ಪುಟ:ದಕ್ಷಕನ್ಯಾ .djvu/೧೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

იია. ಸ ತಿ ಹಿ ತ ಷಿ ಣಿ ಕರ್ಮಚಾರಿ-ನೀನೇ ಊಹಿಸಿ ಹೇಳಲಾರೆಯಾ ? ನನ್ನನ್ನು ನೀನೆಂದೂ ನೋಡಿಲ್ಲವೆ ? ವಿಂದೆ-ಈಗ ಸ್ವಲ್ಪ ದಿನಗಳ ಹಿಂದೆಯೇ ನೋಡಿದ್ದ ನೆನಪಿದೆ. ಆದರೆ, ಹೀಗೆಯೇ ಸರಿಯೆಂದು ಹೇಳಲಾರೆ. ಕರ್ಮಚಾರಿ-ಹೋಗಲಿ, ನೀನು ಸರ್ದಾರ್‌ ಧರ್ಮಪಾಲನನ್ನು ನೋಡಿ ರುವೆಯೋ ? ವಿಂದೆಆತನನ್ನು ಸಾಕ್ಷಾತ್ತಾಗಿ ನೋಡಿಲ್ಲ. ಆದರೂ, ಆತನ ಅದ್ಭುತ ಕಲ್ಪನಾಶಕ್ತಿ, ವಿದ್ಯಾ, ಸಾಹಸಾದಿ ಗುಣವರ್ಣನೆಗಳನ್ನು ಪತ್ರ ಮೂಲಕವಾಗಿಯೂ, ನಮ್ಮ ತಾತನ ಮುಖದಿಂದಲೂ ಕೇಳಿ ತಿಳಿ ದಿರುವೆನು. ಕರ್ಮಚಾರಿ-ಹಾಗಾದರೆ, ಆತನನ್ನೇ ಸಾಕ್ಷಾತ್ಕರಿಸಿಕೊಂಡಿರುವುದಾಗಿ ತಿಳಿ. ವಿಂದೆ-ಭಯ-ಗೌರವಗಳಿಂದ ಒಂದೆರಡು ಹೆಜ್ಜೆ ಹಿಮ್ಮೆಟ್ಟಿ ತಲೆಬಾಗಿ ನಿಂತು, ಏನನ್ನೋ ಹೇಳಹೋದಳು ; ಆಗಲಿಲ್ಲ. ಕಣ್ಣುಗಳಲ್ಲಿ ನೀರುತುಂಬಿತು ; ಕೊರಳು ಕಟ್ಟಿತು, ಹಾಗೂ ಬಿಡದೆ ಪ್ರಯಾಸ ದಿಂದ-' ಮಹಾತ್ಮರು ನಿಂತಿರುವುದೇಕೆ ?” ಎಂದು ಮಾತ್ರವೇ ಹೇಳಿ ಸುಮ್ಮನಾದಳು. ಧರ ಪಾಲ (ಕತ್ಮಚಾರಿ) -ತಲೆದೂಗಿ ನಕ್ಕು ಮಂಚದ ಮೇಲೆ ಕುಳಿತು, ವಿಂದೆಯ ಕೈ ಹಿಡಿದು ಸಲಿಗೆಯಿಂದ- ವಿಂದಾ ! ನಿನ್ನೀ ಮರಾ ದೆಯು ನನಗೆ ಬೇಕಾಗಿಲ್ಲ ; ನಾನು ನಿನಗೆ ಅನ್ಯನೂ ಅಲ್ಲ ; ನಿನಗೆ ಆತ್ಮೀಯನೆಂದೇ ತಿಳಿದು, ನಿನ್ನೀ ಸಂಕುಚಿತಭಾವವನ್ನು ದೂರ ಮಾಡು ; ಸಲಿಗೆಯಿಂದ ಮಾತನಾಡು.' ಎಂದೆ-ಕುತೂಹಲದಿಂದ ತಲೆಯೆತ್ತಿ ಕೇಳಿದಳು-' ನಾನಿಲ್ಲಿರುವುದು ಹೇಗೆ ತಿಳಿಯಿತು ? ನಿನ್ನೆಯ ರಾತ್ರಿಯಲ್ಲಿ ಕರ್ಮಚಾರಿಯೆಂದು