ಪುಟ:ದಕ್ಷಕನ್ಯಾ .djvu/೧೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದ ಕ ಕ ನಾ ೯೫ ದಳವಾಯಿಸಿಂಗನು ಸಂತೋಷದಿಂದ ಭಟನೊಡನೆ ಒಳ ಹೊಕ್ಕು, ಉಪ್ಪರಿಗೆಯನ್ನು ಹತ್ತಿ ಭಟನ ತೋರಿದ ಕಿರುಮನೆಯ ಬಳಿಗೆ ಬಂದು ನಿಂತು, ಬಗ್ಗಿ ನೋಡಿದನು. ಮನೆಯೊಳಗೆ ಅಲ್ಲಲ್ಲಿ ಯಂತ್ರಗಳೂ, ಯಂತ್ರೋಪಕರಣಗಳೂ ಇರಿಸಲ್ಪಟ್ಟಿದ್ದುವು. ಮರದ ಒರಗುಮಂಚದಮೇಲೆ, ಛಾಯಾಗ್ರಾಹಕ ಯಂತ್ರವನ್ನೂ ಶಬ್ದ ಗ್ರಾಹಕ ಯಂತ್ರವನ್ನೂ ಮುಂದಿಟ್ಟು, ಅದನ್ನೇ ನೋಡುತ್ತ ಕುಳಿತಿದ್ದ ನಮ್ಮ ಶ್ರೀದತ್ತ ಕುಮಾರನನ್ನು ಕಂಡು, ದಳವಾಯಿ ಸಿಂಗನ ಮುಖವು ಪ್ರಫುಲ್ಲವಾಯಿತು. ಪ್ರೀತಿವ್ಯಂಜಕ ಸ್ವರದಿಂದ ಹೇಳಿದನು- ' ಸರದಾರರಿಗೆ ಜಯಲಕ್ಷ್ಮಿಯು ಕೈಸೇರಲಿ' - ಶ್ರೀದತ್ತ ಕುಮಾರನು ಎದ್ದು ಒಂದು ದಳವಾಯಿಸಿಂಗನಿಗೆ ಹಸ್ತಲಾಘವ (Shake hands) ಎತ್ತು, ಮನ್ನಣೆಯಿಂದ ಕರೆತಂದು ಮಂಚದಮೇಲೇರಿಸಿ, ತಾನೂ ಕುಳಿತು ಕಿರುನಗೆಯಿಂದ ಕೇಳಿದನು.- ' ದಳವಾಯಿಸಿಂಗಜೀ ! ವಿಶೇಷವೇನು ?' ದಳವಾಯಿ-ಸುಹಾಸದಿಂದ-'ಸರದಾರರನ್ನು ವರಿಸಲು ಜಯಲಕ್ಷ್ಮಿಯು ಕಾದಿರುವಳೆನ್ನು ವುದೇ ವಿಶೇಷವು.' ಸುಹೃದರೇ' ಕ್ಷಮಿಸಿರಿ, ಇಂದಿನವರೆಗೂ, ಶ್ರೀದತ್ತಕುಮಾರನ ಆಜನ್ಮ ವೃತ್ತಾಂತವನ್ನು ಹೇಳದೆ ಬಿಟ್ಟಿದ್ದುದು ತಪ್ಪು. ಆದರೆ, ಕಾಲವು ಅನುಕೂಲಿಸಲೆಂದು ಬಿಟ್ಟಿದ್ದ ನಮಗೆ ಈಗಲೇ ವಿವರಿಸುವುದು ಸರಿಯಾಗಿ ಕಾಣುತ್ತಿದೆ. ಶ್ರೀದತ್ತಕುಮಾರನು, ರಾವ್ ಬಹದ್ದುರ್‌ ರಾಧಾನಾಧ ರಾಯನ ಅಕ್ಕನ ಮಗನು, ಈತನ ತಂದೆಯು ಶ್ರೀನಗರದ ರಾಜಸನ್ನಿ ಧಿ ಯಲ್ಲಿ ಪ್ರಮುಖನಾದ ದಳಪತಿಯಾಗಿದ್ದನು. ಕುಮಾರನ ಹೊರತು ಉಳಿದ ಆತನ ಒಡಹುಟ್ಟಿದವರೆಲ್ಲರೂ ಮಾರಿಕೋಪದ್ರವದಿಂದ ಚಿಕ್ಕಂದಿನಲ್ಲಿಯೇ ಕಾಲವಾದರು, ಪುತ್ರಶೋಕಸಂತಪ್ತನಾಗಿ, ಕುಮಾರನ ತಂದೆಯ ಮಗನ 17 ನೆಯ ವರ್ಷದಲ್ಲಿಯೇ, ಅವನನ್ನೂ ಮತ್ತು ಸತಿಪರಾಯಣೆಯಾ