ಪುಟ:ದಕ್ಷಕನ್ಯಾ .djvu/೧೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧Lf ದ ಕ ಕ ನ್ಯಾ ಯಮುನೆಯು ಹೊರಟುಹೋದುದರಿಂದ, ಗೃಹಕಾರ್ಯವಿಚಾರ ಗಳೆಲ್ಲವೂ ಗಂಗೆಯ ಪಾಲಿಗೆ ಬಿದ್ದು ವು, ಅವುಗಳಲ್ಲಿಯೂ ಮುಖ್ಯವಾ ದುದೆಂದರೆ, ಅತ್ತೆಯ ಉಪಚಾರವು, ಹೇಗೆಂದರೆ -ಗಂಗೆಯು ಮೊದಲಿ ನಂತೆ ಈಗ ವಿಲಾಸಭವನದಲ್ಲಿಯೇ ಇರುವುದಿಲ್ಲ ; ದಿನದಿನಕ್ಕೂ ಗೃಹಕಾ ರ್ಯಗಳಲ್ಲಿ ಅಧಿಕವಾಗಿ ಆಸಕ್ತಿ ಹೊಂದುತ್ತಿರುವಳು. ಅತ್ತೆಯ ಉಪ ಚಾರವಿಚಾರಗಳಿಗೆ ಮತ್ತಾರನ್ನಾದರೂ ಗೊತ್ತುಮಾಡುವೆನೆಂದ ಪತಿಯ ಮಾತನ್ನು ತಡೆದು, ಅದು ತನಗೆ ಸೇರಿದ ಕಾರ್ಯವಾದುದರಿಂದ-ತಾನೇ ಮಾಡುವೆನೆಂದು ಹೇಳಿ, ಶ್ರದ್ದೆಯನ್ನು ವಹಿಸಿರುವುದರಿಂದ ಅತ್ತೆಯ ಪ್ರಾ ಣಪದಕವಾಗಿ ಗೌರವಿಸಲ್ಪಡುತ್ತಿರುವಳು, ಪತ್ನಿ ಯ ಈ ಬಗೆಯಾದ ಸೌಜನ್ಯವು, ಜಮೀನ್ದಾರನ ಮನಸ್ಸಿಗೆ ಎಷ್ಟು ಆಹ್ಲಾದವನ್ನು ಂಟುಮಾಡು ಬಹುದೋ-ಅನುಭವಶಾಲಿಗಳೇ ಊಹಿಸಿ ತಿಳಿಯಬೇಕು. ಯಮುನೆಯನ್ನು ಹೊರಡಿಸಿ ಇಂದಿಗೆ ನಾಲೈದು ತಿಂಗಳಾದುವು. ಗಂಗೆಯು ಈ ಸಾಯಂಕಾಲದಲ್ಲಿ, ಅತ್ತೆಯಮುಂದೆ ಕುಳಿತು, ಏನನ್ನೋ ಓದುತ್ತಿದ್ದಳು, ಹೊರಗೆ ಸಂಚಾರಕ್ಕೆ ಹೋಗಿದ್ದ ಜಮೀನ್ದಾರನು, ಇನ್ನೂ ಬಂದಿರಲಿಲ್ಲ. ಗಂಗೆಯು ಕುಳಿತ ಸ್ವಲ್ಪ ಹೊತ್ತಿನಲ್ಲಿಯೇ ದೂತನೊ ಬ್ಬನು ಬಂದು, ಅಂಟುಹಾಕಿದ್ದ ಪತ್ರವೊಂದನ್ನು ಗಂಗೆಯ ಕೈಯಲ್ಲಿತ್ತು, ನಿಲ್ಲದೆ ಹೊರಟುಹೋದನು. ಗಂಗೆಯು ಕುತೂಹಲದಿಂದ, ಪತ್ರದ ಮೇಗ ಡೆ ಬರೆದಿದ್ದ ವಿಳಾಸವನ್ನು ನೋಡಿದಳು. ತನಗಾಗಿಯೇ ಬರೆಯಲ್ಪಟ್ಟು ದೆಂದು ತಿಳಿದಿತು. ಬರಹವಾರದೆಂದು ನೋಡಿದಳು ; ತನ್ನ ಪತಿಯ ಕೈಬರ ಹವೆಂದೇ ನಿರ್ಧರವಾಯಿತು. ಗಂಗೆಗೆ ಕಳವಳವುಂಟಾಯಿತು. . ಇದೇ ನಿದು ! ಎಂದೂ ಇಲ್ಲದ ಪತ್ರವ್ಯವಹಾರವು ಇಂದು ಉಂಟಾಗಿರಲು ಕಾರ ಣವೇನು ? ಸಮಾಚಾರವೇನಾಗಿರಬೇಕು ? ತೋಟದಿಂದ ಹೀಗೆ ಬರೆದಟ್ಟುವ ಪ್ರಸಂಗವಾದರೂ ಎಂತಹದು ? ' ಹೀಗೆಂದು ತನ್ನಲ್ಲಿಯೇ ಚಿಂತಿಸಿ ಚಿಂತಿಸಿ, ನಡುನಡುಗುತ್ತ, ಪತ್ರವನ್ನು ತೆರೆದು ಮನದಲ್ಲಿಯೇ ಓದಿದಳು. ಪತ್ರದ ವಿಷಯವಾವುದೆಂಬುದನ್ನು ತಿಳಿಯಬೇಕಲ್ಲವೇ ? ಆಗಲಿ.