ಪುಟ:ಜೀವಂಧರ ಚರಿತೆ.djvu/೧೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

«೧೭೦ ಭಾಸ್ಕರಕವಿರಚಿತ ಸರಸಿರುಹದಳನೇತ್ರೆ ಮಲ್ಲಿಗೆ | ಯರಲುಗಳ ಸಲೆ ಕೊಯ್ಯು ಮಗುಳ್ಳೆ | ತರುತಿರಲು ನೇತ್ರಾಂಶು ಲತೆಯಲಿ ಪದಿಯೆ ಕಂಡಲರು || ಮರಳಿ ಮೂಡಿವೆಯೆನುತ ಹಸ್ತಾಂ || ಬುರುಹವನು ಮಗುಅದಕೆ ನೀಡಲು | ಬಲಿಯದಾಗಿರೆ ಮುಗ್ಗೆ ಮೊಗದಿರುಹಿದಳು ಲಜ್ಜೆಯಲಿ || ೧? ಗಿಲಿಕೆಗಳ ಕೊಂಬುಗಳ ಪೂಗೊಂ | ಚಲನದೊರ್ವಳು ಕೊಯ್ಯುತಿರಲರ | ಗಿಳಿ ಲಸದ್ದಾಡಿಮದ ಫಲವೆಂದಧರವನು ತುಡುಕೆ || ಉಲುಕಿ ಬಿದ್ದುವು ಚೇತನವು ಕುಚ | ಗಳುಕಿ ಹಾಯೆನುತಾತೃಪಾಲಕ | ತಿಲಕಗಳು ಹಲು ಸತಿಯ ಮುಗ್ಧತೆಗರಸ ಬೆಂಗಾದ | ೨೦ ಅಲರ ಕೊಯ್ಯುತ್ತಿರಲು ಮೃದುಕರ | ತಲರುಚಿಯನೆಳದಳಿರಿನಂತಿರ | ಲುಬಿದಶೋಕೆಯ ಪಲ್ಲವಕೆ ಕೈನೀಡೆ ಲೋಚನದ || ಬೆಳಗಿನಿಂದಲರಾಗಿರಲು ಕಂ | ಡಳುಕಿ ವಾಯದ ಮರವಿದೆಂದು | ತೃಲನಯನೆ ಮೊಗದಿರುಹ ನಗುತಿರ್ದನು ಮಹೀಪಾಲ | ಒದೆಯೇ ದುಷ್ಯನ ತೆರದಿ ಪಲ್ಲವಿ || ಸಿದುದಶೋಕವು ಬಕುಳ ನನೆದೋ | ಆದುದು ಶಠನಂತುಗುಳಿದೊಡೆ ಕುರವಕವು ಬಿಗಿಯಪ್ಪೆ || ಮುದದಿ ದಕ್ಷಿಣನಂ[ತಲರ] ನೋ | ಡಿದೊಡೆ ಧವನನುಕೂಲನಂತುರು || ಗಿದುದು ತಿಲಕಕ್ಕಭಯಂ ಚಿ ಬೆಳಗಾಗೆ ಬನದೊಳಗೆ || ೨೨ - ಇಂದುಮುಖಿಯರು ಕುಸುಮಗಳನಾ || ನಂದದಲಿ ಕೊಯ್ದು ವನಿಪಾಲನ | ಮುಂದಿರಿಸಿ ದೇವಾರ್ಚನೆಯ ಮಾಡುತ್ತ ಸೊಬಗಿನಲಿ || ಸಂದ ವಿವಿಧವಿನೋದದಲಿ ಜೇ | ವಂಧರನು ಮಾಸವನು ಕಳಿದರೆ | ಬಂದುದೆಸೆವ ವಸಂತ ಜನಕಾನಂದದಂದದಲಿ || ೨೩ ೨೧.