ಪುಟ:ಜೀವಂಧರ ಚರಿತೆ.djvu/೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜೀವಂಧರ ಚರಿತೆ ಇದು ವಿನಮದಮರೇಂದ್ರಶ್ರೀಜಿನ | ಪದಕಮಲಷಟ್ಟರಣವಾಣೀ | ವದನದರ್ಪಣ ಭೂಸುರೋತ್ತಮ ಬಸವಣಾಂಕಸುತ || ಚದುರಭಾಸ್ಕರರಚಿತ ಧರ್ಮ | ಪ್ರದನ ಜೀವಂಧರನ ಚರಿತೆಯೊ | ಇದುವೆ ಪೂರ್ವಪ್ರಸಂಗವವನೀವಾಲ ಕೇಳೆಂದ || ಮೊದಲನೆಯ ಸಂಧಿ ಮುಗಿದುದು. ೪೯ ಎರಡನೆಯ ಸಂಧಿ ಸೂಚನೆ ರಾಜರಾಜನ ಪುರವ ನಗುತಿಹ | ರಾಜಪುರಿಯಲಿ ಸಕಲಮುಹಿಯನು | ರಾಜಮ.: ಸತ್ಯಂಧರನು ಪಾಲಿಸಿದನೊಲವಿನಲಿ || ಅರಸ ಕೇಳ್‌ ಹರಿಮಕರಮೂನೆ | ತರದಿ ಗಗನವನೊದೆವ ಪೆರ್ದೆರೆ | ನೊರೆ ಘನಾವರ್ತ೦ಗಳಿ೦ ಘುಮುಘುಮುನಿನಾದದಲಿ | ಸ್ಟುರಿತಮಣಿಮೌಕಿಕದಿ ವಸುಧಾ | ತರುಣಿ ನಿಎಡಿದುಟ್ಟ ಪಟ್ಟಾಂ | ಬರವಿದೆನೆ ಲವಣಾಬ್ಲಿ ಮಿಗೆ ರಂಜಿಸುವುದವನಿಯಲಿ | ೧ ಇಳೆಯ ಪತಿ ಕೇಳಾ ಮಹಾಂಬುಧಿ | ಯೋಳಗೆ ಮಧ್ಯಮಲೋಕಲಕ್ಷ್ಮಿಯ | ಲಲಿತನಾಭಿಯಿದೆನಲು ಜಂಬೂಸವಾನಡುವೆ || ಹೊಳೆವ ಮಣಿವಸುಚಂದ್ರಕಾಂತ್ | ಪಲವನಾವಳಿಯಿಂದ ಮಂದರ | ವಿಳೆಗೆ ಮೂಲಸ್ತಂಭವೆನೆ ಮುಟ್ಟಿದುದು ಘನಪಧವ || ೨