ಪುಟ:ದಕ್ಷಕನ್ಯಾ .djvu/೧೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದ ಕ ಕ ನ್ಯಾ ದ ೧೭ತಿ' ಅಂಧಕಾರಾವೃತವಾದ ರಾತ್ರಿಯಲ್ಲಿ, ಭಯಂಕರವಾದ ಸಾಗರ ಮಧ್ಯದಲ್ಲಿ ಸಣ್ಣದೊಂದು ನಾವೆಯು, ಮಂದಗಮನದಿಂದ ನಡೆಯುತ್ತಿ ದ್ವಿತು. ನಾವೆಯ ಒಂದು ಕಡೆಯಲ್ಲಿ ಗಂಗೆಯೊಬ್ಬಳೇ ಕುಳಿತಿದ್ದಳು. ಮತ್ತೊಂದು ಕಡೆಯಲ್ಲಿ, ಬಲವಂತ-ಸುಸಂಧ-ಯಶವಂತ-ವಾಸುದೇವರು ಗಳು ಕುಳಿತಿದ್ದರು, ಯಶವಂತ-ವಾಸುದೇವರಿಬ್ಬರೂ ಜಮೀನ್ದಾರನನ್ನು ಹಗ್ಗಗಳಿಂದ ಬಿಗಿದುಹಾಕಿ, ನಾವೆಯ ಮುಂಗಡೆಯಲ್ಲಿ ಬಿಗಿದು ಕಟ್ಟಿದ್ದರು. ಸಾಗರದ ಅಲೆಗಳು, ವೇಗವಾಗಿ ಬಂದು ಇವನ ದೇಹವನ್ನು ಬಡಿಬಡಿದು ಸೀತವೇರಿ ಬೆರೆತುಹೋಗುವಂತೆ ಮಾಡುತ್ತಿದ್ದುವು. ಗಂಗೆಯು ನೋಡಿದಳು ; ಸಹಿಸಲಾಗಲಿಲ್ಲ. ಪತಿಯಬಳಿಗೆ ಧಾವಿಸಿ ಬರುತ್ತಿದ್ದಳು. ಆದರೆ, ಅಷ್ಟರಲ್ಲಿಯೇ ಸುಸಂಧ-ಬಲವಂತರು, ತಾರಾಪತಿ ಯನ್ನು ಕಟ್ಟುಗಳೊಡನೆಯೇ ಸಾಗರದಲ್ಲಿ ಕೆಡಹಿದರು, ತಾರಾಪತಿರಾ ಯನು ಮುಳುಗಿ ತೇಲಾಡುತ್ತಿದ್ದನು. ಗಂಗೆಯು ಚೀರಿದಳು, ಯಶವಂ ತನು, ವಾಸುದೇವನನ್ನು ಕುರಿತು- ನೀನಿನ್ನು ಇವಳನ್ನು ನಿನ್ನ ಇಷ್ಟಬಂ ದಲ್ಲಿಗೆ ಕರೆದೊಯ್ಯಬಹುದು.' ಎಂದು ಹೇಳಿ, ತಂದೆ-ತಮ್ಮಂದಿರ ಬಳಿ ಸಾರಿದನು. ವಾಸುದೇವನು, ಓಡಿಬಂದು ಗಂಗೆಯನ್ನು ಅಡ್ಡಗಟ್ಟಿ" ri೦ಗೆ ! ಇನ್ನೇಕೆ ಅಲ್ಲಿಗೆ ಹೋಗುವೆ ? ನನ್ನೊಡನೆ ಹೊರಟು ಬಾ.” ಎಂದು ಕೈಹಿಡಿದನು. ಗಂಗೆ-ಕ್ಷೇಶ-ರೋಷಗಳಿ೦ದ ಮೈಮರೆದು-ಕೈಬಿಡಿಸಿಕೊಂಡು, ಆರ್ತ ಸ್ವರದಿಂದ-' ಭಗವಂತ ! ಕಾಪಾಡು ! ಕಾಪಾಡು!! ಈ ದ್ರೋಹಿ ಗಳಿಂದ ನನ್ನನ್ನು ಪಾರುಮಾಡಿ ಕಾವಾಡು !!! ' ಎಂದು ಕೂಗಿ ದಳು. ಗಂಗೆಯ ಮಾತಿಗೆ ಉತ್ತರವಾಗಿ-' ಭಯವಿಲ್ಲ, ಕಾಪಾ ಡುವೆನು. ' ಎಂಬದೊಂದು ಘನಗಂಭೀರಧ್ವನಿಯು ಹೊರಟು ನಾವೆಯನ್ನು ವೇಗದಿಂದ ಮುಳುಗಿಸಿಬಿಟ್ಟಿತು, ಅದರ ಮಹತ್ತರ ವಾರ ರಭಸದಿಂದ ಭೀತಳಾದ ಗಂಗೆಯು-' ಅಯ್ಯೋ ! ಅನಿಷ್ಠ ಸಂಘಟನೆ !” ಎಂದು ಕೂಗುತ್ತ ಕರೆದುಬಿಟ್ಟಳು. -+ಆ+