ಪುಟ:ದಕ್ಷಕನ್ಯಾ .djvu/೧೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದ ಕ ಕ ನ್ಯಾ ೧೩೫ ಸುನಂದೆ-ಕುತೂಹಲದಿಂದ-* ಅದಾರು ಒರೆದಿರುವರು ?' ತಾರಾಪತಿ-ನಿನ್ನ ತಂದೆಯೇ ಬರೆದಿರಬೇಕು. ಸುನಂದೆ-ಏನೆಂದೋ ? ತಾರಾಪತಿ -' ಗಟ್ಟಿಯಾಗಿಯೇ ಓದುವೆನು ; ಕೇಳು ' ಎಂದು ಪತ್ರ ವನ್ನು ಸ್ಪುಟವಾಗಿ ವಾಚಿಸಿದನು. (ವಾಚಕರ ತಿಳಿವಿಗಾಗಿ ಪತ್ರದ ವಿವರವು ಕೊಡಲ್ಪಟ್ಟಿದೆ.) “ ಆಯುಷ್ಯಂತರಾದ ಜಮಾನ್ದಾರರೇ ! ತಮ್ಮ 1-8-15 ರ ಪತಾಭಿಪ್ರಾಯದಂತೆಯೇ ನಾನು, ತಮ್ಮ ಸತೀಪುತ್ರರನ್ನು ಸರಿಯಾದ ಸಹಾಯದೊಡನೆ ನಿಮ್ಮಲ್ಲಿಗೆ ಕಳುಹಿದೆನು. ಆದರೆ, ಅವರು ಸುಖವಾಗಿ ಸೇರಿದರೆಂಬ ಉತ್ತರವು ಈವರೆಗೂ ನನಗೆ ಬಂದಿರುವುದಿಲ್ಲವೆಂದು ಬರೆಯಲು ಚಿಂತೆಯಾಗುತ್ತಿದೆ. ಇಲ್ಲಿಂದ ಹೊರಟ ವರು ನಡುದಾರಿಯಲ್ಲಿ ಕಳ್ಳರಕ್ಕೆಗೆ ಸಿಕ್ಕಿದ್ದರೆಂದೂ, ಹುಡುಗಿ ಕಳ್ಳರ ಪಾಲಾಗಿಹೋದಳೆಂದೂ, ಹುಡುಗನ ವಿಚಾರವೇನಾಯಿತೆಂಬುದನ್ನರಿದವರಿ ಲವೆಂದೂ ಇಲ್ಲಿಯ ಸಂತೆಯ ಸುದ್ದಿಗಳು ಹಬ್ಬಿವೆ. ಈ ವರ್ತಮಾನವು ಕಿವಿಗೆ ಬಿದ್ದಂದಿನಿಂದ ಮನೆಯಲ್ಲಿ ಯಜಮಾನಿ (ನನ್ನ ಪತ್ನಿ) ಯು ಮನೋರೋಗಕ್ಕೆ ಗುರಿಯಾಗಿದ್ದು, ಈಗ ವಾರದಿಂದೀಚೆಗೆ ಹಾಸಿಗೆ ಹತ್ತಿ ಮಲಗಿರುವಳು. ಅವಳ ದೇಹಸ್ಥಿತಿಯ ವಿವರಿಸುವಂತಿಲ್ಲ, ನೋಡುವುದ ರಿಂದ ಮಾನವಪ್ರಯತ್ನದಲ್ಲಿ ನಿರಾಶೆಯೂ, ಈ ಒಡಲ ಬೇಗೆಯೇ ಅವಳ ಅಂತಿಮಕಾಲದ ವ್ಯಾಧಿಯಾಗಿಯೂ ತಿಳಿದುಬರುತ್ತಿದೆ. ಮಾಡತಕ್ಕುದೇನು ? ಎಲ್ಲವೂ ದೈವೇಚ್ಛೆ ! ಈ ವೇಳೆಯಲ್ಲಿ ನಾನಾದರೂ ಹತ್ತಿರದಲ್ಲಿರಬೇಕೆಂದರೆ, ಅದಕ್ಕೂ ಕೇಳಿಬರಲಿಲ್ಲವೆನ್ನ ಬೇಕಾಗಿದೆ. ಇಲ್ಲಿ ನಾನು ಬಲವತ್ತರವಾದ ರಾಜಕಾರದ ನಿರ್ಬಂಧಕ್ಕೆ ದೇಹವನ್ನೊಪ್ಪಿಸಿ ಕುಳಿತು, ಇಂದಿಗೆ ಮೂರುದಿನಗಳಾದುವು. ಅವಳ ಉಪಚಾರ-ವಿಚಾರಾದಿಗಳಿಗೆ ತಕ್ಕವರನ್ನು ಏರ್ಪಡಿಸಿ ಬಂದಿರುತ್ತೇ