ವಿಷಯಕ್ಕೆ ಹೋಗು

ಪುಟ:ದಕ್ಷಕನ್ಯಾ .djvu/೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



ಕ್ಷಮಾಪಣೆ.

ಯಾರನ್ನು ಕುರಿತು ಕ್ಷಮೆಯನ್ನು ಕೋರಬೇಕು ? ಏನೆಂದು ಹೇಳಿ ಕೇಳಬೇಕು ? ಇದಾವುದೂ ಬಗೆಹತ್ತುವಂತಿಲ್ಲ. ಕ್ಷಮಾಪಣೆಯನ್ನು ಕೋರುವದರಿಂದ ಎಷ್ಟರ ಫಲವಾಗಬಹುದೋ, ಅಷ್ಟೇ ಫಲವೇ ಕೇಳದಿದ್ದರೂ ದೊರೆಯಬಹುದು ಎಂದರೆ-ಕ್ಷಮಾಶೀಲರಾದ ಮಾನನಿಧಿಗಳು, ಅದೊಂದು ತಮ್ಮ ಜನ್ಮ ವ್ರತವೆಂದು ತಿಳಿದೇ ಇರುವುದರಿಂದ, ತಾವು ಕೋರಲ್ಪಡದೆಯೇ ಅಲ್ಪಜ್ಞರ ಎಷ್ಟೇ ಅಪರಾಧಗಳನ್ನಾದರೂ ಕ್ಷಮಿಸಿ, ಅವರನ್ನು ಉನ್ನತಿಗೆ ತರಬಲ್ಲವರಾಗಿರುವರು ಅಂತವರಲ್ಲಿ ಕ್ಷಮೆಯನ್ನು ಕುರಿತು ಕೇಳಬೇಕಾದ ಅಗತ್ಯವೇ ಉಳಿದಿರುವುದಿಲ್ಲ. ಕ್ಷಮಿಸಿಲ್ಲದವರಲ್ಲಿ ಹಲ್ಗಿರಿದು ಬೇಡಿದರೂ ಫಲವಿಲ್ಲ, ಇದನ್ನು ತಿಳಿದೂ ಇಂದಿನ ಕ್ಷಮಾಪಣೆಯ ದೀರ್ಘಲೇಖನಕ್ಕೇಕೆ ಪ್ರಯತ್ನಗೊಳ್ಳಬೇಕೆಂದರೆ-ಲೋಕಮರ್ಯಾದೆಯನ್ನು ಯಾರೂ ಮಾರಬಾರದಷ್ಟೆ , ಕರ್ತವ್ಯದಲ್ಲಿ ಕಟ್ಟುಬಿದ್ದಿರುವ ನಾವು ಕ್ಷಮಾಪಣೆಯನ್ನು ಕೊರಲೇಬೇಕು.

ಅಪರಾಧವೆಂತಹುದೆಂದರೆ, ಹಿತೈಷಿಣಿಗೆ ಈ ವರೆಗೂ ಮುತ್ತಿದ್ದ ಅಜ್ಞಾತವಾಸವೆಂಬುದೇ ಉತ್ತರವು, ಏತರಿಂದ ಎಂಬುದಕ್ಕೆ ಸಮಾಧಾನವಾಗಿ, ಯಾವ ಕಾರಣಗಳನ್ನು ಹುಡುಕುವ ? ಸಾಮಾನ್ಯವಾಗಿ ನೋಡಿದರೆ, ನಾಲ್ಕು ಮುಖ್ಯ ಕಾರಣಗಳು ಮುಂದೆ ನಿಲ್ಲುವವು.

1. ಪತ್ರಪ್ರಚಾರದ ಅಪದೆಸೆಗೆ ಮುದ್ರಾಲಯದವರ ಅವಿಧೇಯತೆ, ಅಲಸತೆ, ಆಶಾಪರತೆಗಳೇ ಪ್ರಬಲ ಕಾರಣವೆಂಬುದು ಮೊದಲನೆಯ ಸಮಾಧಾನವು

2, ವಾಚನಾಭಿರುಚಿಯಿಲ್ಲದ ಈ ಕರ್ಣಾಟಕದಲ್ಲಿ, ಭಾಷಾದ್ರೋ ಹಿಗಳಾದ ದೇಶೀಯರ ನಿಷ್ಟುರತೆಯೇ ಪತ್ರಿಕೆಗಳ ಅವನತಿಗೆ ಕಾರಣವೆಂಬುದು ಎರಡನೆಯ ಸಮಾಧಾನವು.