ಪುಟ:ಜಗನ್ಮೋಹಿನಿ .djvu/೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೮ ಜಗನ್ನೊಹಿನೀ, ಆ ಸಮಯದಲ್ಲಿ ಸ್ವಾಭಾವಿಕವಾಗಿ ಗಾಳಿಯು ಮಂದವಾಗಿದ್ದು ದರಿಂದ, ದೊಡ್ಡ ದೊಡ್ಡ ಕಂಬಗಳಂತೆ ಕಾಣುತ್ತಿದ್ದುವು. ಆ ವಸಾರೆಯಲ್ಲಿ ದರ್ಭಾಸನದ ಮೇಲೆ ಅತಿ ವೃದ್ದ ರಾದ ತಾಪಸಿಗಳೊಬ್ಬರು ಜಪಮಾಲೆಯನ್ನು ತಿರುಗಿಸುತ್ತಾ ಪದ್ಮಾಸನ ದಲ್ಲಿ ಕುಳಿತುಕೊಂಡಿದ್ದರು. ಇವರಿಗೆ ವಯಸ್ಸು ಎಷ್ಟಾಗಿದಿತೋ ನಿರ್ಧರಿಸುವುದಕ್ಕೆ ಅಸದಳವಾಗಿದ್ದಿತು; ಗಡವು ಎದೆಗೂಡಿನಮೇಲೂ ತೊಡೆಗಳ ಮೇಲೂ ಬಿಳಿದಾದ ಸಣಬಿನಂತೆ ಜೋಲಾಡುತ್ತಿದ್ದಿತು; ಜಟಾ ಮಂಡಲವು ಹಂಬಿನಂತೆ ಅವರ ಮೈಯ್ಯ ಮೇಲೆ ಹರಿದು ಸುತ್ತಲೂ ನೆಲದಮೇಲೆ ಬಿದ್ದಿದ್ದಿ ತು; ಕೈ ಕಾಲುಗಳ ಉಗುರುಗಳು ಎಸ ರೀತವಾಗಿ ಬೆಳದು ಗುಂಗುರು ಕಟ್ಟಿ ಕೊಂಡಿದ್ದುವು. ಇವರ ಸುತ್ತಲೂ ಸ್ವಲ್ಪ ಹೆಚ್ಚು ಕಡಿಮೆ ಇವರಿಗೆ ಸಮಾನ ವಯಸ್ಸಿನವರಾದ ಹಲವು ತಾಸಸರು ಸಮಾಧಿಯಲ್ಲಿ ಕುಳಿತು ಕೊಂಡಿದ್ದರು. ವೀರನು ಈ ತಾಸಸಿಗಳನ್ನು ನೋಡಿ ತನ್ನ ಜತೆಗಾರ ನನ್ನು ಕುರಿತು : ಎಲೈ ! ಮಿತ್ರನೇ ! ಈ ಮಹಾಯೋಗಿಗಳು ತಮ್ಮ ಯೋಗಪ್ರಭಾವದಿಂದ ಮತ್ತೊಂದು ಜಗವನ್ನು ನಿರ್ಮಾಣ ಮಾಡುವುದಕ್ಕೆ ಸಮರ್ಥರಾದಾಗೂ ಪುತ್ರ ಮಿತ್ರ, ಕಳತ್ರಾದಿ ಸರ್ವಸಂಗವನ್ನು ಪರಿತ್ಯಾಗಮಾಡಿ ಬ್ರಹ್ಮಚರ್ಯದಿಂದ ಈ ಮಹಾ ರಣ್ಯದಲ್ಲಿ ದಿಗಂಬರರಾಗಿ ನಿದ್ರಾಹಾರಾದಿಗಳನ್ನು ಬಿಟ್ಟು ಯೋಗಾ ಸನದಲ್ಲಿ ಕುಳಿತು ಯೋಗೀಶನನ್ನು ಜಾನಿಸುತ್ತಾ ಆನಂದ ಬಾಷ್ಪ ವನ್ನು ಸುರಿಸುತ್ತಿರುವರು, ಮಾನವರಿಗೆ ಈ ಕರ್ಮ ಭೂಮಿಯಲ್ಲಿ ಇದಕ್ಕಿ೦ತಲೂ ಪರದಾದ ಸುಖವಾವುದು ? ಇವರಿಗೀಗಿ ಭೂಸುರ ರೆಂಬ ಹೆಸರು ಸಲ್ಲ ತಕ್ಕುದು ' ಎಂದು ಅತಿ ವಿನೀತಭಾವದಿಂದ