ಪುಟ:ದಕ್ಷಕನ್ಯಾ .djvu/೧೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದ ಕ ಕ ನ ೧೮ ಕುಂದಿದ್ದಿತು. ಅಡಿಗಡಿಗೂ ಅಂತಸ್ತಾಪದಿಂದ ನಿಟ್ಟುಸಿರು ತಾನೇತಾನಾಗಿ ಹೊರಹೊರಡುತ್ತಿದ್ದಿತು. ಇವಳ ಬಳಿಯಲ್ಲಿ ಮತ್ತಾರೂ ಇರಲಿಲ್ಲ. ಗಂಗೆಯ ನಿರೀಕ್ಷೆಯಂತೆ ಅತ್ಯಲ್ಪಾವಧಿಯಲ್ಲಿಯೇ ಕೃತಾಂತನು, ದ್ವಿಚಕ್ರ Bicycle) ವಾಹಕನಾಗಿ ಬಂದಿಳಿದು, ಮುಖದಲ್ಲಿ ಸುರಿಯುತ್ತಿ ದ್ದ ಬೆವರನ್ನು ಕರವಸ್ಯದಿಂದೊರಸಿಕೊಳ್ಳುತ್ತ, ಗಂಗೆಯಮುಂದೆ ಕುಳಿತನು. ಗಂಗೆ-ಅಣ್ಣ ! ನೀನು ಬರುವುದು ಇಷ್ಟು ಹೊತ್ತಾದುದರಿಂದ, ನನ್ನ - ಮನಸ್ಸು ತಲ್ಲಣಿಸುತ್ತಿದ್ದಿತು. ಕೃತಾಂತ-ಬೇಗ ಬರಬೇಕೆಂದೇ ಹೋಗಿದ್ದೆನು; ಆದರೆ, ನಮ್ಮ ಪ್ರಯಾ ಣಕ್ಕೆ ಬೇಕಾಗುವ ಸಾಧನಗಳನ್ನೂ, ಇಲ್ಲಿ ಮುಂದೆ ಮಾಡಬೇ ಕಾದ ಕಾರ್ಯಗಳಿಗೆ ತಕ್ಕ ಏರ್ಪಾಟನ್ನೂ ಕ್ರಮಪಡಿಸಿಕೊಂಡು ಬರುವುದರಲ್ಲಿ ವಿಳಂಬವಾಯಿತು ಪ್ರಯಾಣಕ್ಕಭ್ಯಂತರವಿಲ್ಲವಷ್ಟೆ? ಗಂಗೆ ಅಭ್ಯಂತರವೇನೂ ಇಲ್ಲ. " ಮಾತುಲನು ಮೃತ್ಯು ಶಖ್ಯೆಯಲ್ಲಿರುವು - ದರಿಂದ ನೋಡಿ ನಾಳೆಯೇ ಬರುವೆನೆಂದು,' ಅತ್ತೆಯವರಿಂದ ಅಪ್ಪಣೆ ಹೊಂದಿದೆನು. ಇನ್ನು ಹೊರಡುವುದೊಂದೇ ತಡೆ. ಇಷ್ಟರಲ್ಲಿಯೇ ಹತ್ತು-ಹನ್ನೆರಡುಮಂದಿ ಪೊಲೀಸರು, ಎರಡು ಕದುರೆಬಂಡಿಗಳೊಡನೆ ಬಂದು ಸೇರಿದರು ಕೃತಾಂತನು ಗಂಗೆಯನ್ನು ಕುರಿತು-' ತಾಯಿಾ ! ಇನ್ನು ಜಾಗ್ರತೆಯಾಗಿ ಬಂಡಿಯನ್ನೇರಬೇಕು. ಬಂಡಿಯಾಳು ನಮ್ಮ ವನು ; ಯೋಗ್ಯನಾದವನು, ಯಾವ ಸಂಶಯವೂ ಇಲ್ಲದೆ ಬಂಡಿಯಲ್ಲಿ ಕುಳಿತು ಹೊರಡಬಹುದು. ನಾನು ಇಲ್ಲಿ ಮಾಡಬೇ ಕಾದ ಕೆಲಸಗಳನ್ನು ಸರಿಯಾಗಿ ಮಾಡಿ, ಮುಂದೆ ಬೇಕಾಗುವ ಸಲಕರಣೆ ಗಳೊಡನೆ ನಿನ್ನ ಹಿಂದೆಯೇ ಬಂದು ಸೇರುವೆನು.' ಗಂಗೆಯು ಧಿಗ್ಗನೆದ್ದು ಹೋಗಿ ಅತ್ತೆಯ ಪಾದಗಳಿಗೆರಗಿ, ಹೊರಡು ವೆನೆಂದು ಹೇಳಿ, ಅವಸರದಿಂದ ಬಂದು ಬಂಡಿಯನ್ನೇರಿದಳು, ಕೃತಾಂತನ ಅನುಮತಿಯಿಂದ ಬಂಡಿಯ ಜತೆಯಲ್ಲಿ ನಾಲ್ವರು ಪೊಲೀಸರು ಜಾಗರೂಕ ತೆಯಿಂದ ನಡೆದರು.