ಪುಟ:ದಕ್ಷಕನ್ಯಾ .djvu/೨೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೯೪ ಸ 3 ಹಿ ತ್ಯ ಷಿ ಣಿ ಸಾಲದುದಕ್ಕೆ ಗಂಗೆಯ ವಧೆಯು ಬೇರೆ ಮುಂದಿರುವುದು, ಪಾಪ ! ತಾರಾಪತಿಗೆ ಆಗ ಉಂಟಾದ ಯಾತನೆಯನ್ನು ಹೇಗೆ ಹೇಳಿ ತಿಳಿಸುವ ? ತಾರಾಪತಿರಾಯನು, ಯಾತನಾಸ್ವರದಿಂದ-* ಅಯ್ಯೋ ! ಅನಾಹುತ ! ಹತ್ಯೆ 11 ಕೊಲೆ-ಕೊಲೆ-ಕೊಲೆ !!! ' ಎಂದು ಕೂಗಿದನು, ಬಲವಂ. ತನು ತಾರಾಪತಿಯ ಬಾಯನ್ನು ಬಲವಾಗಿ ಮುಚ್ಚಿದನು. ಯಶವಂತನು 'ಇನ್ನು ಆದುದಾಗಲಿ ; ಈ ಸಾರಿ ತೀರಿಸಿಬಿಡುವೆನು.' ಎಂದು ಮತ್ತೊಮ್ಮೆ ಖಡ್ಗವನ್ನು ಮೇಲಕ್ಕೆತ್ತಿದನು, ಈ ಸಂದರ್ಭದಲ್ಲಿಯೇ ಭಯಂಕರ ಶಬ್ದ ದಿಂದ ಕಿಟಕಿಯು ಕಳಚಿ ಕೆಳಗೆ ಬಿದ್ದು ಹೋಯಿತು. ಕಿಟಕಿಯು ಬದ್ರೋ ಡನೆಯೇ ಕಿಟಕಿಯಕಡೆಯಿಂದ ಕೈಕೋವಿಯ (Revolver) ಮದ್ದು ಹಾರಿಬಂದು, ವಾಸುದೇವನ ಬೆನ್ನಿಗೆ ತಗಲಿ, ಅವನನ್ನು ನೆಲಕ್ಕುರುಳಿಸಿತು. ಯಶವಂತನ ಎತ್ತಿದಕೈ ಹಾಗೆಯೇ ನಿಂತಿತು, ಎಲ್ಲರೂ ಇದೇನೆಂದು ತಿರು ಗಿನೋಡಿದರು, ಕಿಟಕಿಯ ಕಡೆಯಿಂದ ಹೊರಟುಬಂದ ಪ್ರಕಾಶಮಾನ ವಾದ ದೀಪದ ಕಾಂತಿವಿಶೇಷವು ಕಿರುಮನೆಯೆಲ್ಲವನ್ನೂ ಸುತ್ತಿ, ಎಲ್ಲರಕ ಣ್ಣುಗಳನ್ನೂ ಮುಚ್ಚಿಸಿತು. ಪಾಪ ! ಬಲವಂತಾದ್ಯರು ಹುಚ್ಚರಂತಾಗಿ ವಿಕೃತಸ್ವರದಲ್ಲಿ ಅಯ್ಯಯ್ಯೋ, ಬೀಭತ್ಸ ವ್ಯಾಪಾರವೇ ! ನಮಗೇ ಸಾವು ಬಂದಿತೇ !!” ಎಂದು ಕೂಗಿ, ನಿಂತಂತೆಯೇ ಸ್ಮೃತಿತಪ್ಪಿ ಬಿದ್ದು ಬಿಟ್ಟರು.

  • erಳಿಗೆ