ಪುಟ:ಜೀವಂಧರ ಚರಿತೆ.djvu/೧೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜೀವಂಧರ ಚರಿತೆ ೧೫೧ ೧೫ ಹರೆಯ ಸುಡೆ ಬೆಳುಪಾದ ಭಸ್ಮದ | ತೆಲದಿ ನರೆತುವು ರೋಮ ಪೂರ್ವದ | ಪರಿಗತಿಯ ನೆನೆದದ್ಭುತದಿ ತಲೆದೂಗುವಂದದಲಿ || ಶಿರ ನಡುಗೆ ತಾ ವಿಷಯತತಿಯೋ | ಸರಿಸೆ ಸುಕ್ಕಿದ ತೆಹದಿ ತನು ಮಿಗೆ | ಜರಿದುದತಿವೃದ್ಧತ್ವವಾದಂತಾಕುಮಾರಂಗೆ || ಜರಿದು ಕೊನೆಕೊಹೆಯೆಂದು ಗಂಟಲ | ನರ ಬಿಗಿದು ಕೆಮ್ಮು ಜಾಲತ | ಕೊರಗುತೋಗುತೆ ಕೋಲನೂಕುತೆ ಮುಂದೆ ಸುಳಿವವರ || ಕರೆದು ಭೋಜನವಿಕ್ಕುವರ ಮಂ || ದಿರವ ಕೇಳುತಲಿಂತು ಸುರಮಂ | ಜರಿಯ ಮನೆಗಾಕಪಟಿ ಬರುತಿರ್ದನು ಸರಾಗದಲಿ || ೧೬ ಬಂದು ಸುರಮಂಜರಿಯ ಗೇಹವ | ನೋಂದಿ ಪುಗಲಾಪಡಿಯಕರು ತಡೆ | ದೆಂದರಾವೆಡೆಗೆನಲು ಕನ್ಯಾಭಿಕ್ಷೆಗೋಸುಗ ನಾಂ | .ಬಂದೆನೆನೆ ನಗುತೀಜರಾತ | ಗಿಂದುಮುಖಿಯರ ತೊಡಕು ತನಗೇ | ಕೆಂದಣಕವಾಡುತ್ತ ಪುಗಿಸಿದರಾತನನು ಮನೆಯ | ಕೊರಗಿ ಬೆಂಬಂತಿದಳವ°ದು ತಲೆ | ತಿರುಗಿ ಬಿದ್ದವನಂತೆ ಧರೆಯೊಳ | ಗುರುಳೆ ಮೆಲ್ಲನೆ ಕಣ್ಣೆದು ಕರುಣಾನುಭಾವದಲಿ || ತರುಣಿ ಕನ್ಯಾಭಿಕ್ಷವನು ವಿ | ಸೈರಿಸ ಬೇಕೆನಗೆಂದು ಹೀನ | ಸ್ವರದಿ ನುಡಿಯ ದಯೋಕ್ತಿಯಿಂದಿಂತೆಂದಳಾರಮಣಿ || ೧೮ * ಕರೆದು ಸತಿಯಾಕಪಟಿಯನು ಪರಿ | ಪರಿಯ ಭಕ್ಷರಸಾನ್ನ ಪಾನೋ || ತರಗಳಿಂದುಪಚರಿಸಿ ತಾನಿಂತಪ್ಪ ವೃದ್ಧನನು | .ಧರಣಿಯೊಳು ಕಂಡ 'ಯೆನೆಂದ || ಚರಿಯದಿಂದಬಲೆಯರು ನೋಡು | ತಿರೆ ದಿವಾಕರನಿತ್ತಲಪರಾಚಲಕೆ ನಡೆತಂದ || ೧೭ ೧