ಪುಟ:ಜೀವಂಧರ ಚರಿತೆ.djvu/೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾಸ್ಕರಕವಿರಚಿತ ೩೪ ೩೫ ವಾದಿಮದಗಜಸಿಂಹಸೂರಿಗ | ೪ಾದಿಯಲಿ ನವಸಂಸ್ಕೃತದೆ ಸಂ | ವಾದಿಸಿದ ಭೂವಿನುತಜೀವಂಧರನ ಚರಿತವನು || ವೇದಿಸುವೆನುರುಭಾಮಿನಿಯ ಷ | ದ್ವಾದದಿಂ ಕನ್ನಡದೊಳೊಲಿದಿದ | ನಾದರಿಸಿ ಕೇಳುವುದು ಭವ್ಯಸಮೂಹವೊಲವಿನಲಿ || - ಶ್ರೀಮದನುಪಮವೀರ ಜನಪದ | ತಾಮರಸಮಧುಕರನು ಸದ್ಧ | ರ್ಮಾಮೃತಾಂಭೋರಾಶಿವರ್ಧನಚಂದ್ರನೆಂದೆನಿಪ || ಭೂಮಿಪಾಲಲಲಾಮನಭಿನವ | ಕಾಮನಮುಳಗುಣಾಭಿರಾಮ ಮ | ಹಾಮಹಿಮ ಮಗಧೇಂದ್ರ ಪಾಲಿಸುತಿರ್ದನೊಲವಿನಲಿ || ಲೀಲೆಯಿಂದೀಪರಿಯಲವನಿಯ | ಪಾಲಿಸುತ್ತಿರಲೊಂದು ದಿನ ವನ | ಪಾಲನೆಯ್ತಂದೆಗಿ ವಿಪುಳಾದ್ರಿಯಲ್ಲಿ ಸನ್ಮತಿಯ | ಲಾಲಿತಶ್ರೀಸಮವಸರಣ ಸು | ಲೀಲೆಯಿಂ ನೆಲಸಿರ್ದುದೆನೆ ಭೂ | ಪಾಲ ಪೀಠವನಿಂದು ಭಯಭಕ್ತಿಯಲಿ ವಂದಿಸಿದ | ಒಸಗೆದಂದಂಗಂಗಚಿತ್ತವ | ನೆಸಗಿ ವಿಮಳಾನಂದಭೇರಿಯ | ನೊಸೆದು ಪೊಯ್ಲಿಯೆ ಸಮವಸರಣಕೆ ಭವ್ಯಜನಸಹಿತ | ವಸುಮತೀಶ್ವರ ಬಂದು ಘನಸಂ | ತಸದಿ ಒಲಗೊಂಡಕ್ಷಯಗೆ ವಂ || ದಿಸಿ ಕರಾಗ್ರವ ಮುಗಿದು ಸಂಸ್ತುತಿಸಿದನು ಜೆನಪತಿಯ | - ಜಯಜಯ ಮಹಾಮಹಿಮ ಮುಕ್ತಾ | ಶ್ರಯ ಗುಣಾನ್ವಿತ ಭಕ್ತವತ್ಸಲ | ಲಯವಿಹೀನ ಮಹೇಶ ಮಾಯಾತೀತ ಮದನಹರ || ಭಯರಹಿತ ಸರ್ವಜ್ಞ ಲೋಕ | ತ್ರಯನಮಿತಪದಕಮಲ ತತ್ತಾ | ಲಯ ವಿಶುದ್ಧ ಜ್ಞಾನಮೂರ್ತಿಯ ಕರುಣಿಸೆನಗೆಂದ || - ೩೬ ೩೭ ಇಲೆ