ಪುಟ:ಜೀವಂಧರ ಚರಿತೆ.djvu/೧೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೭೮ ಭಾಸ್ಕರಕವಿರಚಿತ ಕಂಬುಕಂಠಯ ತುಣುಬು ಸಡಿಲೆ ಮು | ಖಾಂಬುಜದೊಳಿರೆ ನೀರೊಳದು ಪ್ರತಿ | ಬಿಂಬಿಸಲು ಕಂಡೀಸತಿಯನಾರಾಡು ನೆಳತಿ ನುಂಗಿ | ಇಂಬಿನಲಿ ನೆಲಕೆಳೆಯುತಿದನೇ | ನೆಂಬ ಕಾಂತೆಯ ತಳದ ಮ | ದಾಂಬುವನು ನಗುತರಸ ಸುರಮಂಜರಿಗೆ ತೋಯಿಸಿದ | ೫೯ ಎಳಸಿ ಸವತಿಯ ಗಾಡಿಗಿನಿಯನು || ನಿಲುಕಿ ಸಲಿಲಕ್ರೀಡೆಯೊಂದಿಸಿ | ಮುಳಿದು ಸತಿಯಾಡುವ ನೆವದೊಳವನಕ್ಸಿಗಳ ಜಲವ || ತುಜುಕಿ ಮುತ್ತಿನ ಮಂಜರಿಯನಾ | ಲಲನೆಗಿಕ್ಕಿದನೆಂದೆನಲು ಮುಂ | ದಲೆಯೊಳಗೆ ಭರದಿಂದ ಸುರಿದನು ಗಂಧವಾರಿಯನು || ೬೦ ಚಲ್ಲಣವನಳವಡಿಸಿ ಜಾದ | ಚೊಲ್ಲೆಯವ ಮಿಗೆ ಸಂವರಿಸಿಕೊಂ | ಡೆತ್ತಿ ನಲ್ಲನೆನುತ್ತ ನೀರ್ವೆಗೆದೆಸೆವ ಸೋರ್ಮುಡಿಯ | ಮಲ್ಲಿಗೆಯರಳು ಸೂಸೆ ತವಕದಿ | ಹುಲ್ಲೆಗಣ್ಣವಳೊರ್ವಳುದಕವ | ನುಲ್ಲಸದಿ ಚೆಲ್ಲಿದಳು ಭೂಪನ ಮೇಲೆ ತವಕದಲಿ || ೬೧ - ಅರಸನಕ್ನಿಯೊಳುದಕವನು ವಿ || ಸರದಿ ಹೊಯ್ದಣಕಿಸುತ ಸುರಮಂ | ಜರಿಯ ಸೋರ್ಮುಡಿವಿಡಿದು ಬಾಗಿಸಿ ಚಕ್ರವಾಕಗಳ | ತುಳುಗಿದುವು ಕನ್ನೈದಿಲೆನೆ ಕ | ತುರಿಯ ವಾರಿಯನೆತ್ತಿ ಜೀವಂ || ಧರನು ಸತಿಯ ಕುಚಂಗಳಲಿ ಸುರಿದನು ವಿನೋದದಲಿ !! ನಾರಿಯರ ತನುಲಿಪ್ತ ನವ ಕಾ | ಶಿರ ಕುಚಕುಂಕುಮ ಸುಗಂಧದ | ಸಾರದಲಿ ಕೆಸಕತಾದುವೀಜಲಕೇಳಿ ಸಾಕೆನಲು || ಜಾದಳಕಚ್ಚುತಕುಸುಮ ಕೊಂ | ಪೇದಕ್ಷಿ ಶಿತೋಷ್ಣ ನಗೆಮೊಗ | ಮಾರಚಿಹ್ನೆ ಗಳೆಸೆಯೆ ಸತಿಯರು ನಿಂದರಯಲಿ || ೬೨ ೬೩