ಪುಟ:ದಕ್ಷಕನ್ಯಾ .djvu/೧೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩೬ ಸ ತಿ ಹಿ ತ ಷಿ ಣಿ ನಾದರೂ-' ಯಾವ ವೇಳೆಗೆ, ಎಂತಹ ಸುದ್ದಿಯು ಬರುವುದೋ, ಈ ವೇಳೆಗೆ ಅವಳು ಏನಾಗಿರಬಹುದೋ ?” ಎಂಬ ತಳಮಳವು ಮಾತ್ರ ತಪ್ಪಲಾ ರದು, ಆಗತಕ್ಕುದೆಲ್ಲವನ್ನೂ ಧೈರದಿಂದ ಅನುಭವಿಸುತ್ತಿರಬೇಕ ಲ್ಲವೇ ? ಆದರೆ, ಈ ಅಂತಿಮಕಾಲದಲ್ಲಿ, ಅವಳ ಅಂತ್ಯ ಪ್ರಾರ್ಥನೆಯನ್ನಾ ದರೂ ನಡೆಯಿಸಬೇಕೆಂಬ ಆಶೆಯು ನನಗೆ ಅತ್ಯುತ್ಕಟವಾಗಿರುವುದು. ಅವಳ ಆತ್ಮನು, ಮತ್ತೊಂದುಬಾರಿ,-ಒಂದೇ ಒಂದುಬಾರಿ, ಪುತ್ರಿಯ ಮುಖಾವಲೋಕನದ ಸುಖಾನುಭವ ಮಾಡಿ, ನಿಶ್ಚಿಂತನಾಗಬೇಕೆಂದು ತಪಿ ಸುವಂತೆ ಕಾಣುತ್ತಿದೆ. ಇದನ್ನು ಪೂರ್ಣಮಾಡಿಕೊಡುವ ಭಾರವೂ ತಮ್ಮ ನ್ನು ಸೇರಿರುವುದಲ್ಲವೇ ? ನಾನೂ ಇಲ್ಲಿಗೆ ಬಂದ ಬಳಿಕ, ಮಗನೊಡನೆ ಸುನಂದೆಯು ಸುಖ ವಾಗಿ ಬಂದು ಸೇರಿದಳೆಂಬ ಸುದ್ದಿಯನ್ನರಿತು, ಅದನ್ನೇ ದುರ್ಗಾಪುರಕ್ಕೂ ಪತ್ರಮೂಲಕವಾಗಿ ಬರೆದುಕಳಿಸಿರು ರೆನು – ಅಂತ್ಯ ಸ್ಥಿತಿಯಲ್ಲಿ, ದೇಹವಿ ಸ್ಕೃತಳಾಗಿರುವವಳಿಗೆ ನನ್ನ ಪತ್ರಾಭಿಪ್ರಾಯವು ಮುಟ್ಟುವ ಬಗೆ ಹೇಗೆ ?' ಇದೊಂದು ಯೋಚನೆ ! ಇದಕ್ಕಾಗಿ ನಾನೇ ಅಲ್ಲಿಗೆ ಬಂದು, ಮಗನೊಡನೆ ಸುನಂದೆಯನ್ನು ಕರೆದುಕೊಂಡು ಹೋಗಬೇಕೆಂದು ಯೋಚಿಸಿದೆನು. ಆದರೆ, ನನಗೆ ಇನ್ನೂ ನಾಲ್ಕಾರುವಾರಗಳವರೆಗೂ ಬಿಡುಗಡೆಯಾಗುವಂತಿಲ್ಲ. ಇದ್ದ ಸಂಗತಿಯೆಲ್ಲವನ್ನೂ ವಿಸ್ತರಿಸಿರುವೆನು. ತಮಗೂ ಈ ಅಭಿಪ್ರಾ ಯವು ಯುಕ್ತವಾಗಿ ಕಂಡುಬರುವುದಾದರೆ, ತಮ್ಮ ಪತ್ನಿ ಪುತ್ರರನ್ನು ದುರ್ಗಾಪುರಕ್ಕೆ, ಸಹಾಯಕರೊಡನೆ ಕಳಿಸಿಕೊಡಬೇಕೆಂದು ಕೋರುವೆನು. ಹಾಗೆ ಕಳುಹುವುದಕ್ಕೂ, ಇಲ್ಲದಿರುವುದಕ್ಕೂ ಈ ನೃತ್ಯನ ಮೂಲಕವೇ ಉತ್ತರವು ಬಂದೀತೆಂಬ ದೃಢವಿಶ್ವಾಸದಿಂದ ನಿರೀಕ್ಷಿಸುತ್ತಿರುವ, (ಮುಕ್ಕಾಂ) ಶ್ರೀನಗರ, , ನಿಮ್ಮ ನಿರಂತರದ ಶ್ರೇಯೋಭಿಲಾಷಿ, 26-8--15, ಲಕ್ಷ್ಮಣರಾವ್.'