಅಂತಃಕರಣವು ಸರ್ವಥಾ ಒಡಂಬಡುವುದಿಲ್ಲ. ಲೋಕದಲ್ಲಿ ಮಿತ್ರನಿಗಿಂತಲೂ ಆಪ್ತ ಕರಾರೂ ಇಲ್ಲ ; ಮಿತ್ರನಲ್ಲಿ ಹೇಳಿಕೊಂಡ ಸುಖವು ಉಕ್ಕುವುದೂ ದುಃಖವು ಕುಗ್ಗು ವುದೂ ಸ್ವಾಭಾವಿಕವಾ ಗಿದೆ. ಹೀಗಿರುವಲ್ಲಿ ನನ್ನ ಸುಖದುಃಖ ಗಳನ್ನು ನಿನ್ನೊಡನೆ ಹೇಳಿಕೆ “ದೇ ಮತ್ಯಾರಲ್ಲಿ ಹೇಳಿಕೊಳ್ಳಲಿ ? ಆದರೆ, ನಾನು ಇದುವರೆಗೂ