ಪುಟ:ಜಗನ್ಮೋಹಿನಿ .djvu/೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೦ ಜಗನ್ನೊಹಿನೀ, MM~ \y * * * * * * * * * * * * * * * ಬಂದು 'ನೀವುಗಳು ಇಂದು ನಾ ರ್ಕಾಯಸದಿಂದ ಬಹಳ ಬಳ ಲಿರುವ ಹಾಗೆ ಕಾಣುತ್ತದೆ? ಬನ್ನಿ, ಇಲ್ಲಿ ಕೊಂಚ ಹೊತ್ತು ಕುಳಿತುಕೊಂಡು ಮಾತನಾಡುತ್ತಿರುವ.” ಎಂದು ಇದಿರಿಗೆ ಒತ್ತ ಗಿ ಬೆಳದಿದ್ದ ಹಸುರಾದ ಹುಲ್ಲಿನಮೇಲೆ ಕುಳಿತುಕೊಂಡಳು. ವೀರಮುಖ್ಯರೂ ಅಲ್ಲಿಗೆ ಹೋಗಿ ದೂರ ಕುಳಿತುಕೊಂಡರು. - ಆಗ ಆ ಹೆಂಗಸು ಆ ಹುಲ್ಲನ್ನು ತನ್ನ ಅಂಗೈಯಿಂಪಿ ಒತ್ತಿ ಒತ್ತಿ ನೋಡಿ 'ಆಹಾ! ಈ ಹುಲ್ಲು ಹಂಸತೂಲಿಕೆಯ ಹಾಸಿಗೆ ಯಂತೆ ಎಷ್ಟು ಮೃದುವಾಗಿದೆ ಎಂದಳು. ವೀರ... ಪರೋಪಕಾರಿಗಳಾದ ಪಶುಗಳಿಗೆ ಇದು ದೇವ ರಿಂದ ನಿರ್ಮಿತವಾದ ಆಹಾರ, ಆಹಾ! ದೇವರು ಪರೋಪ ಕಾರಿಗಳಾದ ಪ್ರಾಣಿಗಳನ್ನು ಎಷ್ಟು ಪ್ರೀತಿಯಿಂದ ಪರಾಮರಿ ಸುತ್ತಿದಾನೆ; ನೋಡಿದಿರಾ! ಆ ಹೆಂಗಸು.-ರಾತ್ರಿ ಇದರಮೇಲೆ ಮಲಗಿಕೊಂಡರೆ ಬಹಳ ಚನ್ನಾಗಿ ನಿದ್ರೆ ಬರಬಹುದು; ಆದರೆ ಅ ವನದಲ್ಲಿ ಒಂಟಿಯಾಗಿ ರಾತ್ರಿ ವೇಳೆ ಮಲಗಿಕೊಳ್ಳು ವುದು ಕಷ್ಟ. ವೀರ. ಒಂಟಿಯಂ ದರೇನು? ಜಗಕೆ ತಂದೆಯಾದ ದೇವರು ಯಾವ ಪ್ರಾಣಿಯನ್ನೂ ಎಂದಿಗೂ ಅರಗಳಿಗೆಯಾದರೂ ಬಿಟ್ಟಿ ರುವುದಿಲ್ಲ; ಅಂತಹ ಮೈಗಾವಲಿದ ಮೇಲೆ ಕಷ್ಟ ವೇನು? ತಾಯಿಯ ಗರ್ಭದಲ್ಲಿ ರು ವಾಗ ನಮ್ಮನ್ನು ಕಾಪಾಡಿದವರಾರು? ಮೈಮರೆತು ನಿದ್ರೆ ಮಾಡುತ್ತಿರುವಾಗ ಕಾವಲಿದ್ದು ನಮ್ಮನ್ನು ಕಪಾಡುವರಾರು? ಅವರು ಈರೀತಿಯಾಗಿ ಮಾತನಾಡಿಕೊಳ್ಳುತ್ತಿದ್ದ ಹಾಗೆಯೇ ಒಬ್ಬರ ಮೊಗ ಒಬ್ಬರಿಗೆ ಕಾಣದಂತೆ ಕತ್ತಲು ಕವಿತುಕಂ ತು.