ಪುಟ:ಜಗನ್ಮೋಹಿನಿ .djvu/೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೭೦ ಜಗನ್ನೊಹಿನೀ, ಇY*~ པ ར འ ར ན ་ ་ ವೇನು ? ದಾರಿಯಲ್ಲಿ ಕಾಕಪೋಕರಾರಾದರೂ ಮೇಲೆ ಬಿದ್ದ ರೋ ? ?” ಎಂದು ಕೇಳಿದನು. ವೀರನದಕ್ಕೆ ಪೂಜ್ಯರೇ ! ತಾವು ಮೊದಲು ದಯೆ ಮೂಡಿ ನಮಗೆ ಮಹಾನುಭಾವರಾದ ಕುಶನಾಭರ ಪಾದದರುಶನವನ್ನು ಮಾಡಿಸಿದರೆ, ಬಳಿಕ ನಾನು ತಮಗೆ ನಡೆದ ಸಂಗತಿಯನ್ನೆಲ್ಲಾ ವಿವರವಾಗಿ ಅರಿಕೆ ಮಾಡುವೆನು ” ಎಂದನು. ಒಡನೆಯೇ ಆ ತಪಸ್ವಿಯು ವಿವರ್ಣ ವಾದ ತನ್ನ ಮುಖ ವನ್ನು ಹಿಂದಿರುಗುವ ನೆವದಿಂದ ಮರೆಮಾಜಿಕೊಂಡು ( ಒಳ್ಳೆ ಯದು! ಬನಿ ಎಂದು ಪರ್ಣ ಶಾಲೆಯ ಕಡೆಗೆ ಹೊರಟನು. ವೀರನುಷ್ಯರು ಅವರನ್ನು ಹಿಂಬಾಲಿಸಿದರು. ನಮ್ಮ ವಾಚಕ ಮಹಾಶಯರು ಈ ತಾಪಸಿಯನ್ನು ಮುತ್ತಾ ರೋ ಮಹರ್ಷಿಯೆಂದು ತಿಳಿಯಲಾಗದು. ಈ ಉಪಾಖ್ಯಾನದ ಮೊದಲನೆಯ ಪ್ರಕರಣದಲ್ಲಿ, ಹೊಳೆಯನ್ನು ದಾಟುವಾಗ್ಗೆ ನೀರಿ ನಲ್ಲಿ ತನ್ನ ಪ್ರತಿಬಿಂಬವನ್ನು ನೋಡಿಕೊಂಡು ಗುಣಗಾಡು ತ್ತಾ ಕಾಡದಾರಿ ಹಿಡಿದು ಹೋಗುತ್ತಿದ್ದನೆಂದು ಹೇಳಲ್ಪಟ್ಟ ಆ ಮಹಾ ತ್ಮರಾದ ಬೈರಾಗಿಯು, ಇವರೇ ಇವರು. ಬೈರಾಗಿಯು ನೆಟ್ಟಗೆ ಆ ಒಪ್ಪಾರದಲ್ಲಿ ಕುಳಿತಿದ್ದ ವೃದ್ದ ಮನಿಗಳ ಸನಿಹಕ್ಕೆ ಹೋಗಿ ಮರ್ಯಾದೆಗೆ ತಕ್ಕ ಷ್ಟು ದೂರದಲ್ಲಿ ನಿಂತು ಕೈಜೋಡಿಸಿಕೊಂಡು ಪೂಜ್ಯರೇ! ಧರ್ಮವರ್ಮನ ಕುಮಾ ರನು ಬಂದಿದಾನೆ ಎಂದು ಗಟ್ಟಿಯಾಗಿ ಹೇಳಿದನು. ಕೂಡಲೇ ಅವರು ಕಣ್ಣೆತ್ತಿ ವೀರನನ್ನು ನೋಡಿದರು. ಆಗ ಸೀರನು ಅವರಿಗೆ ಸಾಷ್ಟಾಂಗ ಪ್ರಣಾಮವನ್ನು ಮಾಡಿದನು. ಕುಶನಾಭರು ಅದನ್ನು ಕಂಡು ಕೈ ಎತ್ತಿ ವೀರನನ್ನು “ದೀ ರ್ಘಾಯುರ್ಭವ ! ದೀರ್ಘಾಯುರ್ಭವ !! ಎಂದು ” ಹರಸಿ ವತ್ವಾ ನಿನಗೆ ಸುಖಾಗಮನವೆ ? ಎಂದು ಕೇಳಿದರು.