ಪುಟ:ಜಗನ್ಮೋಹಿನಿ .djvu/೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

وو ಜಗನ್ನೊಹಿನೀ

      • * * * * * * * * * * * * * * * * *

• ಇy ಕಣ್ಣು ಕ ಪಟಗಳೂ ಹೊರಹೊರಟು ಮರಗಳ ಮರೆ ಮರೆಯಲ್ಲಿ ಯೇ ಹಾರಾಡುತ್ತಿದ್ದುವು; ಗುಳ್ಳನರಿಗಳು ಗೋಳಾಡುವುದಕ್ಕೆ ಮೊದಲುಮಾಡಿದುವು. ಆ ವೀರ ಮುಖ್ಯರು ಹೊತ್ತು ಬೀಳುವುದಕ್ಕೆ ಮುಂಚಿತ ವಾಗಿಯೇ ಯಾವುದಾದರೂ ಒಂದು ವಸತಿಗೆ ಹೋಗಿ ಸೇರ ಬೇಕೆಂದು ಕುದುರೆಗಳನ್ನು ಅತಿವೇಗವಾಗಿ ಓಡಿಸಿದರು. ನಂದ ಕ್ಕೆ ಹೋದಹಾಗೆಲ್ಲಾ ಅವರ ದಾರಿಯು ಕಿರಿದಾಗುತ್ತಾ ಬಂದು ಕೊನೆ ಕೊನೆಗೆ ಕಾಲುದಾರಿಯಂತಾಯಿತು, ಈ ಮಾರ್ಗವು ಕಡೆಗೆ ಅವರನ್ನು ದುರ್ಗಮವಾದ ಕಾಡಿಗೆ ತಂದು ಸೇರಿಸಿತು. ಈಕಾಡಿನಲ್ಲಿ ಒತ್ತಟ್ಟಿಗೆ ಒಂದು ಸರೋವರವು ಕಾಣಿಸಿತು. ಅದು ಮುಕುಳಿತವಾಗುತ್ತಿದ್ದ ಕಮಲಗಳಿಂದಲೂ ವಿಕಸಿತವಾಗು ತಿದ್ದ ಕನ್ನೈದಿಲೆಗಳಿಂದಲೂ ಭೂ ದೊಳಿಯನ್ನು ಭೇದಿಸಿಕೊಂಡು ಈ ಸುಡುತ್ತಿದ್ದ ಕಲಹಂಸ ಕಾರಂಡವಾದಿ ಪಕ್ಷಿ ಗಳಿಂದಲೂ ಬಹು ರಮಣೀಯವಾಗಿದ್ದಿ ತು, ಇದರ ಸುತ್ತಲೂ ಫಲಭರದಿಂದ ನೆಲಕ್ಕೆ ಬಾಗಿದ್ದ ಫಲವೃಕ್ಷ ಗಳೂ ಹೂ ಎನ್ನ ಗಿಡಗಳೂ ಹೇರಳವಾಗಿ ಬೆಳ ದಿದ್ದುವು. ಅವರು ಅಲ್ಲಿಳಿದು ಕುದುರೆಗಳನ್ನು ಮೇಯಬಿಟ್ಟು ಆ ಸರೋವರದಲ್ಲಿ ಸ್ನಾನಪಾನಾದಿಗಳನ್ನು ಮಾಡತೊಡಗಿದರು. ಆಗ ಅಲ್ಲಿ ಸವಿಾಪದಲ್ಲೆಲ್ಲೊ ಹಠಾತ್ತಾಗಿ ಆರ್ತಸ್ವರವು ಕೇಳ ಬಂದಿತು, ಅವರು ಅದನ್ನು ಕುತುಕದಿಂದ ಕಿವಿಗೊಟ್ಟು ಕೇಳಿದರು. “ಅಯ್ಯಯ್ಯೋ ! ಮುಂದೇನು ಗತಿ ! * ದೇವರೇ ! ಅನಾಥ ಳಾದ ನನ್ನನ್ನು ಈ ದುರುಳರು ಹೀಗೆ ಬಾಧಿಸುತ್ತಿರುವರಲ್ಲಾ! ಏನು ಮಾಡಲಿ ; ಯಾರಿಗೆ ಮೊರೆಯಿಡಲಿ, ಹಾ ವಿಧಿಯೆ, ಜನ್ಮಾಂತ