ಪುಟ:ದಕ್ಷಕನ್ಯಾ .djvu/೧೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೭೧ ದ ಕ ಕ ನ್ಯಾ ನನ್ನ ಪತ್ನಿ, ಸಹಧರ್ಮಿಣಿ ಮತ್ತೂ ಸಹಚಾರಿಣಿ, ನಿನ್ನ ಸಮಕ್ಷದಲ್ಲಿ ಬಂದುಹೇಳಿ, ನಿನ್ನ ನ್ಯೂ ಜತೆಗೊಂಡು ಬರಬೇಕೆಂಬ ಅಭಿಪ್ರಾಯವಿದ್ದರೂ, ಈಗ ಅಷ್ಟಕ್ಕೆ ಅವಕಾಶವಿರುವುದಿಲ್ಲ. ಈ ಸಂಗತಿಯನ್ನು ಈಗಲೇ ಹೀಗೆಂದು ಹೇಳುವುದರಿಂದ, ಅಮ್ಮಾಯಿಯವರು ಬಹುವಾಗಿ ವ್ಯಥೆ ಪಡುವರು, ಅದು ನನಗೆ ಸಮ್ಮತವಲ್ಲ, ಇದೂ ಅಲ್ಲದೆ, ಕುಮಾರನ ಅಭ್ಯು ದಯವನ್ನು ಕಾಣುವವರೆಗೂ, ಸುಕ್ಕು ಹಿಡಿದು ದಿಕ್ಕೆಟ್ಟ ಈ ಮೋರೆ ಯನ್ನು, ನಾನು ಈ ಊರಲ್ಲಿ ಮತ್ತಾರಿಗೂ ತೋರುವುದಿಲ್ಲವೆಂದು ಸಂಕ ಲ್ಪಿಸಿರುವೆನು, ಈ ಎಲ್ಲಾ ಕಾರಣಗಳಿಂದಲೂ, ನಾನು ಇಲ್ಲಿಂದ ಹೀಗೆ ಯೇ ದುರ್ಗಾಪುರಕ್ಕೆ ಹೊರಡುವವನಾಗಿರುವೆನು, ದೈವಸಂಕಲ್ಪದಲ್ಲಿ ಹೇಗಾಗಬೇಕೆಂದಿದೆಯೋ-ಬಲ್ಲವರಾರು ? ನಮ್ಮ ಗ್ರಹಚಾರವು ಬಹು ಕ್ರೂರವಾಗಿರುವುದೆಂಬುದೇನೋ ನಿಜವು ಇನ್ನು ಹೆಚ್ಚು ಬರೆಯಲು ವೇಳೆಯಿಲ್ಲ ಗಂಗೆ ! ಮನೆಯ ಆಡಳಿ ತಗಳಲ್ಲಿ ಸಂಪೂರ್ಣ ಗಮನವಿರಬೇಕು ; ಅಮ್ಮಊಾಯವರು ಶೋಕ ಕಾ ತರರಾಗದಂತೆ ನೋಡಿಕೊಳ್ಳುತ್ತಿರಬೇಕು, ಉಳಿದ ವಿಚಾರಗಳಿಗೆ ದುರಾ ಪುರವನ್ನು ಸೇರಿದ ಕೂಡಲೇ ಬರೆಯುವೆನು, ಸಕಲವನ್ನೂ ತಿಳಿದ ನಿನಗೆ ಪ್ರತ್ಯೇಕವಾಗಿ ಹೇಳುವುದಿನ್ನೇನಿದೆ ? ಇತಿ-ನಿನ್ನ ಮನೋವಲ್ಲಭ, ತಾರಾಪತಿ.' ಗಂಗೆಯು ಕಡೆಯವರೆಗೂ ಪತ್ರವನ್ನು ಓದಿ ಮುಗಿಯಿಸಿ, ಕುಳಿತಂತೆಯೇ ಸ್ಮೃತಿ ತಪ್ಪಿದಳು. ಚಂದ್ರಮತಿ-ಆತುರದಿಂದ-' ಗಂಗೆ ! ಸಮಾಚಾರವೇನು ? ಯಾರ ಕಾಗ ದವು ? ಹೀಗೇಕೆ ಕುಳಿತೆ ?' ಗಂಗೆ--ನಿಟ್ಟುಸಿರಿಟ್ಟು-' ಮೋಹನನಿಗೂ, ಅಕ್ಕನಿಗೂ ತುಂಬಾ ಕಾಯಿಲೆ ಯಂತೆ, ಕೂಡಲೇ ಹೊರಟುಬರಬೇಕೆಂಬ ಪತ್ರವು ಬಂದಿದೆ