ಪುಟ:ಜ್ಯೋತಿಷ್ಯಶಾಸ್ತ್ರ ಗ್ರಂಥ.djvu/೧೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಪ್ರಾಚೀನ ಇತಿಹಾಸ ಪಕ್ಷದ್ದು ಬ್ರಹ್ಮಸಿದ್ಧಾಂತವು. ಈ ವ ರು ಪಕ್ಷಗಳು ಬೇರೆ ಬೇರೆ ಇರುವ ಕಾರಣವೇನೆಂದರೆ ವರ್ಷದ ಮಾನವು ಪ್ರತಿಯೊಂದ ಪಕ್ಷದಲ್ಲಿ ಸ್ವಲ್ಪ ಭಿನ್ನವಿದೆ; ಮತ್ತು ಯಾವುದೊಂದು ಕಾಲದಲ್ಲಿ ಉದಾಹರಣಾರ್ಧ, ಕಲ್ಪದಲ್ಲಿ ಅಧವಾ ಮಹಾಯುಗದಲ್ಲಿ ಆಗ ವ ಗ್ರಹಾದಿಗಳ ಗತಿಯ > ಭಿನ್ನವಿದೆ. ಮಿಕ್ಕ ಯಾವತ್ತೂ ಮಾತುಗಳು ಬಹುಶಃ ಒಂದೆ ಇರುತ್ತವೆ. - ಮೊದಲನೆಯ ಆರ್ಯಭಟ್ಟ-ಇವನ ಶಕ ೩೯೮ರಲ್ಲಿ ನಾಟಣಾದಲ್ಲಿ ಹುಟ್ಟಿದನ , ಈತನು ಆರ್ಯಭಟೀಯ ಎಂಬ ಗ್ರಂಥವನ್ನು ಒರೆದಿದ್ದಾನೆ. ಅದಕ್ಕೆ ಆರ್ಯಸಿದ್ಧಾಂತವೆನ್ನುತ್ತಾರೆ. ಈತನು ಬಹಳ ಪ್ರಸಿದ್ದ ಜ್ಯೋತಿಷಿಯ... ಜ್ಯೋತಿಷಶಾಸ್ತ್ರದಲ್ಲಿ ಉದ್ದುದ್ದ ಅಂಕಿಗಳನ್ನು ಹಾಕುವ ಪ್ರಸಂಗವು ಮೇಲಿಂದ ಮೇಲೆ ಬರುತ್ತದೆ. ಈ ಆರ್ಯಭಟ್ಟನು ಅಂಕಿಗಳನ್ನು ಸಂಕ್ಷೇಪವಾಗಿ ಮಾಡ ವುದಕ್ಕೆ ಹೊಸದೊಂದು ಯೋಜನೆ ಯನ್ನು ಹುಡ ಕಿ ತೆಗೆದನು. ಗುರ ಮತ್ತು ಒುಧ ಇವರ ಭಗಣ ಎಂದರೆ ಪ್ರದಕ್ಷಿಣಾ ಕಾಲವನ್ನು ಹೊಸದಾಗಿ ತಿಳಿಸಿದನು. ಸೃದ್ಧಿಯು ತನ್ನ ಸಲು ತಿರುಗ ಇದೆಂಬುದನ್ನು ಮುಂದೆ ತಿಳಿಸಿದವನು ಇವನೆ. ಕರ್ನಾಟ ಕದ ವೈಷ್ಣವ ಜನರು ಆರ್ಯಭಟ್ಟನ ಅಭಿಮಾನಿಗಳು. ವರಾಹ ಮಿಹಿರ-ಈತನೂ ಒಬ್ಬ ಪ್ರಸಿದ್ದ ಜ್ಯೋತಿಷಿಯು. ಈತನ ಗ್ರಂಧ ಕಾಲವ ಶಕ ೪೨೭. ಈತನು ಪಂಚಸಿದ್ಧಾಂತವಂಬ ಗ್ರಂಧ ವನ್ನು ಬರೆದನು. ಬ್ರಹ್ಮಗುಪ್ತ-ಈತನು ಶಕ ೫೫೦ರಲ್ಲಿ ಆಗಿಹೋದನು. ಈತನು ಸ್ವತಂತ್ರ ಶೋಧಕನು. ಈತನು ತನ್ನ ವಯಸ್ಸಿನ ೬೭ನೆಯ ವರುಷದಲ್ಲಿ ಖಂಡಖಾದ್ಯವೆಂಬ ಕರಣಗ್ರಂಧವನ್ನು ಮಾಡಿದನು. ಬ್ರಹ್ಮ ದೇವ-ಈತನು ಕರಣಪ್ರಕಾಶವೆಂಬ ಗ್ರಂಥವನ್ನು ಶಕ ೧೦೧೪ರಲ್ಲಿ ಮಾಡಿದನು. ಈತನು ಆರ್ಯಭಟ್ಟನ ಪಕ್ಷದವನು. ಈತನ ಕರಣಪ್ರಕಾಶ ಗ್ರಂಧದ ಮೇಲಿಂದ ಯಾವುದೆಂದು ತಿಧಿಯನ್ನು ತೆಗೆದರೆ, ಅದು ಸೂರ್ಯ ಮತ್ತು ಬ್ರಹ್ಮಸಿದ್ದಾಂತಗಳ ತಿಧಿಗಿಂತ ೨-೩ ಗಳಿಗೆ ಹೆಚ್ಚು ಬರುತ್ತದೆ.