ಪುಟ:ದಕ್ಷಕನ್ಯಾ .djvu/೧೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪೧ ದ ಕ ಕ ನಾ ಆದರೆ, ಪೋಸ್ಟ್ ಮಾಸ್ಟರರು ಇಂತಹ ಪ್ರಮಾದಗಳನ್ನು ದೂರ ಕಟ್ಟಿ, ದೇಶಸ್ವಾಸ್ಥವನ್ನು ರಕ್ಷಿಸಬೇಕಾದರೆ, ಮೊದಲು ಸೂಕ್ಷ್ಮ ಬುದ್ದಿ, ಶ್ರಮಸಹಿಷ್ಣುತೆ, ನಿರಂತರೋದ್ಯಮಗಳನ್ನು ತಮ್ಮಲ್ಲಿ ಚೆನ್ನಾಗಿ ಬಲಪಡಿಸಿಕೊಂಡಿರಬೇಕು, ಅವುಗಳ ಬಲದಿಂದ ಕಾರಾರಂಭಕ್ಕೆ ಮೊದಲು ಅತ್ಯಲ್ಪ ವಿಷಯವೆಂದೂ, ಇಲ್ಲವೇ ಈ ವಿಚಾರವು ತಮಗೆ ಸೇರಿದುದೇ ಅಲ್ಲವೆಂದೂ ಭಾವಿಸುವ ಭಾಗಗಳೇ, ಕಡೆಗೆ ಮಹತ್ತರವಾಗಿ ಕಂಡುಬರು ವುವು. ಇದರ ಮರ್ಮವನ್ನರಿತು, ಅಲ್ಪ ವಿಷಯಗಳೆಂದು ಉಪೇಕ್ಷಿಸದೆ, ತಮ್ಮದೊಂದು ಕುಡಿನೋಟದಿಂದ ಇವುಗಳನ್ನು ಅಡಿಗಡಿಗೆ ವಿಚಾರಕ್ಕೆ ತೆಗೆದುಕೊಳ್ಳುವುದರಿಂದ, ಪ್ರಜಾಜನರ ಮಾನ, ಪ್ರಾಣ, ಧನ, ಭೋಗ, ಭಾಗ್ಯ, ಸಂಪತ್ತಿಗಳು ಕಾಮಕಾಕರರ ಕೈಗೆ ಸಿಕ್ಕಿ ಹೋಗದಂತೆ ಭದ್ರವಾ ಗಿದ್ದು, ದೇಶೋನ್ನತಿಗೆ ಕಾರಣವಾಗುವುವು. ಇದನ್ನು ನಮ್ಮವರು ನಿಜ ವೆಂದು ನಿರ್ಧರಿಸಬೇಕಾದರೆ, ಇತ್ತ ಗಮನವಿರಲಿ. ವಿಷಹರಪುರದ ಅಂಚೆಮನೆಯು (Post office) ಅಷ್ಟು ಪ್ರಧಾ ನಸ್ಥಾನ (Head-office) ವಲ್ಲದಿದ್ದರೂ, ಮಧ್ಯವರ್ಗಕ್ಕೆ ಸೇರಿದು (Sub-office) ದಾಗಿರುವುದು, ಇಲ್ಲಿಯ ಕಾರ್ ಭಾಗಗಳು, ತಕ್ಕ ಮಟ್ಟಿಗೆ ತೃಪ್ತಿಕರವಾಗಿ ನಡೆಯುತ್ತಿರುವುವು, ಅಧಿಕಾರಿಯು ಸತ್ಯ, ಕ್ಷಮಾ, ಕೃತಜ್ಞತೆಗಳಿಗೆ ಬದ್ದನಾಗಿ, ವಿಷಹರಪುರಕ್ಕೆ ಆಪ್ತ ಮಿತ್ರನಂತಿ ರುವನು. ಇಂದು ಈತನು, ಸಾಯಂಕಾಲ ನಾಲ್ಕು ಗಂಟೆಯ ವೇಳೆಯಲ್ಲಿ ಒಬ್ಬನೇ ಕುಳಿತು ಏನನ್ನೋ ಬರೆಯುತ್ತಿದ್ದನು, ಈತನ ಒಳಿಗೆ ಗೌರವ ಸ್ಥನಾದ ಸರದಾರನೊಬ್ಬನು ಬಂದು, ವಂದನಾಪೂರ್ವಕವಾಗಿ-' ಪ್ರವೇ ಶಕ್ಕೆ ಅಪ್ಪಣೆಯುಂಟೋ ?' ಎಂದು ಬೆಸಗೊಂಡನು. ಪೋಸ್ಟ್ ಮಾಸ್ಟರ್ - ತಲೆಯೆತ್ತಿ ನೋಡಿ ಕೌತುಕದಿಂದ ಪ್ರತಿವಂದನೆ ಮಾಡಿ-' ಬರಬಹುದು ; ಆಕ್ಷೇಪವಿಲ್ಲ' ಎಂದು ಹೇಳಿದನು.