ಪುಟ:ದಕ್ಷಕನ್ಯಾ .djvu/೨೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧i೧ ದ ಕ ಕ ನ್ಯಾ ತಾರಾಪತಿ-ತಿರಸ್ಕಾರದಿಂದ ನೋಡುತ್ತ .' ಭಂಡ ! ಪಾಮರ !! ಕೃತ !!! ನಿನಗೆ ಎಂತಹ ನರಕಪ್ರಾಪ್ತಿಯಾಗುವುದೋ ಊಹಿಸಿ ಮಾತನಾಡು, ನನ್ನನ್ನು ಚಿತ್ರವಧೆಗೆ ಗುರಿಮಾಡಬೇಕೆಂದರೆ, ನಿನ್ನಿಂ ದಾದೀತೇ ? ಒಂದುವೇಳೆ ಹಾಗಾಗುವ ಪಕ್ಷದಲ್ಲಿಯೂ, ಅದೂ ನನ್ನ ಪ್ರಾರಬ್ಧ ವೆನ್ನಿ ಸಲ್ಪಡುವುದಲ್ಲದೆ ನಿನ್ನ ದೆಂದು ಹೇಳಲಾರೆನು. ಶಿಕ್ಷರಕ್ಷಕನೂ, ನ್ಯಾಯಾನ್ಯಾಯ ವಿಚಾರಕನೂ ಅದ ಭಗ ವಂತನೊಬ್ಬನಿರುವನು.' ಎಂದು ಹೇಳಿ ಕಣ್ಣು ಮುಚ್ಚಿದನು. ಯಶವಂತ-ಕ್ರೋಧಾವೇಶದಿಂದ ಮೈಮರೆದು, ಬಲವಂತನ ಕೈಯಲ್ಲಿದ್ದ ಕತ್ತಿಯನ್ನು ತೆಗೆದುಕೊಂಡು ಹಲ್ಕಡಿಯುತ್ತ-' ಇದೋ ಕತ್ತಿ ಬೀಳುತ್ತಿದೆ. ಚಿತ್ರವಧೆ ಯಾರಿಂದಾಗುವುದೋ ನೋಡು !” ಎಂದು ಕತ್ತಿಯನ್ನು ರಭಸದಿಂದ ಮೇಲಕ್ಕೆತ್ತಿದನು. ತಾರಾಪತಿಗೆ ಸ್ಮೃತಿ ತಪ್ಪಿದುದರಿಂದ ಉಸಿರೆತ್ತಲಿಲ್ಲ. ಉಳಿದ ಮೂವರೂ ಯಶವಂತನ ಕ್ರೋಧಾವೇಶ-ಮತ್ತು ಜಮೀನ್ದಾರನ ಚಿತ್ರವಧೆಗಳಿಗೆ ಮೋಹಿತರಾಗಿ ಅತ್ತಿತ್ತ ನೋಡದೆ ನಿಂತಿ ದ್ದರು. ಸ್ಮತಿತಪ್ಪಿ ಮಲಗಿದ್ದ ಜಾನ್ಮಾರನಿಗೆ ಈಗ ಸಹಾಯಕರಾರು ? ಎಲ್ಲಿ ? ಪುರಾಕೃತ ಪುಣ್ಯಫಲವಿಗೆಲ್ಲಿ ? ಮುಂದೆ ಬಂದು ನಿಲ್ಲಬಾರದೇ ! ತಾರಾಪತಿಯ ಪ್ರಾಣಸಂಕಟಕಾಲದಲ್ಲಿ ಉದಾಸೀನವೂ ಸರಿಯೇ ? ಮೇಲ ಕೆತ್ತಿದ ಕತ್ತಿ, ಕುತ್ತಿಗೆಗೆ ಬೀಳುವುದೆಷ್ಟು ಹೊತ್ತು ? ಹಾ ಕಷ್ಟ' ಕಷ್ಟ! ಸತ್ಯಾತ್ಮರಿಗೊದವಿದ ವಿಪತ್ತು ಸೂಕ್ಷ್ಮರೂಪದಿಂದಲೇ ಪರಿಹರವಾಗುವದ ಲ್ಲವೇ ? ನಿಜ ! ಲೋಕಬಂಧು-ತಾರಾಪತಿರಾಯನನ್ನು ಕೊಲ್ಲಬೇಕೆಂದು ಯಶವಂತನು ಮೇಲಕ್ಕೆತ್ತಿದ ಕತ್ತಿ, ಕೆಳಗೆ ಬೀಳಲಿಲ್ಲ. ಎತ್ತುವುದಕ್ಕೆ ಸರಿಯಾಗಿ ಕತ್ತಿಯು ಮತ್ತೊಬ್ಬರಿಂದ ತೆಗೆದುಕೊಳ್ಳಲ್ಪಟ್ಟಿತಲ್ಲದೆ, ಯಶ ವಂತನ ಬೆನ್ನಿಗೆ ಪ್ರಹಾರವೂ, ಪ್ರಹಾರದೊಡನೆ-ಗರ್ಭನಿರ್ಭೆದವಾಗುವಂತೆ ಕರ್ಕಶಸ್ವರದಿಂದ 'ಅಧಮಾಧಮ ! ನೀನಾರನ್ನು ಕೊಲ್ಲುವೆ? ನಿನ್ನ ತಲೆಯ