ಪುಟ:ದಕ್ಷಕನ್ಯಾ .djvu/೧೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦೬ ಸ ತಿ ಹಿ ತ ಷಿ ಣಿ ನ್ನು ನೋಡಿ, ನಿಮ್ಮಲ್ಲಿ ಒಂದೆರಡು ಮಾತುಗಳನ್ನು ಹೇಳಿ ಬಾರೆಂದು ಅಂದಿರುವರು. ಎದ್ದು ಕುಳಿತು ಕೇಳಿದರೆ, ಹೇಳಿಹೋಗುತ್ತೇನೆ.' ಮಲಗಿದ್ದ ವ್ಯಕ್ತಿಯು ಹಾಗೆಯೇ ಮೆಲ್ಲನೆ-' ಯಾವ ಮಾತಿ ದ್ದರೂ ಹಾಗೆಯೇ ಹೇಳಿಹೋಗು.' ಎಂದು ಹೇಳಿದಳು. ನರಸಿಂಗ-ಹಾಗೂ ಆಗಲಿ, ನಿಮ್ಮ ತಾಯಿಯವರು ಹೀಗೆ ಹೇಳಿರು ವರು- ಮಗು ! ನೀನು ಭಯಪಡಬಾರದು. ನೀನು ಅನ್ಯರ ಕೈಸೇರಿಹೋಗಿಲ್ಲ, ನಿಮ್ಮ ಚಿಕ್ಕಮ್ಮನ ತಂದೆಯಬಳಿಯಲ್ಲಿರು ಯೆ, ಧೈರವಾಗಿರು ! ನಾನಿಲ್ಲಿಗೆ ಬಂದು ಮೋಹನನೊಡನೆ ಸುಖವಾಗಿದ್ದೇನೆ. ನಿಮ್ಮ ಚಿಕ್ಕಮ್ಮನು ನನ್ನಲ್ಲಿ ಬಹು ಪ್ರೇಮವಿರಿ ಸಿರುತ್ತಾಳೆ, ಅವಳ ಪ್ರೀತಿಗೆ ನಾನು ಕಟ್ಟು ಬಿದ್ದಿರುತ್ತೇನೆ. ಯಾವ ಭಾಗಕ್ಕೂ ಕೊರತೆಯಿಲ್ಲ. ಅದಲ್ಲದೆ, ನಿಮ್ಮ ಚಿಕ್ಕಮ್ಮನ ತಮ್ಮ ನಾದ ಸುಪಂಧನೆಂಬುವವನಿಗೆ ನಿನ್ನನ್ನು ಕೊಟ್ಟು ಮದುವೆಮಾಡಬೇ ಕೆಂಬ ಇಷ್ಟವಿದೆ. ಅವಳ ಈ ಇಷ್ಟವನ್ನು ನಾವು ಒಪ್ಪಬೇಕಾಗಿ ರುವುದರಿಂದ, ನೀನು ಇದಿರಾಡದೆ ಒಪ್ಪಿಕೆಯನ್ನು ಕೊಡಬೇಕಾಗಿದೆ.' ವ್ಯಕ್ತಿ-ಇಷ್ಟೇಯೋ-ಇನ್ನೂ ಇದೆಯೋ ? ನರಸಿಂಗ-ನೀವು ಇದಕ್ಕೆ ಒಪ್ಪಿದರೆ, ಬೇಗನೆಯೇ ನಿಮ್ಮನ್ನು ತಮ್ಮಲ್ಲಿಗೆ ಕರೆಯಿಸಿಕೊಳ್ಳುತ್ತಾರಂತೆ ! ವ್ಯಕ್ತಿ-ವಿಕೃತಸ್ವರದಿಂದ ' ನನ್ನ ಒಪ್ಪಿಗೆಯನ್ನು ಕೇಳಬೇಕಾಗಿಲ್ಲ. ಬೇಕಾದಹಾಗೆ ಮಾಡಬಹುದು. ನೀನು ಹೋಗು.' ಸುಪಂಧನಿಗೆ ಸಂತೋಷಾತಿಶಯದಿಂದ ಮುಖವು ರಂಗೇರಿ, ಮೆಯ್ಯ ವಿರೆದ್ದು, ಹೃದಯದಲ್ಲಿ ಆತುರವು ತಲೆದೋರಿತು, ನಿಲ್ಲಲಾರದೆ, ಅವಸರದಲ್ಲಿ ಬಾಗಿಲಿಗೆ ಮತ್ತೆ ಬೀಗಹಾಕಿ, ನರಸಿಂಗನನ್ನು ಕುರಿತು ಹೇಳಿ ದನು- ನರಸಿಂಗ ! ನಾನು ಈಗಲೇ ಹೋಗಿ, ತಂದೆಯಬಳಿಯಲ್ಲಿ ಈ