ಪುಟ:ಜಗನ್ಮೋಹಿನಿ .djvu/೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೬ ಜಗನ್ನೊಹಿನೀ, ••••••••••••••••• \ *#*#* * # \

Nyn ಗಳನ್ನು ಕವಿಗಳು ಹೇಗೆ ಪೂರಣಮಾಡುತ್ತಿದ್ದರು, ಆ ಕವಿತ್ವವು ಅಷ್ಟು ಯಥಾರ್ಥವಾಗದೆ ಬರಿ ನುಡಿಗಳ ಗಡಣವಾಗಿದ್ದರೆ ವಿದ್ಯ «ಣಿಯಾದ ಭೋಜ ಮಹಾಪ್ರಭುವು ಅವುಗಳಿಗೆ ಅಕ್ಷರ ಲಕ್ಷ ವನ್ನು ಕೊಡುತ್ತಿದ್ದನೆ ? ಸವಾರ.- ಒಡೆಯನೇ । ಪರರ ದೋಷಗಳನ್ನು ಗಮನಿ ಸದೇ ಕೇವಲ ಗುಣವನ್ನು ಮಾತ್ರ ಗ್ರಹಿಸಿ ಅದನ್ನು ಅತಿಶಯೋಕ್ತಿ ಯಿಂದ ಕೊಂಡಾಡುವುದು ಸಜ್ಜನರಿಗೆ ಸಹಜವಾದುದು. ಆದರೆ, ಅಲ್ಪ ಮತಿಯಾದ ನಾನು ಆ ಮಹಾ ಕವಿಗಳ ಪಾದಧೂಳಿ ಯನ್ನು ಕೂಡಾ ಹೋಲಲಾರೆನೆಂದು ದೃಢವಾಗಿ ನಂಬಿರುವೆನು. ವೀರ.- ಪೂರ್ಣಪಣಿ ತದಿಗೆ ಸ್ವಾಹಂಕಾರ ಖಂಡನೆಯು ಸ್ವಾಭಾವಿಕವಾದುದು ; ಕವಿಸಾರ್ವ ಭೌಮನಾದ ಕಾಳಿದಾಸನು ತನ್ನನ್ನು ತಾನು ಮಂದನೆಂದು ಭಾವಿಸಿಕೊಂಡಿರುವನು. ವೀರಮುಖರು ಈ ರೀತಿಯಾಗಿ ವಿನೋದದಿಂದ ಸುಳ್ಳು ನುಡಿ ಗಳನ್ನು ಆಡಿಕೊಳ್ಳುತ್ತಿದ್ದ ಹಾಗೆಯೇ ಸಂಜೆಗೆಂಪು ಅವರ ಮುಖಕ್ಕೆ ಮೆರುಗಿಟ್ಟಿ ತು. ಆವೇಳೆಗೆ ಗಾಡಿಯೊಂದು ದೊಡ್ಡ ಆಲದಮರದ ಕೆಳಗೆ ನಿಂತಿತು. ಒಡನೇ ಸಾರಥಿಯು ಕೆಳಕ್ಕೆ ಇಳಿದು ನೀರ ಮುಖ್ಯ ರಿಗೆ ಕೈ ಮುಗಿದು ( ಮಹಾಸ್ವಾಮೀ ! ಇದುವೇ ಕುಶನಾಭರ ಆಶ್ರ ಮದ್ಯಾರ. ಇಲ್ಲಿಂದಾಚೆಗೆ ಗಾಡಿ ಹೋಗುವುದಿಲ್ಲ. ಎಂದು ಬಿನ್ನವಿಸಿದನು. ಆ ಮಾತನ್ನು ಕೇಳಿ ಮೂವರೂ ಕೆಳಕ್ಕೆ ಇಳಿದರು, ವೀರಸು ಆಪರಿಜನರಿಗೆ ಯಥೋಚಿತವಾಗಿ ಪಾರಿತೋಷಿಕವನ್ನು ಕೊಟ್ಟು ( ಎರೆ, ನೀವಿನ್ನು ಹಿಂದಿರುಗಿ ಹೋಗಬಹುದು, ) ಎಂದು