ಪುಟ:ದಕ್ಷಕನ್ಯಾ .djvu/೧೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

|| ಶ್ರೀ || ಪಂಚಮ ಪರಿಚ್ಛೇದ. (ವಿಪತ್ಯಾಸ) ಸೆದರಿಯರೇ ! ಒಲವಂತನನ್ನು ಬಂದಿಯಾಗಿ ಮಾಡಿ, ಮಾರುವೇಷದಿಂದ ಹೊರಟುಹೋದ ವಿಂದೆಯ ಮುಂದಿನ ವಿಚಾರವೇನಾಯಿತೆಂದು ಕೇಳುವಿರಲ್ಲವೇ ? •8070° ನಿಮ್ರಾ ಕೋಮಲ ಹೃದಯದಲ್ಲಿ ನಿಂದೆಯನ್ನು ಕುರಿತು, ಕನಿಕರವುಂಟಾಗುವುದೂ ಸಹಜವೇ ಸರಿ. ಆದರೆ, ಈಗಲೇ ಅವಳ ವಿಚಾರವನ್ನಿಲ್ಲಿ ವಿವರಿಸುವಂತಿಲ್ಲವಾದುದರಿಂದ ತಾಳ್ಮೆಯಿರಲಿ ಮೊದಲು, ಬಲವಂತನ ಸ್ಪಿತಿಯನ್ನೇ ವಿಚಾರಮಾಡಿ ನೋಡುವ. ಪಾಪ ! ಬಲವಂತನೇನು ಮಾಡಬಲ್ಲನು ? ರಾತ್ರಿ ಏಳುಗಂಟೆಯಾ ಗುತ್ತ ಬಂದಿದೆ. ಇನ್ನೂ ಬಾಗಿಲನ್ನು ತೆಗೆಯಲಿಕ್ಕಾರೂ ಬಂದಂತೆ ಕಾಣ ಲಿಲ್ಲ. ಹೊರಗೆ ಹೊರಡಲು ಬೇರೆ ಮಾರ್ಗವಿಲ್ಲ, ಹಸಿವು, ಬಾಯಾರಿಕೆ, ಬಳಲಿಕೆಗಳನ್ನು ತಡೆಯುವಷ್ಟರ ತ್ರಾಣವಾದರೂ ಈ ಮುದಿಪ್ರಾಣಿಗೆ ಹೇಗೆ ಬರಬೇಕು ? ಕೂಗಿಕೂಗಿ ಬೇಸತ್ತನು. ಆ ಬೆಂಗಾಡಿನಲ್ಲಿ ಇವನ ಕೂಗನ್ನು ಕೇಳುವವರಾರು ? ಹಾಗೂ ಇವನಿಲ್ಲಿ ಸೆರೆಯಾಗಿ ಬಿದ್ದಿರುವು ದಾದರೂ ತಿಳಿಯುವುದು ಹೇಗೆ ? ಈ ವೇಳೆಯಲ್ಲಿ ಇವನನ್ನು ಸಂತಯಿಸು ವವರಾರು ? ಸುಮಾರು ಎಂಟುಗಂಟೆ ಹೊತ್ತಿಗೆ ಹೊರಗಡೆಯ ಬೀಗವನ್ನು ಯಾರೋ ತೆಗೆದಂತಾಯಿತು. ಬಲವಂತನು ಎದ್ದು ಬಂದು, ಬಾಗಿಲ ಬಳಿ ಯಲ್ಲಿ ನಿಂತು ಹಮ್ಮೆಸಿನೋಡಿದನು, ಬಾಗಿಲು ಹಿಂದಕ್ಕೆ ತೆರೆಯಲ್ಪಟ್ಟು