ಪುಟ:ದಕ್ಷಕನ್ಯಾ .djvu/೧೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದ ಕ ಕ ನ ೧೬೧ ದಿದ್ದ ಜಮೀನ್ದಾರನು ಈಗ ಹೋಗಬೇಕೆಂದರೆ, ಹೇಗಾಗಬಹುದು ? ಈ ರಾತ್ರಿ, ಈತನಿಗೆ ನಿದ್ದೆಯೇ ಬರಲಿಲ್ಲ ಹನ್ನೆರಡು ಗಂಟೆಯವರೆಗೂ ಓದು ತಿದ್ದು, ಆ ಬಳಿಕ ಸಾಕಾಗಿ ಎದ್ದು ಬಂದು, ಹಾಸಿಗೆಯ ಮೇಲೆ ಮಲಗಿ ದನು. ಎಷ್ಟು ಹೊತ್ತಾದರೂ ಚಿತ್ತಚಾಂಚಲ್ಯದಿಂದ ನಿದ್ದೆ ಬಾರದಿದ್ದಿತು. ಕಡೆಗೆ ಕಣ್ಣು ಬೀಗಿದಂತಾಗಿ ಹಾಗೆಯೇ ಮಲಗಿದನು, ಹೆಚ್ಚು ಹೊತ್ತು ಹಾಗೆ ಮಲಗಿರಲಾಗಲಿಲ್ಲ. ಅರ್ಧಗಂಟೆಯೊಳಗಾಗಿಯೇ-ಹೊರಗೆ ಯಾರೋ ತಿರುಗಿದಂತೆ ಶಬ್ದ ವಾಯಿತು. ದಿಗಿಲುಬಿದ್ದೆದ್ದು, ಮಲಗಿದ್ದ ಕಿರುಮನೆಯ ಬೀದಿಕಡೆಯ ಬಾಗಿಲನ್ನು ತೆರೆದು, ಹೊರಗೆ ಬಂದು, ಸುತ್ತ ಮುತ್ತಲ ಪ್ರದೇಶವೆಲ್ಲವನ್ನೂ ಚೆನ್ನಾಗಿ ಹುಡುಕಿನೋಡಿದನು. ಯಾರೂ ಇರಲಿಲ್ಲ. ಕಡೆಗೆ ಬೀದಿಯ ಬಾಗಿಲಬಳಿಗೆ ಬಂದು ನೋಡಿದನು. ಬಾಗಿಲು ತೆರೆದುಹೋಗಿದ್ದಿತು ; ಜಗಲಿಯಮೇಲೆ ವಿಷಕಂರನೂ ಇರಲಿಲ್ಲ, ಹೊತ್ತು ನಾಲ್ಕೂವರೆ ಗಂಟೆಯಾಗಿದ್ದಿತು. ಜಮೀನ್ದಾರನು ಸಂಶಯದಿಂದ ಬೀದಿಯ ಬಾಗಿಲನ್ನು ಹಾಕಿ, ವಿಲಾಸಭವನವನ್ನೇರಿ, ಗಂಗೆಯು ಮಲಗುವ ಮನೆಗೆ ಬಂದು ನೋಡಿದನು. ಗಂಗೆಯು ಕಿರುಮನೆಯ ಕದಗಳನ್ನು ಹಾಕಿ ಕೊಂಡು ಮಲಗಿದ್ದಳು. ತಾರಾಪತಿಯು ಕದಗಳನ್ನು ತಟ್ಟಿ ಕೂಗಿದನು. ಈತನ ಕೂಗಿಗೆ ಮಲಗಿದ್ದ ಗಂಗೆಯು, ಗಾಬರಿಯಿಂದೆದ್ದು ಬಂದು ಬಾಗಿ ಲನ್ನು ತೆರೆದು-' ವಿಚಾರವೇನು ?” ಎಂದು ಕೇಳಿದಳು. ತಾರಾಪತಿ-ಕಿರುಮನೆಯೊಳಗಡೆಯನ್ನು ಒಮ್ಮೆ ಚೆನ್ನಾಗಿ ನೋಡಿ, ಏನೂ ವ್ಯತ್ಯಾಸವಿಲ್ಲವೆಂದು ತಿಳಿದು, ಬಳಿಕ- ನೀನೇನು, ಕುಂಭ ಕರ್ಣನ ಮರಿಯಾಗಿರುವೆ ! ಎಷ್ಟು ಕೂಗಿದರೂ ಎಚ್ಚರವಿಲ್ಲ. ಹೀಗೂ ಮಲಗುವರೇನು ?' ಗಂಗೆ-ನಾನೇನು ಮಾಡಲಿ ! ನಿದ್ರಾಂಗನೆಯು ನಿಮ್ಮಲ್ಲಿ ಆಗ್ರಹಿಸಿದ್ದು, ನನ್ನಲ್ಲಿ ಅನುಗ್ರಹ ಮಾಡಿದರೆ ಮತ್ತೇನು ಮಾಡಬೇಕು ? ಹಾಗೂ ನಾನು ರಾತ್ರಿಯಲ್ಲಿ ನಿಮ್ಮೊಡನೆ ಮಾತನಾಡುತ್ತಿದ್ದು ಬಂದವಳು 11