ಪುಟ:ದಕ್ಷಕನ್ಯಾ .djvu/೧೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದ ಕ ಕ ನ್ಯಾ ೧೪೯

  • ಭಕ್ತವತ್ಸಲ ' ನೆಂಬ ಬಿರುದುಳ್ಳ ಆ ಭಗವಂತನ ಮಹಿಮೆ ಯೇ ಅತ್ಯದ್ಭುತವಲ್ಲವೇ ! ಸಂದೇಹವೇನು ? ಅದು ಈ ವೇಳೆಯಲ್ಲಿ, ಈ ರೂಪದಲ್ಲಿ, ಈ ಪಾತ್ರಗಳಲ್ಲಿ, ಈ ಬಗೆಯಲ್ಲಿ ತನ್ನ ಕಟಾಕ್ಷಕ್ಕೆ ಪಾತ್ರರಾ ದವರಿಗೆ ಪ್ರಸನ್ನ ವಾಗುವುದೆಂಬುದನ್ನು ಯಾರೂ ತಿಳಿದು ಹೇಳಲಾರರು ! ಶೀಲ, ಸತ್ಯ, ಧರ್ಮ, ಭೂತದಯೆಗಳೆಲ್ಲಿರುವುವೋ, ಅಲ್ಲಿಯೇ ಇದು ಸಾಕ್ಷಾತ್ಕರಿಸಿರುವುದೆಂಬುದನ್ನು ಮಾತ್ರ ಹೇಳಬಹುದು. ಹಾಗಾದರೆ, ಅದು ಸತೀಕುಲಾದರ್ಶ ರಮಣಿಯಾದ ನಮ್ಮ ಸುನಂದೆಯ ಪ್ರತ್ಯಕ್ಷಾನು ಭವಕ್ಕೆ ಬರಲು ಅಭ್ಯಂತರವೇನು ?
  • ನೋಡುತ್ತ ಕುಳಿತಿದ್ದ ಸುನಂದೆಯು ಮಾರ್ಗಕ್ಕೆ ಸವಿಾಪವಾಗಿ, ವಿಸ್ತಾರವಾದುದೊಂದು ಗುಡಾರ (ಪಟಗೃಹ-Tent) ವಿದ್ದುದನ್ನು ಕಂಡು, ಚಕಿತಳಾಗಿ ಮತ್ತೆ ನೋಡಿದಳು. ಗುಡಾರದ ಸುತ್ತುಮುತ್ತಲೂ ಕುದುರೆ, ಕಾಲಾಳುಗಳು ಸುತ್ತವರಿದಿದ್ದಂತೆ ತಿಳಿದುಬಂದಿತ್ತು, ಮತ್ತೆಯೂ ನೋಡಿದಳು ; ಗುಡಾರದ ಮುಂದೆ, ಮುಖ್ಯ ಸೇವಕನೊಡನೆ ಮಾತಾಡುತ್ತ ನಿಂತಿದ್ದ ಅಧಿಕಾರಿಯನ್ನು ಕಂಡಳು ; ಸಂತಸಗೊಂಡಳು, ಅವರು ತನ್ನ ಆಸ್ತಬಂಧುವರ್ಗಕ್ಕೆ ಸೇರಿದವರೆಂದೂ, ಇಲ್ಲದಿದ್ದರೆ-ತನ್ನ ಮನಸ್ಸಿಗೆ ಹೀಗೆ ಸಮಾಧಾನವಾಗಲು ಕಾರಣವಿರುತ್ತಿರಲಿಲ್ಲವೆಂದೂ ನೆನೆದಳು ; ಭಗವಂತ ನಿಗೆ ಭಕ್ತಿಪೂರ್ವಕವಾಗಿ ವಂದಿಸಿದಳು. ಮೋಹನ' ಅಮ್ಮ ! ಅದಾರು, ಅಲ್ಲಿ ನಿಂತಿರುವವರು ? ತಾತನಂತೆಯೇ

ಕಾಣುತ್ತಿಲ್ಲವೇ ?” ಎಂದು ಗೋಪಾಲನ ಕಡೆಗೆ ತಿರುಗಿ' ಗೋ ಪಾಲ ! ಅದಾರು ? ನೋಡಿಬಾ' ಎಂದು ಹೇಳಿದನು. ಗೋಪಾಲ-ಇವರಾರೋ ಸರ್ಕಸ್ ಕಂಪೆನಿಯವರಾಗಿರಬೇಕು, ಗೊಲ್ಲರ - ಪಾಳ್ಯದಲ್ಲಿಯೇ ತಂಗಬೇಕಲ್ಲದೆ, ಈ ರಾತ್ರಿ ಇನ್ನೆಲ್ಲಿಯ ಉಳಿ ಯುವಂತಿಲ್ಲ. ಸುನಂದೆ-ಯಾರೇ ಆಗಿರಲಿ, ಹೋಗಿ ನೋಡಿ-ವಿಚಾರಿಸಿ ಬರಬಾರದೆ ? ಬಂಡಿಯನ್ನು ನಿಲ್ಲಿಸು.