ಪುಟ:ಜಗನ್ಮೋಹಿನಿ .djvu/೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆರನೆಯ ಪ್ರಕರಣ. ಆಶ್ರವು ಮಣ್ಣಲ. ಬೇಸಿಗೆ ಕಾಲದ ಬಿಸಿಲಿಗಿಂತಲೂ ಮಳೆಗಾಲದ ಬಿಸಿಲ ಬೇಗೆಯು ಬಹಳ ಹೆಚ್ಚು, ಈ ಕಾಲದಲ್ಲಿ ಬೇಗೆ ಹೆಚ್ಚಾದ ದಿನ ಮಳೆಗೆ ಮಹಾಯೋಗವೆನ್ನುವರು ; ಆ ದಿನ ಬಹುಶಃ ಮಳೆ ಎಸ ರೀತವಾಗಿ ಬಾರದೇ ಇರುವುದಿಲ್ಲ. ನಮ್ಮ ವೀರ ಮುಖ್ಯರು ಮಹೋದಯದಿಂದ ಪಯಣ ಮಾಡಿ ಹೊರಟವೇಳೆಯಲ್ಲಿ, ಆದಿನ ಇನ್ನೆಷ್ಟು ಮಳೆಸುರಿವುದೋ ಎಂಬಂತೆ ದಗದಗನೆ ದಗೆ ಏಳುತ್ತಿದ್ದಿತು. ಆಗಸದಲ್ಲಿ ಅಲ್ಲಲ್ಲಿ ಬಿಳಿ ಮೋಡದೊಡುಗಳು ಆಗಾಗಲೇ ಕಪ್ಪೇರುತ್ತಿದ್ದವು, ಸಾಲು ಮರಗಳ ನೆಳಲಲ್ಲಿ ಗಾಡಿಯು ಅತಿವೇಗವಾಗಿ ಓಡುತ್ತಿದ್ದು ದ ರಿಂದ ವೀರಮುಖರಿಗೆ ಆಗಿನ ಬಿಸಲಿನ ಬೇಗೆಯು ಅಷ್ಟು ಕಾಣಲಿಲ್ಲ. - ರಾಜಮಾರ್ಗದ ಇಕ್ಕಡೆಯಲ್ಲಿ ಯ ಹೊಲಗಳಲ್ಲಿ ಹಳ್ಳಿ ಯ ಹೆಂಗಸರು ತಲೆಗೆ ಶರಗುಗಳನ್ನು ಕಟ್ಟಿ ಕೊಂಡು ಗುಂಪು ಗಡಿ ಪದಗಳನ್ನು ಇಂಪಾಗಿ ಹಾಡುತ್ತಾ ತವಕಗೊಂಡು ಮೊಗ ದಿಂದ ತಟಕುತ್ತಿದ್ದ ಬೆವರು ನೀರನ್ನು ಕೂಡಾ ಒರಸಿಕೊಳ್ಳದೇ ನಾಮುಂದು ತಾಮುಂದು ಎಂದು ಗಂಡಾಳು ಗಳನ್ನು ಹಿಂದೆ ಮಾಡುತ್ತಾ, ಸಾಲಹಿಡಿದು ಕಳೆ ಕೀಳುತ್ತಿದ್ದರು.