ಪುಟ:ದಕ್ಷಕನ್ಯಾ .djvu/೧೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೭೬ ದ ಕ ಕ ನ್ಯಾ ಬಾಲಕ-ಜಾನ್ಮಾರರು ಕಳ್ಳರ ಕೈಗೆ ಸಿಕ್ಕಿರುವರೆಂದೂ, ಅವರನ್ನು ಬಿಡಿಸಿಕೊಂಡು ಬರಲು, ಯಶವಂತರಾಯನೊಡನೆ ತಾವು ಹೊರಟೆ ರುವೆವೆಂದೂ ನಿಮ್ಮಲ್ಲಿ ಹೇಳಿ, ಮನೆಯಕಡೆ ಗಮನವಿರಬೇಕೆಂದೂ, ಚಿಂತಿಸಬೇಕಾದುದಿಲ್ಲವೆಂದೂ ಎಚ್ಚರಿಸಿ ಬರುವಂತೆ ನನಗೆ ಕಟ್ಟು ಮಾಡಿರುವರು. ಗಂಗೆ--ಖತಿಯಿಂದ ನಿಟ್ಟುಸಿರಿಟ್ಟು-ಅಪ್ಪ ! ನಿಮ್ಮ ಕೊಬ್ಬಿದ ಜಮಾ ದಾರನಿಗೆ ನನ್ನ ವಂದನೆಗಳಿರಲಿ, ಅವನ ದುರಾಶೆಯು ಕಲ್ಪಾಂತ ರಕ್ಕೂ ಫಲಕಾರಿಯಲ್ಲವೆಂದು ಚೆನ್ನಾಗಿ ತಿಳಿಯಲಿ, ಆತನ ದುರಾ ಚಾರ ರೋಗಕ್ಕೆ ತಕ್ಕ ಚಿಕಿತ್ಸೆಯ ಜಾಗ್ರತೆಯಾಗಿ ನಡೆಯಿಸ ಲ್ಪಡುವುದೆಂಬುದನ್ನು ತಿಳಿದು ಎಚ್ಚೆತ್ತಿರಲಿ, ನನಗೆ ಚಿಂತೆಗೆ ಕಾರ ಣವಿಲ್ಲ. ಸ್ವಾಮಿದ್ರೋಹಿಗಳಿಬ್ಬರೂ ಹೊರಟಾಗಲೇ, ಜಾನಾ ರರ ಜೀವಿತಾಶೆಯು ಕೊನೆಗಂಡಿರಬಹುದೆಂದು ಗುಣಿಸುತ್ತಿರುವ ನನ್ನಲ್ಲಿ ಮತ್ತಾವಚಿಂತೆಗೂ ಎಡೆಯಿರುವುದಿಲ್ಲ, ಸತ್ಯ-ಧಮ್ಮಗಳಿಗೆ ಜಯವು ನಿತ್ಯವಾಗಿರುವ ಪಕ್ಷದಲ್ಲಿ, ಜಮೀನ್ದಾರರ ಸತ್ಯಸಂಧ ತೆಯೇ ಅವರನ್ನು ಕಾಪಾಡುವುದೆಂದು ನಾನು ನಂಬಿರುವೆನು. ಇನ್ನು ಹೊರಟುಹೋಗು.' ಹೀಗೆ ಹೇಳುತ್ತಿದ್ದಂತೆಯೇ ಗಂಗೆ ಯು ಸ್ಮೃತಿ ತಪ್ಪಿ ಕೆಳಗೆ ಬಿದ್ದಳು. ಬಾಲಕನು ಅನುಕಂಪದಿಂದ ಗಂಗೆಗೆ ಶೈತ್ಯೋಪಚಾರ ಮಾಡುತ್ತ-' ತಾಯಿಾ ! ಕಳವಳಿಸಬಾ ರದು, ನಾನು ನಿನಗೆ ಅಪಿತನಾಗಿ ಬಂದಿಲ್ಲ, ನಿನ್ನ ಕಲ್ಯಾಣಾ ಕಾಂಕ್ಷಿಯಾಗಿ ಬಂದಿರುವ ನನ್ನನ್ನು ನಿನ್ನ ಚಿರಂಜೀವಿಯೆಂದೇ, ತಿಳಿದು, ಸಮಾಧಾನವನ್ನು ಹೊಂದಬೇಕು, ಹೀಗಿರಲಾಗದು.' ಗಂಗೆ-ವಿಸ್ಮಯ-ಕುತೂಹಲಗಳಿಂದ ನೋಡುತ್ತ ಅಪ್ಪ ! ನೀನಾರಕಡೆ ಯವನೋ, ನಿನ್ನ ಹೆಸರೇನೋ, ಯಾವ ಕಾರಕ್ಕೆಂದು ಬಂದಿರು ವೆಯೋ ನನಗದೊಂದೂ ತಿಳಿಯದು, ಆದರೂ ನಿನ್ನಲ್ಲಿ ನನಗೆ ಒಂದು ಬಗೆಯದ ವಿಶ್ವಾಸವುಂಟಾಗಿರುವುದು, ಕಾರಣವೇನು ? 12