ಪುಟ:ಜೀವಂಧರ ಚರಿತೆ.djvu/೧೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜೀವಂಧರ ಚರಿತೆ ೧೩೭ ಧಾರಿಣೀಪಾಲರಿಗೆ ಮಂತ್ರಿಕ | ಮಾರರಿಗೆ ನಟವಿಟಭದಾಳಿಗೆ | ವಾರನಾರೀಜನಕೆ ಬಹುಧನ ರತ್ನ ಭೂಷಣವ || ವಾರಕವನಿರಸಿಯರು ಸುಕು | ಮಾರಕರು ಸಹಿತರಸ ಮಣಿಮಯ | [ತೇರನೇ] ವಿಳಾಸದಲಿ ಹೊಳವಟ್ಟನರಮನೆಯ || - ಸ್ಮರನ ಮಂತ್ರದ ದೇವತೆಯರೆನೆ | ಪರಿಪರಿಯ ಶೃಂಗಾರದಲಿ ಕರಿ | ತುರಗರಥಗಳ ಮೇಲೆ ಪರಿಮಿತಕಾಮಿನೀನಿಕರ | ಬರಲು ಬೆಳ್ಕೊಡೆ ಚಮರ ಸೀಗುರಿ | ಮೆಹತಿ ಸಡಗರದಿಂದ ಜೀವಂ | ಧರನು ಒಂದಾನಂದನವ ಹೊಕ್ಕನು ವಿಲಾಸದಲಿ || ಚಾರುಪದ್ಯಾ ನನದ ಅಂತಹ | ಕೋರನೇತ್ರದ ಚಕ್ರಕುಚದ ಮ | ಯರಕಚದ ಮರಾಳಗಮನದ ಪಾಟಲಾಧರದ | ಕೀರವಚನದ ತಳಿರಡಿಯ ರo | ಭೋರುಗಳ ತಳೆದೆಸೆವ ಕುಸುಮಶ | ರೀರದಾವನಲಕ್ಷ್ಮಿ ತಾಸಿದಿರಾದಳನೃಪಗೆ || ಅರಸ ಕೇಳಾಬನವ ಜೀವಂ || ಧರನು ಪುಗೆ ವನಪಾಲಕನು ಭೂ | ವರಗೆ ತೋಹದ ವಿಮಳವಲ್ಲಿಯ ಹರ್ಮಶಾಲೆಗಳ | ಮೆರೆವ ಕೃತಕಾದ್ರಿಗಳ ತತ್ಸಲ | ಭರಿತ ಕುಜಸಂಕುಳದ ಘನ ಸಡ | ಗರವ ತೋರುತ ಮುಂಗೆ ನಡೆತರುತಿರ್ದನೊಲವಿನಲಿ | ಈ ತಳಿರು ಕೆಂಪಡಸದೆ ಧರಿತ್ರಿಯ | ನಲರ ಬೆಳುಪಿಲ್ಲದಿರೆ ನಭವು | ಚಲಿಸದಿರೆ ತರುಶಾಖೆ ಪಣ್ಣ ಳ ಭರದಿ ಕುಸಿಯದಿರೆ || ಫಲರಸವು ನದಿಯಾಗದಿರೆ ಗಿಳಿ | ಬಳಗ ಚುಂಬಿಸದೆಂದೆನುತ ನೃಪ | ತಿಲಕಗಾವನಪಾಲ ಸಹಕಾರವನು ತೊ°ಸಿದ | ೭ ಬ