ಪುಟ:ದಕ್ಷಕನ್ಯಾ .djvu/೧೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೯೭೨ ಸ ತಿ ಹಿ ಷಿ ಣಿ ಯಂತೆ ಅದಕ್ಕಾಗಿ ತೋಟದಿಂದ ಹಾಗೆಯೇ ಹೊರಟುಹೋಗು ವೆನೆಂದೂ, ಮನೆಯನ್ನು ಎಚ್ಚರಿಕೆಯಿಂದ ನೋಡಿಕೊಳ್ಳುತ್ತಿರ ಬೇಕೆಂದೂ, ದುರ್ಗಾಪುರಕ್ಕೆ ಹೋಗಿ ಸೇರಿದ ಕೂಡಲೇ ವಿವರ ವಾಗಿ ಪತ್ರವನ್ನು ಬರೆದು ಕಳುಹುವೆನೆಂದೂ, ಯಜಮಾನರು ತೋಟದಿಂದ ಬರೆದು ಕಳುಹಿರುವರು. ಚಂದ್ರಮತಿ--ಹಾ ! ಹಾಗೆಂದರೇನು ? ಹಾಗೆಯೇ ಹೊರಟುಹೋದನೇ ? ಗಂಗೆ -- ಗಾಬರಿಪಡಬೇಡಿ. ವಿಚಾರಿಸಿ ತಿಳಿದು ಹೇಳುತ್ತೇನೆ' ಎಂದು ಹೇಳಿ ಅಲ್ಲಿರದೆ ಎದ್ದು, ಬೀದಿಯ ಕಡೆಗೆ ಬಂದಳು. ಪತ್ರವನ್ನು ತಂದಿತ್ತ ಸೇವಕನು ಅಲ್ಲಿರಲಿಲ್ಲ, ಗಂಗೆಯು ಯೋಚಿಸುತ್ತ ನಿಂತು ಹೊರಗೆ ನೋಡಿದಳು, ಓಲಗಶಾಲೆಯ ಮುಂಗಡೆಯಲ್ಲಿ ನಿಂತು ಮಾತನಾಡುತ್ತಿದ್ದ ಯಶವಂತ-ವಾಸುದೇವರ ಸ್ಥಿತಿಯನ್ನು , ದೂರ ದಿಂದ ನೋಡಿ ಶಂಕೆಗೊಂಡಳು ; ಸ್ವಲ್ಪ ಹೊತ್ತು ಹಾಗೆಯೇ ನಿಂತು ಕೇಳುತ್ತಿದ್ದಳು. ಆದರೆ, ಇವಳು ತಮ್ಮನ್ನು ನೋಡುತ್ತಿರುವ ರೀತಿಯನ್ನು ಕಂಡ ಯಶವಂತನು, ವಾಸುದೇವನನ್ನೊಡಗೊಂಡು ಹೊರಟುಹೋದನು. ಗಂಗೆಯ ಅನುಮಾನವು ದ್ವಿಗುಣವಾಯಿತು. ಆದರೆ, ಈ ಅಂತರಂಗವನ್ನು ಚೆನ್ನಾಗಿ ತಿಳಿದು ಕೊಳ್ಳುವುದಕ್ಕೆ ಮೊದಲೇ, ಗದ್ದಲವೆಬ್ಬಿಸುವುದರಿಂದ ತೊಂದರೆಯುಂಟಾಗುವು ದೆಂದು ಚಿಂತಿಸಿ, ಉಸಿರೆತ್ತದೆ ಸುಮ್ಮನಿದ್ದು, ರಾತ್ರಿಯ ಊಟದ ಕಾಟವನ್ನು ಮುಗಿಸಿ ಬಂದು, ತನ್ನ ಕಿರುಮನೆಯಲ್ಲಿ ಮಲಗಿ ದಳು, ನಿದ್ದೆ ಬರಲಿಲ್ಲ, ಒಂದೆರಡು ಗಂಟೆಯವರೆಗೂ ಹಾಗೆಯೇ ಒದ್ದಾಡುತ್ತಿದ್ದು ಬಳಿಕ, ಸ್ವಲ್ಪ ಮೈಮರೆತಳು. ಇವಳ ವಿಸ್ಕೃತಿಯನ್ನೇ ಕಾದಿದ್ದ ಕನಸು, ಇದೇ ಸಮಯ ವೆಂದು ಕಾಣಿಸಿಕೊಂಡಿತು. ಅದೇನೆಂಬುದನ್ನು ಕೆಳಗೆ ವಿವರಿಸುವುದರಿಂದ ತಿಳಿಯಲಾದೀತಲ್ಲವೇ ?