ಪುಟ:ಜೀವಂಧರ ಚರಿತೆ.djvu/೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

L೮ ಭಾಸ್ಕರನಿರಚಿತ ೬೭ ವರಮುನಿಯೇ ಗುರುಶಿಷ್ಯರುಗಳಾ | ಚರಣೆಯೆಂತು ಸುಶಾಂತಿ ಜಪತಪ || ಪರಮಧರ್ಮಾಧರ್ಮ ಮೋಕ್ಷ ಜ್ಞಾನ ದಯವಂತು || ನರಕಕರ್ಮ ಶುಭಾಶುಭಂಗಳ | ತೆನ ಮೋಕ್ಷದಲಾಪ್ರಪಂಚವ | ನೊರೆಯಬೇಕೆನಗೆನಲು ಮುನಿಪ ಕುಮಾರಗಿಂತೆಂದ || ಧರ್ಮದಯೆವಡೆದಷ್ಟಮದ ದು || ಷ್ಕರ್ಮಗಳನಿಟ್ಟೋ ಆಸಿ ಮನದೊಳು | ಹಮ್ಮನುಳದಿಂದ್ರಿಯವನೊದೆದೆರಡಿಲ್ಲದಘವುದು | ದುರ್ಮತವನಪಹರಿಸಿ ಮಾಯದೊ | ಳನ್ನು ವರಿಷಡ್ವರ್ಗವುಟವ ಸು | ನಿರ್ಮಳಾತ್ಯ ಕನಾದೊಡವ ಗುರು ಮಗನೆ ಕೇಳೆಂದ || ೬೮ - ತನುಮನವನೊಸೆದಿತ್ತು ವಸ್ತುಗ | ಗಳನಿತಅಲಿ ವಂಚಿಸದೆ ಪಸರಿಸಿ | ವಿನಯಮಾಡುತ ಗುರುವಿನರಿವಿಡಿದಿತ್ತ ನೇಮವನು || ಅನುಕರಿಸಿ ಭಯಭಕ್ತಿಯಲಿ ಕನ | ಸಿನಲಿ ಮಾರುತ್ತರವನೀಯದೆ | ಸನುನಯದೊಳೆಸಗುವನು ಶಿಷ್ಯನು ಮಗನೆ ಕೇಳೆಂದ || ೬೯ ಇಳೆಯೊಳಖಿಳಕಳಾವಿದತೆ ನಾ | ೧ಳವು ಗುಣವಾಭರಣ ಸುಚರಿತೆ | ಚೆಲುವು ಧರ್ಮವೆ ಮೋಕ್ಷ ಸಂಚಲಚಿತ್ರವಂಧತ್ವ || ಮುಳಿಸು ಹೊಲೆ ಮೃಷೆ ರೌದ್ರವವು ದು | ರ್ಬಲವೆ ಜೀವನ್ಮತವು ಪಿಸುಣತೆ | ಕೊಲೆಯದೆಲೆ ಸುಕುಮಾರ ಕೇಳೆಂದಳುಹಿದನು ಮುನಿಪ | ೭೦ - ಮತ್ತತನವಜ್ಞಾನ ಮಿತ್ರವಿ | ಹತ್ಯವೇ ವಿಷ ಋಣವೆ ರೋಗ ಸು | ವೃತ್ತದಲಿ ಸರ್ತಿ ಸಕಲವಿರಕ್ತಿಯಪವರ್ಗ | ಸತ್ಯವೇ ಜನಶಾಂತಿತಪ ಸಾ | ಹಿತ್ಯವೇ ಸುಜ್ಞಾನ ನಿರ್ಮಲ | ಚಿತ್ರವೇ ಯಮವನಘವದು ಸುಕುಮಾರ ಕೇಳೆಂದ || ಉ