ಪುಟ:ದಕ್ಷಕನ್ಯಾ .djvu/೨೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೯L ಸ ತಿ ಹಿ ತ ಣಿ ಯಾಗಿರಬೇಕು ! ಈ ಸಂದಿಗ್ಧ ಸಮಯದಲ್ಲಿ, ಆತನ ಮುಖದಿಂದ ಹೊರ ಹೊರಡುತ್ತಿರುವ ವಿದ್ಯುಲ್ಲಹರಿಯು ಅವರ ಮನಸ್ಸನ್ನು ಭ್ರಾಂತಿಗೊಳಿಸು ವುದರಲ್ಲಿ ಆಶ್ಚರೈವೇನು ? ಎಲ್ಲರೂ ಹುಚ್ಚರಂತೆ, ಓಡಿಹೋಗಲು ಪ್ರಯತ್ನ ಪಟ್ಟರು. ಆದರೇನು ! ಅದಾದರೂ ಸಾಗಿತೇ ? ಇಲ್ಲ. ಬಾಗಿಲಬಳಿಯಲ್ಲಿ ನಿಂತು ಏಕಕಾಲದಲ್ಲಿ ಹತ್ತಿಪ್ಪತ್ತು ಮಂದಿಯನ್ನಾದರೂ ಸುಡುವಂತಹ ಕೈ ಕೋವಿಯನ್ನು ಹಿಡಿದಿದ್ದ ಧರ್ಮಪಾಲನನ್ನು ಕಂಡರು. ಇತ್ತ ಮಾರಿ ಯ ಭಯ ; ಅತ್ತ ಹೋತನ ಭಯ, ಮತ್ತೇನು ಮಾಡುವರು ? ತೇಜೋಹೀನರಾಗಿ ನಿಂತಲ್ಲಿಯೇ ನಿಂತರು. ಗಂಗೆ-ಧರ್ಮಪಾಲನಿಗೆ ಕೈಮುಗಿದು-' ಮಹಾತ್ಮನೇ ! ತ್ವರೆಮಾಡು, ಈ ಪಾಪಿಗಳಲ್ಲಿ ಇನ್ನು ಕನಿಕರವು ನನಗೆ ಸಹನಾತೀತವಾಗಿದೆ.' ಎಂದು ಕೂಗಿ ಹೇಳಿದಳು. ಧರ್ಮಪಾಲನು ಕಿರುನಗೆಯಿಂದ ತಲೆದೂಗಿ-' ತಾಯಿಾ ! ಕಾತರವೇಕೆ ? ಸ್ವಲ್ಪ ನಿಧಾನಿಸು.' ಎಂದು ಹೇಳಿ ಹೊರಗೆನೋಡಿ ಯಾರ ನೋ ಕರೆದನು. ಕೂಡಲೇ ಔಷಧಾದಿಗಳೊಡನೆ ವೈದ್ಯನೂ (Doctor) ಕೈಬೇಡಿಗಳನ್ನು ಹಿಡಿದಿದ್ದ ಸೇವಕನೂ ಕಿರುಮನೆಯೊಳ ಹೊಕ್ಕರು. ಧರ್ಮಪಾಲ-'ವಂದನೆ, ಡಾಕ್ಟರ್‌ದೊರೆ ! ಜಮೀನ್ದಾರ್ ಲೋಕಬಂಧು ಗಳ ಉಪಚಾರವಾಗಲಿ ; ತ್ವರೆಪಡಿಸಿರಿ.” ಡಾಕ್ಟರನೂ ಪ್ರತಿವಂ ದನೆಮಾಡಿ ತಾರಾಪತಿಯು ಮಲಗಿದ್ದ ಮಂಚದಮೇಲೇರಿ ಕುಳಿತು, ಆತನ ಉಪಚಾರದಲ್ಲಿ ನಿರತನಾದನು. ಕೃತಾಂತನು ಧರ್ಮಪಾಲನ ಸಂಜ್ಞೆಯಂತೆ ಯಶವಂತನ ಕೈಯಲ್ಲಿದ್ದ ಖಡ್ಗವನ್ನು ಕಿತ್ತೆಸೆದು, ನಿಮಿಷಮಾತ್ರದಲ್ಲಿ ಸೇವಕನ ಕೈಯಲ್ಲಿದ್ದ ಬೇಡಿಗಳನ್ನು ತೆಗೆದು, ಬಲವಂತಾದಿ ನಾಲ್ವರಿಗೂ ತೊಡಿಸಿ, ಗಂಗೆಯು ಮತ್ತು ಧರ್ಮ ಪಾಲನು ತಲೆದೂಗುವಂತೆ ತನ್ನ ಕರಕೌಶಲವನ್ನು ಚೆನ್ನಾಗಿ ವ್ಯಕ್ತ ಪಡಿಸಿದನು.