ಪುಟ:ದಕ್ಷಕನ್ಯಾ .djvu/೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರುಚಿಯೇ ಇಲ್ಲವೆಂದು ಹೇಳುವುದು ಸರಿಯಲ್ಲ, ಅಭಿರುಚಿಯನ್ನುಂಟು ಮಾಡುವ ರಸವಿಸರವು ಪಸರಿಸದಿದೆಯೆಂದು ಮಾತ್ರ ಹೇಳಬಹುದು. ಅಲ್ಲದೆ ದೇಶೀಯರಲ್ಲಿ ಭಾಷಾಭಿಮಾನವು ಹೆಚ್ಚದಿರಲು ಕಾರಣರಾರು ? ಏತ ರಿಂದ ? ಗ್ರಂಥಕರ್ತರಲ್ಲಿ ದೇಶಹಿತೇಚ್ಛೆಯು ಚೆನ್ನಾಗಿದ್ದರೆ, ದೇಶೀಯರ ದೇಶಾಭಿಮಾನಕ್ಕೂ, ಭಾಷಾಪ್ರಸಾರಕ್ಕೂ ಕೊರತೆಯೇನು ? ವಾಚನಾಭಿ ರುಚಿ, ಪ್ರೋತ್ಸಾಹ, ದೇಶಭಕ್ತಿಗಳನ್ನು ಹೆಚ್ಚಿಸಬಲ್ಲ ಪ್ರತಿಭಾಶಕ್ತಿಯು ನಮ್ಮಲ್ಲಿದ್ದರೆ, ನಾವು ಕೋರದೆಯೇ ಅವರು ನಮ್ಮನ್ನು ಪ್ರೋತ್ಸಾಹಿಸು ವರು , ಅದಿಲ್ಲವಾದರೆ, ಕೂಗಿಕೂಗಿ ಅತ್ತು ಬೇಸತ್ತರೂ, ನಮ್ಮನ್ನು ಕೇಳು ವವರಾರು ?” ಈ ಬಗೆಯ ಕರಿನ ಸಮಸ್ಯೆಗಳೇ ನಮ್ಮ ಮುಂದೆ ನಿಲ್ಲು ವುವು. ಇದರಲ್ಲಿಯೂ ನಮ್ಮ ಅವಚ್ಛತೆಯೇ ಮುಂದಾಗಿರುವುದರಿಂದ ಇದರ ಪ್ರಸ್ತಾಪವನ್ನೂ ಬಿಡಬೇಕಾಯಿತು. 3. ದ್ರೋಹಿಗಳ ಅಪಕೃತಿಯ ಮೇಲೆ ಬಿದ್ದ ಆರೋಪವು, ಅದೂ ತೃಪ್ತಿಕರವಾಗಲಾರದು. “ ವಿಷಧರರೂ ಇರಬಹುದು ; ಕಂಟಕ ಗಳನ್ನೊಡ್ಡಿದ್ದರೆಂದೂ ಹೇಳಬಹುದು, ಆದರೆ, ಅಷ್ಟು ಮಾತ್ರಕ್ಕೆ ಹೆದರಿ, ಕೈಕೊಂಡ ಕಾಠ್ಯವನ್ನು ಬಿಡುವುದು ಸರಿಯಲ್ಲ: ಕಾಕ್ಯದ ಪೂರಾಸರ ವಿಚಾರವನ್ನು ಮುಂದಾಗಿಯೇ ನಿರ್ಧರಿಸಿದ್ದು, ಕರ್ತವ್ಯವನ್ನು ನಿರ್ವಹಿಸು ವುದೇ ಕಾರ ಧುರಂಧರರ ಲಕ್ಷಣವು, ಅಲ್ಲದಿದ್ದರೆ ಈ ಪ್ರಯತ್ನದಲ್ಲಿ ಪ್ರವರ್ತಿಸುವುದೇ ತಪ್ಪು.” ಹೀಗೆಂಬ ವಜ್ರಪಾತವೇ ನಮ್ಮ ಮೇಲೆ ಬೀಳು ವದು, ಇದಕ್ಕಿನ್ನೇನು ಹೇಳುವ ? 4, ಶಾರೀರಕ ಮತ್ತು ಮಾನಸಿಕ ಕ್ಷೇಶಗಳೆಂದರೆ, ಅವು ಯಾರ ಬಿಟ್ಟುದಲ್ಲ, ಅದನ್ನೇ ಪ್ರಾಮುಖ್ಯವಾಗಿಟ್ಟರೆ ಕೇಳುವವರಾರು ? * ಕಾಠ್ಯಕ್ಷೇತ್ರದಲ್ಲಿ ಕಾಲಿಟ್ಟ ಬಳಿಕ ಕಾಲಕ್ಕೆ ತಕ್ಕಂತೆ, ಕಾಠ್ಯಕ್ರಮಗಳನ್ನು ಗೊತ್ತು ಮಾಡಿಟ್ಟು, ತಕ್ಕಮಟ್ಟಿಗೆ ವಿಶ್ರಾಂತಿಯನ್ನು ಹೊಂದಿಯೇ ಇರ ಬೇಕಲ್ಲದೆ, ಬೇರೆಬೇರೆ ಕಾರಣಗಳನ್ನು ಮುಂದಿಡುವುದು ಮೂರ್ಖತನವು..?