ಪುಟ:ದಕ್ಷಕನ್ಯಾ .djvu/೧೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದ ಆ ಕ ನ ೧೫೯ ಎಲ್ಲರಿಗೂ ಹೊರಡುವಂತೆ ಕಟ್ಟುಮಾಡಿದನು. ಕ್ಷಣಮಾತ್ರದಲ್ಲಿ, ಭಟರು ವೀರನಾದಮಾಡುತ್ತೆ ಸೆರೆಯಾಳುಗಳೊಡನೆ, ಧರ್ಮಪಾ ಲನ ಬಂಡಿಯನ್ನು ಸುತ್ತಿ ಹೊರಟುಹೋದರು. ಸುಹೃದರೇ ! ಕರ್ಮಫಲವನ್ನು ನೋಡಿದಿರೋ, ಹೇಗಿದೆ ? ಗೋಪಾಲನೇ ಮೊದ ಲಾದವರಿಗಾದ ಅವಸ್ಥೆಯನ್ನು ದೂರದಲ್ಲಿಯೇ ನಿಂತು ನೋಡುತ್ತಿದ್ದ ಬಲಿ ವಂತನೂ, ಸುಪಂಧನೂ ಹಾಗೆಯೇ ಹಿಂತಿರುಗಿ ಹೋಗಬೇಕಾಯಿತಲ್ಲದೆ ಹತ್ತಿರಕ್ಕೆ ಬಂದು, ತಮ್ಮ ವರನ್ನು ಬಿಡಿಸುವಷ್ಟರ ಧೈಯ್ಯವು, ಅವರಲ್ಲಿ ಉಂಟಾಗಿರಲಿಲ್ಲ. ಮನಸ್ಸು ನಿರ್ಮಲವಾಗಿದ್ದರಲ್ಲವೇ, ಧೈರವೂ ಕುಂದದಿ ರುವುದು ? ಹಾಗಿಲ್ಲದೆ ಮನಸ್ಸು-ದುರಭಿಮಾನದಿಂದ ಬೀಗಿಹೋಗಿದ್ದರೆ, ಹೇಗಾದೀತು ? ಹೇಗೂ, ನಮ್ಮ ವರಲ್ಲಿ ಗೋಪಾಲನಂತಹ ದ್ರೋಹಿಗಳಿರು ವುದಾದರೆ, ಅವರು ಇನ್ನಾದರೂ, ತಮಗಾಗುವ ಫಲವಿಂತಹದೆಂದು ತಿಳಿದು, ಜ್ಞಾನವನ್ನು ಹೊಂದಬೇಕೆಂಬುದೇ ಇಂದಿನ ಐಂದ್ರಜಾಲದ ಉದ್ದೇಶವಾಗಿದೆ.