ಪುಟ:ಜಗನ್ಮೋಹಿನಿ .djvu/೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದುಷ್ಟ ಸಂಹಾರ ೧೫ ಮೊದಲನೆಯ ಸವಾರ:-ಸುಲಿಗೆ ಮಾಡುವುದಕ್ಕೆ ಬಂದಿದೆ ವರಾಗಿದ್ದರೆ, ನಾವು ನೆಲಕ್ಕೆ ಬಿದ್ದ ಕೂಡಲೆ ಅವರು ನಮ್ಮ ಮೇಲೆ ಕತ್ತಿಗಳನ್ನು ಎತ್ತದೇ ಎಲ್ಲರೂ ಏಕರೀತಿಯಾಗಿ ತಮ್ಮ ತಮ್ಮ ಕತ್ತಿಗಳನ್ನು ಒಗೆಯೊಳಗಿರಿಸಿ ಬರಿಗೆಗಳಿಂದ ನಮ್ಮ ಮೇಲೆ ಬಿದ್ದು ನಮ್ಮ ಆಯುಧಗಳನ್ನು ಕಿತ್ತುಕೊಳ್ಳುವುದಕ್ಕೆ ಪ್ರಯತ್ನ ಪಡುತ್ತಿರ ಲಿ, ಇವುಗಳನೆಲ್ಯಾ ಪರ್ಯಾಲೋಚಿಸಿದರೆ, ಅವರಿಗೆ ನಮ್ಮನ್ನು ಕೈಶರೆ ಹಿಡಿದು ಕೊಳ್ಳಬೇಕೆಂಬ ಉದ್ದೇಶವಿದ್ದಂತೆ ತೋರುತ್ತದೆ. ಎರಡನೆಯ ಸವಾರ:-ದಾರಿಗರನು ಕೆರ ಹಿಡಿದು ಕೊಳ್ಳುವುದರಿದ ಆ ಕಳ್ಳರಿಗೆ ಆಗುವ ಫಲವೇನು ? ಮೊದಲನೆಯ ಸವಾರ: -ಸಾಧಾರಣವಾದ ಕಳ್ಳರಿಗೆ ಜನ ರನ್ನು ಕೈಶರೆ ಹಿಡಿಯುವುದರಿಂದ ಫಲವೇನೂ ಇದ್ದ ಹಾಗೆ ತೋ ರುವುದಿಲ್ಲ, ಆದರೆ, ಅವರನ್ನು ಸಾಧಾರಣರಾದ ಕಳ್ಳರೆಂದು ತಿಳಿಯಲಾಗದು; ಸಾಧಾರಣ ಕಳ್ಳರಿಗೆ ಅಂತಹ ಸವಾರರ ಸೈನ್ಯ ವೆಲ್ಲಿಯದು? ವೀರ:-ಹಾಗಾದರೆ, ಅವರಾರಾಗಿರಬಹುದು? ಮೊದಲನೆಯ ಸವಾರ-ಅವರೆಲ್ಲ ರೂ ಆ ಪ್ರಸಿದ್ದ ನಾದ ಭೈರವಾನಂದನೆಂಬ ಪಾಳೆಯಗಾರನ ಕಡೆಯವರಾಗಿರಬಹುದೆಂದು ನನಗೆ ತೋರುತ್ತದೆ. ಎರಡನೆಯ ಸವಾರ:-ಆ ಭೈರವಾನಂದನ ಭಯಂಕರವಾದ ಕಥೆಗಳನ್ನು ನಾವು ಪ್ರತಿದಿನವೂ ಕೇಳುತಿರುವೆವು, ಆದರೆ ಅವುಗಳೆಲ್ಲಾ ಯಥಾರ್ಥವಾದವುಗಳೆಂದು ಯಾರೂ ನಂಬುವುದಿಲ್ಲ. ಮೊದಲನೆಯ ಸವಾರ:-ಅವುಗಳೆಲ್ಲವೂ ಯಥಾರ್ಥವೆಂಬು ದಕ್ಕೆ ನಮ್ಮ ಈದಿನದ ಅನುಭವವೇ ಸಾಲದೆ?