ಪುಟ:ಜಗನ್ಮೋಹಿನಿ .djvu/೨೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೯೦ ಜಗನ್ನೋಹಿನಿ. Prryvvvvy rvvv 1• wwwv vvvv vvvvvvvv\ NNyn/vvvvvvvv ಋಷಿವೇಷವನ್ನು ನೋಡಿದಕೂಡಲೇ, ಆ ಒಡೆಯನು ಆಕೆಗೆ ಸಾಷ್ಟಾಂಗ ನಮಸ್ಕಾರವನ್ನು ಮಾಡಿ ಎದ್ದು ಕೃತಾಂಜಲಿಯಾಗಿ ನಿಂತುಕೊಂಡನು. ಆಗ ಚಿತ್ರಲೇಖೆಯು ತನ್ನ ವೇಷಕ್ಕೆ ಅನುಸಾರವಾಗಿ ಆತನನ್ನು ನಿಟ್ಟಿಸಿ ಎಲೈ, ನೀನಾರು ?” ಎಂದು ಕೇಳಿದಳು. ಒಡೆಯ:-ಯೋಗೀಶ್ವರರೇ, ನಾನು ಧರ್ಮವರ್ಮನ ಮಗ ನಾದ ಆದಿತ್ಯ ವರ್ಮನು. ಯೋಗೀಶ್ವರ:- ತಲೆದೂಗಿ, ಓಹೋ ! ಆ ಮಹದ್ವಂಶದಲ್ಲಿ ಹುಟ್ಟಿದವನಾದುದರಿಂದಲೇ ನೀನಿ೦ತಹ ನಡೆನುಡಿಗಳಿಂದ ಅಲಂಕೃತ ನಾಗಿರುವೆ, ಆದಿತ್ಯವರ್ಮ:--ನನ್ನ ಜಿಜ್ಞಾಸೆಯನ್ನು ಮನ್ನಿಸಬೇಕು. ನಾನು ಈಗ ಯಾವ ಮಹಾ ಯೋಗಿಗಳ ಪಾದದರ್ಶನದಿಂದ ಪವಿತ್ರನಾದೆನು ಎಂಬುವುದನ್ನು ತಿಳಿಯಬೇಕೆಂದು ನನ್ನ ಮನವು ಆತುರಪಡುತ್ತಿದೆ. ಯೋಗೀಶ್ವರ:-ಎಲೈ, ನಾನು ಪೂಜ್ಯರಾದ ಕುಶನಾಭರ ಶಿಷ್ಯಾನುಶಿಷ್ಯನು. ಆದಿತ್ಯ:-ವಹಾಸ್ಯಾವಿಾ, ತಾವು ಎಲ್ಲಿಗೆ ಪಯಣಮಾಡು ತಿರುವಿರಿ ? ಯೋಗೀಶ್ವರ:- ಎಲೈ, ನಮ್ಮ ಗುರುಗಳಾದ ಕುಶನಾಭರು ತಮ್ಮ ತಪಸ್ಸಿಗೆ ಮುಂದೆ ಏನೋ ವಿಘಾತವು ಸಂಭವಿಸಬಹುದೆಂದು ತಮ್ಮ ಜ್ಞಾನದೃಷ್ಟಿಯಿಂದ ತಿಳಿದುಕೊಂಡು ನಿನ್ನೆ ರಾತ್ರೆ ಯೋಗಮಾ ರ್ಗದಿಂದ ಬದರಿಕಾಶ್ರಮಕ್ಕೆ ಹೊರಟುಹೋದರು, ನಾನೂ ಅವರ ಶಿಶೂಷೆಗಾಗಿ ಅಲ್ಲಿಗೆ ಹೋಗಬೇಕೆಂದು ಹೊರಟಿರುವೆನು.