ಪುಟ:ಜಗನ್ಮೋಹಿನಿ .djvu/೨೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪಾಣಿಗ್ರಹಣ. ೨೦೧ ಇhy ತಡಮಾಡದೇ ಧರ್ಮರಾಜನ ಬಳಿಗೆ ಅಟ್ಟಿ ಬಿಡು, ಬಳಿಕ ನಾವು ಆ ತಪಸ್ವಿನಿಯ ಗತಿ ಏನಾಯಿತೋ ತಿಳಿದುಕೊಳ್ಳುವ' ಎನ್ದನು. ಅದನ್ನು ಕೇಳಿದ ಕೂಡಲೇ ಆ ಸವಾರನು ಮಿ೦ಚಿನವೇಗದಿಂದ ಬೈರವಾನನ್ದನ ಇದಿರಿಗೆ ಹೋಗಿ, ಅವನನ್ನು ಸುತ್ತಿಕೊಂಡಿದ್ದ ಸೈನಿ ಕರನ್ನು ನೋಡಿ, (ಎಲೈ ಒಬ್ಬನಿಗೆ ಇಷ್ಟು ಜನಗಳು ಸುತ್ತಿಕೊ ಳ್ಳು ವದು ರಾಜನೀತಿಯಲ್ಲ ; ನೀವೆಲ್ಲರೂ ದೂರ ಹೋಗಿ,” ಎನ್ನು ತಾನು ಕುದುರೆಯಿಂದ ಕೆಳಕ್ಕೆ ಇಳಿದು ತನ್ನ ಖಡ್ಗವನ್ನು ಕೈಗೆ ತೆಗೆ ದುಕೊಂಡು, ಅವನನ್ನು ಕುರಿತು, 1 ಎಲೈ, ನಿನಗೀಗ ನಿನ್ನ ದುಷ್ಟ ರ್ಮಗಳ ಪರಿಪಾಕ ಕಾಲವು ಬನ್ನೊದಗಿತು ; ಈಗಲಾದರೂ ನೀನು ಇದುವರೆಗೂ ಮಾಡಿದ ಮಹಾಪಾತಕಗಳಿಗೆ ಪಶ್ಚಾತ್ತಾಪ: ಟ್ಟು ಪರಮದಯಾಳುವಾದ ಭಗವನ್ತನ ಕ್ಷಮಾಪಣೆಯನ್ನು ಕೇಳಿಕೊಳ್ಳು ವದಾದರೆ, ನಿನಗೆ ಒನ್ನು ನಿಮಿಷ ಅವಕಾಶಕೊಡುವೆನು, ದೇವರನ್ನು ಧ್ಯಾನಮಾಡಿಕೋ, ಎನ್ನು ಒನ್ನು ನಿಮಿಷ ಕಾಲ ವಿವಿಧವಾದ ಕತ್ತಿ ಯ ಸಾಧನೆಗಳನ್ನು ಮಾಡುತ್ತಿದ್ದು ಬಳಿಕ ಅವನನ್ನು ಕುರಿತು, ಎಲೈ, ನಾನು ನಿನಗೆ ಕೊಟ್ಟಿದ್ದ ಅವಧಿಯು ಕಳೆದುಹೋಂ..ತು ; ನೀನಿನ್ನು ನಿನ್ನಾ ತ್ಮರಕ್ಷಣೆಗೆ ಜಾಗರೂಕನಾಗಿರತಕ್ಕದ್ದು, ನಾನಿನ್ನು ನಿನ್ನ ನ್ನು ಕಡಿದು ತುಂಡುತುಂಡುಮಾಡದೇ ಬಿಡೆನು.' ಎಂದು ಅವನ ಪರಾಕ್ರಮ ಪ್ರಕಾಶಕ್ಕೆ ಅವಕಾಶವನ್ನು ಕೊಟ್ಟು ಕೊಂಡ ೬ವ ನೊಡನೆ ಅರಗಳಿಗೆ ಹೆಣಗಾಡಿ ಬಳಿಕ ಕೈ ಚಳಕದಿಂದ ಅವನ ತಲೆ ಯನ್ನು ಒಂದೇ ಏಟಿಗೆ ಕತ್ತರಿಸಿದನು, ಆ ವೇಳೆಗೆ ಆ ದುರ್ಗದ ಒತ್ತಟ್ಟಿನಲ್ಲಿ ಒಮ್ಮತ್ತೊಮ್ಮೆ ಹಾಹಾರವವು ಕೇಳಬಂದಿತು, ಈ ಜಯಶಾಲಿಯು ಅದನ್ನು