ಪುಟ:ದಕ್ಷಕನ್ಯಾ .djvu/೧೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨೮ ಸ ತಿ ಹಿ ತ್ಯ ಷಿ ಣಿ ಲಿಲ್ಲ. ಹುಡುಗಿಯ ಚಿಂತೆಯ, ನಿಮ್ಮನ್ನು ಕುರಿತು ಭಯವೂ ಹುಟ್ಟಿದುವು. ಆಗಲೇ ಅಲ್ಲಿಂದೆದ್ದು ಅಲ್ಲಲ್ಲಿ ವಿಚಾರಿಸಿದೆನು. ಅದ ರಿಂದ ನರಸಿಂಗನು ಈಗಲೇ ದೀಪವನ್ನು ಹಿಡಿದು ತೋಟದಮನೆಗೆ ಹೋಗುತ್ತಿದ್ದನೆಂದು ಒಬ್ಬಿಬ್ಬರು ಹೇಳಿದರು. ಅದನ್ನು ಕೇಳಿದ ನಾನು ಮತ್ತೂ ದಿಗಿಲುಬಿದ್ದು ಆಳಿನೊಡನೆ ಇಲ್ಲಿಗೆ ಓಡಿಬಂದೆನು. ಇಲ್ಲಿಯಾದರೂ ವಿಪರೀತವೇ ನಡೆದುಹೋಗಿದೆ. ಬಲವಂತ-ಇದೇನನ್ಯಾಯ ! ನನಗೆ ಅವನಲ್ಲಿ ಸಂಶಯವೇ ತೋರಬೇಡ ವೆ ? ಬಹು ಸತ್ಯಸಂಧನಂತೆಯೇ ತೋರುತ್ತಿದ್ದನಲ್ಲಾ ! ಸುಪಂಧ-ಅಹುದು ; ಅದೇ ಮಾಟಗಾರರ ಲಕ್ಷಣವು. “ ಕಳ್ಳರಜಾಡೆ ಕಳ್ಳರಿಗರಿವು' ಎಂಬಂತೆ ಅವನ ಹುಳುಕನ್ನು ಆ ದಿನವೇ ಕಂಡು ಹಿಡಿಯುತ್ತಿದ್ದೆನು, ಆದರೆ ಅಷ್ಟರಲ್ಲಿ ನೀವು ತಡೆದುಬಿಟ್ಟುದರಿಂದ ಆಗಲಿಲ್ಲ. ಈಚೆಗೆ ಅವನು ನನಗೆ ಕಾಣಿಸಿಕೊಂಡುದೇ ಇಲ್ಲ. ಬಲವಂತ-ಹಾಗಾದರೆ ಇವನಾರಾಗಿರಬಹುದು ? ನಮ್ಮ ವನ ಅವಸ್ಥೆ ಯೇನಾಯಿತು ? ಸುಸಂಧ-ಇವನಾವನೋ ಪತ್ತೇದಾರ (Detective) ನಾಗಿ ಬಂದ ರಾಜಕರ್ಮಚಾರಿಯಾಗಿರಬೇಕು, ಇಲ್ಲದಿದ್ದರೆ, ಇಲ್ಲಿಯ ರಹಸ್ಯ ಗಳನ್ನಾದರೂ ತಿಳಿಯುತ್ತಿದ್ದುದು ಹೇಗೆ ? ಸಲಕರಣೆಗಳೆಲ್ಲಿಂದ ಪಡೆಯಬೇಕು ? ನಮ್ಮವನು ದುರ್ದೈವದಿಂದ ಮಾರ್ಗದ ಮಧ್ಯ ದಲ್ಲಿ ಇವನ ಕೈಗೆ ಸಿಕ್ಕಿ ಹೋಗಿರಬೇಕು, ಅವನಿಂದ ಇಲ್ಲಿಯ ಸಂಗತಿಗಳೆಲ್ಲವನ್ನೂ ತಿಳಿದು, ಇವನು ಈ ವೇಷದಿಂದ ಇಲ್ಲಿಗೆ ಬಂದು, ಇಷ್ಟು ಅನರ್ಧವನ್ನೂ ಮಾಡಿ ಹೋಗಿರಬೇಕು. ಬಲವಂತ-ಹೇಗಿರಬಹುದೋ ಪರಮೇಶ್ವರನೊಬ್ಬನಿಗೇ ಗೊತ್ತು! ವಿಷ ಹರಪುರದ ವರ್ತಮಾನವೇನಂತೆ ? ಸುಸಂಧ-ವರ್ತಮಾನವೇನು ?- ಸುನಂದೆಯು ಬಂದುದು ಮೊದಲು, ನಮ್ಮ ಕೆಲಸದಮೇಲೆ ಜಮೀನ್ದಾರರ ಪೂರ್ಣಗಮನವಿರುವುದು.