ಪುಟ:ದಕ್ಷಕನ್ಯಾ .djvu/೧೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದ ೧೭೫ ದ ಕ ಕ ನ್ಯಾ ಹೆತ್ತ ತಾಯಿತಂದೆಗಳು ಹೆಣ್ಣು ಮಕ್ಕಳ ಲಾಲನೆ-ಪಾಲನೆಗಳಿಗೆ ಮಾತ್ರವೇ ಹಕ್ಕುದಾರರು, ಅವರ ಸಹವಾಸ-ಸಂಸರ್ಗವೇ ಮೊದಲಾದ ಸಮಸ್ತ ಭೋಗಾನುಭವಕ್ಕೂ, ಅವರ ಪತಿರಾಜರೇ ಬಾಧ್ಯರಾಗಿರುವರು. ಮರಣಾನತರವೂಂ ಈಸತಿಪತಿಯರ ಸಂಬಂಧ-ಬಾಧ್ಯತೆಗಳು ನಾಶವಾಗ ಲಾರವು. ಸತಿಯರ ಜೀವನಸರಸ್ವರಾದ ಪತಿರಾಜರಿಗೆ ಹಿತವರಾರಾ ರುಂಟೋ, ಅವರೆ -ಇವರಿಗೂ ಹಿತವರೆಂದು ತಿಳಿಯಬೇಕು. ಅವ ರನ್ನು ತಮ್ಮ ಕೋಣ-ಕವಡುಗಳಿಂದ ಹಿಂಸೆಪಡಿಸಬೇಕೆಂದು ಕೋರುವುದು ಸರಿಯಲ್ಲ. ಇದೆಲ್ಲಕ್ಕೂ ಸುಶಿಕ್ಷಾರೂಪವಾದ ವಿದ್ಯಾರ್ಜನೆಯೇ ಮೂಲಾ ಧಾರಸೂತ್ರವು, ಸುಶಿಕ್ಷೆಯಿಲ್ಲದ ವಿದ್ಯೆಯು, ಮನೋವಿಕಲ್ಪಕ್ಕೆ ಕಾರಣ ವಾಗಿ, ವಿಪರೀತ ಫಲವನ್ನೇ ಉಂಟುಮಾಡಬಹುದು, ಅದಿರಲಿ. ತಾಯಿ ! ಸಕಲವನ್ನೂ ತಿಳಿದಿರುವ ನಿನಗೆ ಇದನ್ನು ನಾನು ಹೇಳ ಬೇಕಾದುದಿಲ್ಲ, ಆದರೂ ಪತ್ರವನ್ನು ಕಡೆಮುಟ್ಟುವವರೆಗೂ ತಾಳ್ಮೆ ಯಿಂದ ಓದಿ, ತಿಳಿಯಬೇಕೆಂಬುದೇ ನನ್ನ ಆಶಯವು, ಪ್ರಕೃತವಿಚಾರದಲ್ಲಿ ನಿನ್ನಿಂದ ಆವಶ್ಯಕವಾಗಿ ನಡೆಯಬೇಕಾದುದೊಂದುಂಟು. ಅದೇನೆಂದು ಕೇಳುವೆಯಲ್ಲವೆ? ಹಾಗಾದರೆ, ಬೆದರದೆ, ಬೇಸರಿಸದೆ, ಮನಮುಟ್ಟಿ ಕೇಳುವೆ. ತಾಯಿಾ ! ನಿನ್ನ ಸ್ವಾಮಿಯು ದ್ರೋಹಿಗಳ ಮಾಯಾಜಾಲಕ್ಕೆ ಸಿಕ್ಕಿ, ಉತ್ಮ ಮಣಾವಸ್ಥೆಯಲ್ಲಿರುವನು. ಈಗ ಆತನ ಸವಿಾಪದಲ್ಲಿ ಹಿತ್ಸೆ ಷಿಗಳಾರೂ ಕಾಣುತ್ತಿಲ್ಲ, ಪ್ರಾಣಾಪಾಯವಾಗದಂತೆ ಆತನನ್ನು ಸಂರ ಕ್ಷಿಸಿಕೊಳ್ಳಲು, ಲೋಕೋದ್ಧಾರಕರು ಅಹೋರಾತ್ರಿಯ ಕಣ್ಣೆರೆದು ಕಾದಿರುತ್ತಿರುವರು. ಆದರೂ, ದ್ರೋಹಿಗಳ ಅತ್ಯಾಚಾರಗಳನ್ನು ಪ್ರತ್ಯ ಕ್ಷಪ್ರಮಾಣಗಳಿಂದ ಕಂಡುಹಿಡಿದಲ್ಲದೆ, ನಿಮಗಾರಿಗೂ ಕಲ್ಯಾಣವಾಗು ವಂತಿಲ್ಲ, ಅವರಲ್ಲಿ ಒಬ್ಬರು ತಲೆತಪ್ಪಿಸಿಕೊಂಡರೂ, ನಿಮ್ಮ ಮಾನ-ಪ್ರಾಣ ಧನಗಳಿಗೆ ಆತಂಕವು ತಪ್ಪಿದುದಲ್ಲವೆಂಬುದು ದೃಢವಾಗಿರಲಿ, ಅವರಾರು ? ಎಲ್ಲಿ ? ಹೇಗೆಂಬುದನ್ನು ನಿನಗೆ ನಾವು ಬೇರೆ ಹೇಳಬೇಕಾಗಿಲ್ಲವಷ್ಟೆ.