ಪುಟ:ದಕ್ಷಕನ್ಯಾ .djvu/೧೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

|| ಶ್ರೀ | ಚತುರ್ಥ ಪರಿಚ್ಛೇದ . ಇt (ಮುಖ್ಯಿಗೆ ಮುಯಿ ) ಮಾನಿನೀಯರೇ ! ಮುಖ್ಯಿಗೆ ಮುಯ್ಯ ತೀರಿಸುವುದು

  1. ನಮ್ಮಲ್ಲಿ ವಾಡಿಕೆಯಾಗಿದೆಯಲ್ಲವೇ ? ಕರ್ಮಕ್ಕೆ ತಕ್ಕ * ಫಲಾನುಭವವಿದೆಯೆಂದು ಹೇಳುವ ಮಾತೂ ಇದಕ್ಕೆ

••• ಸರಿಹೋಲುವುದಲ್ಲವೇ ? ಏಕೆಂದರೆ, ಸನ್ಮಾನವನ್ನು ಅಪೇಕ್ಷಿಸುವವರು ಇತರರನ್ನು ಸನ್ಮಾನಿಸಲೇಬೇಕು. ಹಾಗಿಲ್ಲವಾದರೆ, ಇವರಿಗೆ ಸನ್ಮಾನವು ಸ್ಥಿರವಾಗಿರಲಾರದು. ಹಾಗೆಯೇ ಸುಖವನ್ನು ಕೋರುವವರೂ ಇತರರ ಕಷ್ಟ ಸುಖಗಳನ್ನು ಚೆನ್ನಾಗಿ ತಿಳಿದು ನಡೆಯ ಬೇಕು, ಹಾಗಿಲ್ಲದೆ ಇತರರನ್ನು ಪೀಡಿಸಿ, ತಾವು ಸುಖಪಡಬೇಕೆಂಬ ಬಯಕೆಗೆ ಎಂದಿಗೂ ಸತ್ಸಲವು ದೊರೆಯದು, ನ್ಯಾಯಾರ್ಜಿತವಾದ ಸುಖ-ಭೋಗ-ಸಂಪದಗಳಿಂದಾಗುವ ಸಂತೋಷವೇ ಸುಸ್ಥಿರವು, ಅನ್ಯಾ ಯಾರ್ಜಿತವಾದ ಸಂಸದಗಳು ಶಾಶ್ವತ ನರಕಾರ್ಣವದಲ್ಲಿ ಮುಳುಗಿಸಿ ನರಲಿಸುವ ದುಷ್ಪರಿಣಾಮಕಾರಕಗಳಾಗಿವೆ. ಹೇಗೆಂಬುದನ್ನು ತಿಳಿಯಬೇ ಕೆಂಬುವವರು ಎಂದೆಯನ್ನು ಸೆರೆಹಿಡಿದಿದ್ದ ಬಲವಂತನ ಫಲಾನುಭವವನ್ನೇ ವಿಚಾರಕ್ಕೆ ತಂದರೆ ಸಾಕಾಗಿದೆ. ಎಂದೆಗೆ ಧರ್ಮಪಾಲನೆ ಅಭಯಪ್ರದಾನವಾದ ಮರುದಿನ ಮಧ್ಯಾ ಹೃ ದಲ್ಲಿ, ಆಹಾರವನ್ನು ಕೊಡಲು ಬಲವಂತನು ಎಂದಿನಂತೆಯೇ ಬಂದು, ಬಾಗಲಿಗೆ ಹಾಕಿದ್ದ ಬೀಗವನ್ನು ತೆಗೆದು, ಬಾಗಿಲನ್ನು ಮೆಲ್ಲನೊಮ್ಮೆ ಹಿಂದಕ್ಕೆ ತಳ್ಳಿದನು. ಒಳಗಡೆ ಅಗಣಿಯನ್ನು ತಗಲಿಸಿರಲಿಲ್ಲವಾದುದರಿಂದ, ಬಾಗಿಲು ಹಿಂದಕ್ಕೆ ತೆರೆದುಹೋಯಿತು. ಬಲವಂತನು ಒಳಹೊಕ್ಕು