ಪುಟ:ದಕ್ಷಕನ್ಯಾ .djvu/೧೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೮೮ ಸ 3 ಹಿ ತ ಷಿ ಣಿ ರಾಧಾನಾಧ-ತಾನೊಂದು ಮಹಾಕಾರಸಾಧನೆಗಾಗಿ ರಹಸ್ಯವಾರ್ಗ ದಲ್ಲಿ ಬಂದಿರುವುದರಿಂದ, ಈಗ ಎಲ್ಲಿಗೂ ಬರಲಾಗದೆಂದು ಹೇಳಿ, ನ್ಯಾಯಸ್ಥಾನದ ಗುಪ್ತಗೃಹದಲ್ಲಿಯೇ ಇದ್ದು, ಬಂದಿದ್ದ ಕೆಲಸ ವನ್ನು ನೆರವೇರಿಸಿಕೊಂಡು ತೆರಳಿದನು. ಸುಕನ್ಯಾ- ಹೋಗಲಿ ; ಈ ವಿಷಯದಲ್ಲಿ ಅವನೇನೆಂದನು ? ರಾಧಾನಾಧ.-ಶ್ರೀನಗರದ ಸುತ್ತಮುತ್ತಲ ಹಳ್ಳಿಗಳಲ್ಲಿ ರೈತರು ದಂಗೆ ಯೇಳುತ್ತಿರುವ ಕಾರಣ, ಅವರ ಧಾಂದಳೆಯನ್ನಡಗಿಸಬೇಕೆಂದು, ಸರ್ಕಾರದವರು ಆತನಿಗೆ ಇನ್ನೂ ರುಮಂದಿ ಭಟರುಳ್ಳ ಒಂದು ಸಣ್ಣ ದಳವನ್ನು ವಶಪಡಿಸಿರುವರಂತೆ, ಅವರ ರಂಧ್ರಾನ್ವೇಷಣ ದಲ್ಲಿರುವ ತಾನು, ಕಾವ್ಯ ಸಾಧನೆಯಾಗುವ ವರೆಗೂ ತನ್ನ ನೆಲೆಯ ನ್ಯಾರಿಗೂ ತೋರಿಸಲಾರನಂತೆ ! ಮಾಡುವುದೇನು ? ಸತಿಪತಿಯರ ಸಂಭಾಷಣದ ಮಧ್ಯದಲ್ಲಿಯೇ ಹೊರಗೆ ಕಾವ ಲಿದ್ದ ರೈಮಾನನು ಬಂದು ವಿನಯದಿಂದ- ಪೊಲೀಸು ಇ೯ ಸ್ಪೆಕ್ಟರ್‌ ದಳ ವಾಯಿಸಿಂಗರವರು ಬಂದಿರುವರು. ' ಎಂದು ತಿಳಿಸಿದನು. ಬಹದ್ದುರನು ಥಟ್ಟನೆದ್ದು ಹೊರಗೆ ಬಂದು, ವಾಚನಶಾಲೆಯ ಬಳಿಯಲ್ಲಿ ನಿಂತಿದ್ದ ದಳ ವಾಯಿಸಿಂಗನ ಕೈಹಿಡಿದು, ವಾಚನಶಾಲೆಯೊಳಹೊಕ್ಕು ಆತನೊಡನೆ ಕುಳಿತು, ಸ್ನೇಹಭಾವದಿಂದ ಕೇಳಿದನು- ಪ್ರಿಯಮಿತ್ರ ! ಇಂದಿನ ವಿಶೇ ಷವೇನು ? ನಿನ್ನ ಮುಖಭಾವವೇನೋ ಹೊಸಸುದ್ದಿಯನ್ನು ತಂದಿರುವಂತೆ ಹೇಳುತ್ತಿದೆಯಲ್ಲ ?' ದಳವಾಯಿ-' ಹೊಸಸುದ್ದಿಯೇ ಅಹುದು, ಏನೆಂಬುದನ್ನು ಈ ನೋಟೀ ಸಿನಿಂದಲೇ ತಿಳಿಯಬಹುದು !” ಎಂದು ಅಂಗಿಯ ಕಿಸೆಯಲ್ಲಿದ್ದ ಕಾಗದವೊಂದನ್ನು ತೆಗೆದು ಬಹದ್ದು ರನ ಕೈಗಿತ್ತನು. ಬಹುರ-ಕಾಗದವನ್ನು ಮೂರುನಾಲ್ಕು ಬಾರಿ ತಿರುತಿರುಗಿಸಿನೋಡಿ. ಮತ್ತೆ ದಳವಾಯಿಸಿಂಗನ ಕೈಯಲ್ಲಿಯೇ ಇರಿಸಿ-“ ಅಯ್ಯಾ ! ಈಗ