ಪುಟ:ತೊಳೆದ ಮುತ್ತು.pdf/೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಸಂಪೂರ್ಣ-ಕಥೆಗಳು

ಬರಲೊಲ್ಲದು. ಎದೆ ಡವಡವನೆ ಹಾರುತ್ತಿತ್ತು.

ಧ್ರುವರಾಯನ ಮನಸ್ಸಿನ ಸ್ಥಿತಿಯಾದರೂ ಹಾಗೆಯೇ ಆಗಿತ್ತು. ಸಮಯದಲ್ಲಿ ರಮಾ ಸುಂದರಿಯು ತನ್ನ ಮಂದಿರದಲ್ಲಿ ಓರ್ವಳೇ ಆಗಿರಬಹುದೆಂದು ನೆನಿಸಿ ಅವನು ಸಮಯವನ್ನು ಸಾಧಿಸಿ ಅಲ್ಲಿಗೆ ಬಂದಿದ್ದನಾದರೂ ಅಲ್ಲಿ ಅವಳನ್ನೇ ಕಾಕಿನಿಯನ್ನು ಕಂಡಾಕ್ಷಣವೇ ಅವನೆದೆಯಲ್ಲಿ ವಿದ್ಯುದಾಘಾತವಾದಂತಾಯಿತು. ಉದ್ವೇಗದಿಂದ ಒಮ್ಮೆಲೆ ಎದೆಯುಬ್ಬಿ ಅವನ ಅಂಗಾಂಗಗಳಲ್ಲೆಲ್ಲ ಒಳಗಿಂದೊಳಗೆ ರಕ್ತವು ಚಮ್ಮಾಡಿ ಹರಿದಾಡಲಾರಂಭಿಸಿದ್ದರಿಂದ ಪಂಚೇಂದ್ರಿಯ ವ್ಯಾಪಾರಗಳಿಲ್ಲ ಕಟ್ಟಾಗಿ ನಿಂತವು. ಕೆಲವೊಂದು ಮನೋಗತವನ್ನು ಅವನು ರವಾಸುಂದರಿಗೆ ಅರುಹಬೇಕೆಂದು ಬಂದದ್ದು ನಿಜ; ಆದರೆ ಒಡೆದುಹೋದ ಅವನ ಹೃದಯದೊಳಗಿನ ವಿಚಾರಗಳೆಲ್ಲ ಸೋರಿ ಹೋಗಿದ್ದವು. ಮೂಢನಂತೆ ನಿಂತುಕೊಂಡನು. ಮರ್ಯಾದಶೀಲೆಯಾದ ಆ ತರುಣಿಯ ಸಮಯವನ್ನರಿತು "ಬನ್ನಿರಿ, ಏನು ಸಮಾಚಾರ? ” ಎಂದು ಹಾಗೂ ಹೀಗೂ ಮಾಡಿ ಶಿಷ್ಟಾಚಾರದ ಋಣದಿಂದ ಮುಕ್ತಳಾದಳು.

"ವಿಶೇಷವೇನೂ ಇಲ್ಲ. ಆ ನನ್ನ ಲೇಖವನ್ನು ಓದಿದ್ದಾಯಿತೇನು ?" ಎಂದು ಧ್ರುವರಾಯನು ಆಸ್ವಾಧೀನಚಿತ್ತನಂತೆ ವಿಚಾರ ವಾಕ್ಯರಚನೆಗಳನ್ನು ಏಕೀಕರಿಸಲು ಪ್ರಯತ್ನ ಮಾಡುತ್ತೆ ಕೇಳಿದನು

"ತಂದ ದಿವಸವೇ ಓದಿದೆನು. ಈಗಲೇ ಬೇಕಾಗಿರುವದೇನು? ಈ ಸುಲಲಿತವಾದ ಲೇಖವನ್ನು ಕನ್ನಡದಲ್ಲಿ ಭಾಷಾಂತರಿಸಬೇಕೆಂದು ಮಾಡಿದ್ದೇನೆ ” ಎಂದು ಆ ಚಾರುಹಾಸೆಯು ಬಹು ವಿನಯದಿಂದ ನುಡಿದಳು.

"ಅವಶ್ಯ ಅವಶ್ಯ. ಬೇಕಾದಷ್ಟು ದಿವಸ ಇಟ್ಟುಕೊಳ್ಳಿರಿ. ಲೇಖವು ನಿಮ್ಮ ಮನಸ್ಸಿಗೆ ಬಂದಿರುವದೇನು ?"

ರಮಾಸುಂದರಿಯು ಈಗ ಪ್ರಶಸ್ತವಾಗಿ ನಕ್ಕಳು. “ದ್ರುವರಾವ್, ಪ್ರತ್ಯಕ್ಷ ಪಂಡಿತಜೀಯವರು ( ಡಾಕ್ಟರ ಚೌಧರಿ ) ತಲೆದೂಗಿದ ಲೇಖದ ವಿಷಯವಾಗಿ ನಾನು ಅಭಿಪ್ರಾಯವನ್ನು ಕೊಡಲು ಯೋಗ್ಯಳೆ ? ಇದಕ್ಕೂ ದೊಡ್ಡ ದೊಡ್ಡ ವಾದ ಲೇಖಗಳನ್ನು ನೀವು ಬರೆದದ್ದು ನೋಡುವ ಭಾಗ್ಯವು ನನ್ನದಿರಲಿ!

"ರಮಾಸುಂದರೀಬಾಯಿ, ನಿಮ್ಮ ಅಭಿಪ್ರಾಯವನ್ನು ಕೇಳಿ ನಾನು