ಪುಟ:ಜೀವಂಧರ ಚರಿತೆ.djvu/೧೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪ ಭಾಸ್ಕರರವಿರಚಿತ ವರವಿಧುಂತುದನಿಂದುಕಲೆಗಳ | ನಿರದೆ ನುಂಗಿಯ ಮಗುಟ್ಟುಗುತ್ತಾ | ತೆದೆ ವೇಣಿಯೊಳೆಸೆವ ಕುಸುಮವನಿರಿಸಿ ಮನಸಿಜನ || ಶರಕೆ ಚಾಪವನೂಡುವಂತುರು | ತರದ ನೇತ್ರದೊಳಂಜನವನನು | ಕರಿಸಿ ಶೃಂಗರಿಸಿದರಬಲೆಯರಾವಧೂಮಣಿಯ || ಕುಸುಮಶರನಿಭಕುಂಭಗಳಿಂ | ದಿಸಿದ ಜಯಕೀರಿತಿಯಮೊಗಮನ || ಲೆಸೆವ ಕುಚದಲಿ ಪತ್ರಭಂಗಂಗಳನು ಮೇಲೈಸಿ || ಸಸಿಗೆ ಶುಕ್ರನ ಸೇರಿಸಿದರೆನ | ಲೆಸೆವ ಮುಖಮಂಡಲಕೆ ಮೂಗುತಿ | ಯೆಸಗಿ ಕೈಗೈದರು ಮೃಗಾಕ್ಷಿಯರರಸ ಕೇಳೆಂದ | - ಅರಲ ಬಾಣಕೆ ಗಲಿಯ ಕಟ್ಟುವ | ತೆಲದೊಳಂಗುಳಿಗಳಲಿ ಮುದ್ರೆಯ | ತುಲುಗಿ ಶಶಿ ದೋಷಾಕರನು ನಿಂದೆಡೆಯೊಳಿಹೆವೆಂದು || ಚರಣಕೆಳಗಿದ ಭಗಣವೆನೆ ನೇ | ವುರವೆಸಗಿ ಪುಳಿನವನು ಹೋಂದಾ | ವರೆಯ ಲತೆ ಬಳಸಿರ್ದುದೆನಲಿಕ್ಕಿದರು ಮೇಖಲೆಯ || ಗುರು ಪಯೋಧರಮಂಡಲದ ಬಂ | ಧುರದ ಪರಿವೇಷವಿದೆನಲು ಕಂ | ಧರಕೆ ಹಾರವನೆಸಗಿ ಮನಸಿಜವಶ್ಯಯಂತ್ರವನು || ಬರೆವವೊಲು ಗಂಧದಲಿ ಚಿತ್ರೀ | ತರಮಕರಿಕಾಪತ್ರವನು ವಿ | ಸ್ತರಿಸಿ ಶೃಂಗಾರಿಸಿದರಬಲೆಯರಾವಧೂಮಣಿಯ || - ಚರಣಶೋಭೆಗಳಿಂದ ನೇವರ | ಮೆರೆಯೆ ಕದಪುಗಳಿಂದ ಕರ್ಣಾ | ಭರಣವೆಸೆಯಲು ಕಾಂಚಿ ಜಘನೋವ್ರ ತದಿ ರಂಜಿಸಲು || ಕರದ ಚೆಲುವಿಕೆಯಿಂದ ಮಣಿಏ | ಸ್ಟುರಿತಕಂಕಣವೆಸೆಯೆ ಸತಿಯ | ಭರಣಗಳಿಗಾಭರಣವಾದಳು ಚಿತ್ರವಾಯೆಂದ || ೬