ಪುಟ:ಜಗನ್ಮೋಹಿನಿ .djvu/೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

WV ಇY + G +y • + vvvvvyh Mv > ** ಜಗನ್ನೊಹಿನೀ ಭೈರವಾನಂದನು ಆಮಾತನ್ನು ಕೇಳಿ ಕನಲಿ “ಎಲೈ ! ನೀವುಗಳು ನನ್ನ ಮಾತುಗಳಿಗೆ ಮಾದನಿಗೊಡುತ್ತಾ ನನ್ನ ಇದಿರಿಗೆ ಸ್ಥಂಭಗಳಂತೆ ನಿಂತುಕೊಂಡಿರುವುದೇಕೆ? ಅವರಿಗಿಂತಲೂ ಮುಂಚೆ ಮ್ಮನ್ನು ಈ ಯಪ ಸ್ಥಂಭಕ್ಕೆ ಕಟ್ಟಿಸಬೇಕು. ' ಎಂದು ಅಬ್ಬರಿಸಿದನು. - ಆಗ, ಆವನ ಸೇನಾಪತಿಯು ತತ್ತರಗೊಂಡು ಬುದ್ದಿ ! ಅಪ್ಪಣೆಯಾದರೆ, ಅವರನ್ನು ಒಂದು ನಿಮಿಷದಲ್ಲಿ ಹುಡುಕಿ ಕೊಂಡು ಬರುವೆನು. ” ಎಂದನು. ಭೈರವಾನಂದನು, ಪರಿಹಾಸ್ಯವಾಗಿ ನಕ್ಕು “ ಛೇ ! ಗಾಂಸ ನೇ ! ನಿನಗೆ ಪ್ರತಿಯೊಂದಕ್ಕೂ ಅಪ್ಪಣೆಯೊಂದಾಗಬೇಕೋ ? ನಿಮಿಷಕ್ಕೂ ವರ್ಷಕ್ಕೂ ಇರುವ ವ್ಯತ್ಯಾಸವನ್ನು ನೀನು ಸ್ವಪ್ನ ದಲ್ಲಿ ಯ ಕಂಡು ಕೇಳಿದ ಹಾಗೆ ಕಾಣುವುದಿಲ್ಲ, ಒಳ್ಳೆಯದು ತೊಲಗಿಹೋಗು, ಏನು ಮಾಡಿಕೊಂಡು ಬರುವಿಯೋ ನೋ ಡುವ.” ಎಂದನು. ಕೂಡಲೇ ಅವನು ಕಾಡಿನೊಳಕ್ಕೆ ಎತ್ತಲೋ ಓಡಿಹೋದನು. ಬಳಿಕ ಭೈರವಾನಂದನು ತನ್ನ ಮಂತ್ರಿಯನ್ನು ಕುರಿತು, “ಎಲೈ | ಅವರು ಇದುವರೆಗೂ ಬಾರದೇ ಇರುವುದಕ್ಕೆ ಕಾರಣ ವೇನಿರಬಹುದು; ನೀನು ಊಹಿಸಲಾಪೆಯ ? ? ಎಂದು ಕೇಳಿದನು. ಮಂತ್ರಿ. -ಒಡೆಯನೇ ! ಬೈರಾಗಿಯು ಹೇಳಿದ ಸಮ ಯಕ್ಕೆ ಸರಿಯಾಗಿ ಆ ರಾಜ ಪುತ್ರನು ಅಲ್ಲಿಗೆ ಬಂದಿರಲಾರನು ; ಆದುದರಿಂದಲೇ ತಡವಾಗಿರಬಹುದೆಂದು ತೋರುತ್ತದೆ.