ಪುಟ:ದಕ್ಷಕನ್ಯಾ .djvu/೧೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫L ಸ ತಿ ಹಿ ' ಷಿ ಣಿ ಯನ್ನು ಮುತ್ತಿ, ದೊಣ್ಣೆಗಳನ್ನು ಬೀಸಿದರು, ಆದರೂ ಬಂಡಿಯಲ್ಲಿದ್ದ ವರು ಉಸಿರೆತ್ತದೆ, ನೋಡದೆಯೇ ಇದ್ದರು. ಇವರ ಈ ಬಗೆಯ ಧೈಯ್ಯಕ್ಕೆ ಕಾರಣವೇನೆಂಬುದನ್ನು ತಿಳಿಯದೆ, ಕಳ್ಳರ ಮುಂದಾಳು ಕಿಡಿಕಿಡಿಯಾಗಿ ಬಂದು-' ಬಾಗಿಲನ್ನು ತೆಗೆ, ಕೆಳಗಿಳಿ ; ಇಲ್ಲದಿದ್ದರೆ, ಸಾಯುವೆ.' ಉತ್ತರ-ಇಳಿದರೆ ಸಾಯುವುದಿಲ್ಲವೋ ? ಮುಂದಾಳು-ಉಳಿದರೂ ಉಳಿಯಬಹುದು, ಆದರೆ, ಸಾಯುವವರೆಗೂ ನಮ್ಮ ಸೆರೆಯಲ್ಲಿರಬೇಕು. ಉತ್ತರ-ಹಾಗೆಂದಿಗೂ ಆಗಲಾರದೆಂದು ತಿಳಿ, ಗಲಭೆಮಾಡದೆ ಹೊರಟು ಹೋಗು. ಮುಂದಾಳು' ಹುಂ ! ಹುಂ !! ಏನೆಂದೆ, ಹೊರಟುಹೋಗಬೇಕೇ ? ಆಗಬಹುದು.' ಎಂದು ಹೇಳಿ, ಬಾಗಿಲನ್ನು ಬಲವಾಗಿ ಹಿಡಿದೆಳೆ ದನು. ಬಾಗಿಲು ತೆರೆದುಹೋಯಿತು. ತೆರೆಯಲ್ಪಟ್ರೊಡನೆಯೇ, ಬಂಡಿಯಲ್ಲಿ ಉರಿಯುತ್ತಿದ್ದ ಪ್ರಕಾಶಮಾನವಾದ ದೀಪದ (Gaslight) ತೀಕ್ಷ್ಯಕಿರಣವು ಆ ಪ್ರಾಂತವನ್ನೇ ಆಕ್ರಮಿಸಿ, ನಿಂತಿ ದ್ದವರೆಲ್ಲರ ಕಣ್ಣುಗಳನ್ನೂ ಮುಚ್ಚಿಸಿತು. ಕಳ್ಳರು ಉಸಿರೆತ್ತದೆ ಭ್ರಾಂತರಾಗಿ ನಿಂತರು. ಇವರ ಭ್ರಾಂತಿಯಲ್ಲಿಯೇ ಬಂಡಿಯಲ್ಲಿ ಕುಳಿತಿದ್ದವರು, ಕೆಳಕ್ಕೆ ಧುಮ್ಮಿಕ್ಕಿದರು. ಮೋಹನಕುಮಾರನಾಗಿ ದವನು, ಕಳ್ಳರನ್ನು ಕೂಗಿ ಹೇಳಿದನು- ಉನ್ಮತ್ತ ವಾನರರೇ ! ಕುರುಡರಾದಿರೋ ?-ಗತಜೀವಿಗಳಾದಿರೋ ? ಏಕೆ ನಿಂತಿರಿ ? ಒನ್ನಿರಿ, ದೊಣ್ಣೆಗಳನ್ನೆತ್ತಿ ಹಾರಾಡಿರಿ.' - ಕಳ್ಳರೆಲ್ಲರೂ ವಿಕೃತಸ್ವರದಿಂದ ಕೂಗುತ್ತ ಕಣ್ಣೆರೆದು ನೋಡಿ ಧರು, ಸುನಂದೆಗೆ ಪ್ರತಿಯಾಗಿ ಪುರುಷನಿಗ್ರಹವೇ ಸಾಕ್ಷಾತ್ಕರಿಸಿದ್ದು ದನ್ನೂ, ತಮ್ಮ ಮೇಲೆ ಮತ್ತೊಬ್ಬ ಕುಮಾರನು ಉರವಣಿಸಿ ಬೀಳುತ್ತಿರುವ ದನ್ನೂ ಕಂಡರು. ಬಾಲಕನು, ಕೈಕೋವಿಯನ್ನು ಹಿಡಿದು ನಿಂತು, ಕಳ್ಳ